




ಕುಶಾಲನಗರ ಏ.1 NEWS DESK : ಕುಶಾಲನಗರದ ಛಾಯಾಗ್ರಾಹಕ ಪ್ರಮೋದ್ ಅವರಿಗೆ ಇತ್ತೀಚಿಗೆ ಪೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ 4500 ರೂಪಾಯಿ ಬಿದ್ದು ಸಿಕ್ಕಿತ್ತು. ಅದನ್ನು ಅಲ್ಲಿಯ ಕರ್ನಾಟಕ ಬ್ಯಾಂಕ್ ಸಿಬ್ಬಂದಿಗಳಿಗೆ ತಿಳಿಸಿದ್ದರು. ಹಣ ಕಳೆದುಕೊಂಡಿದ್ದ ಹೇರೂರು ಗ್ರಾಮದ ಪ್ರಹ್ಲಾದ್ ಅವರು ದೂರವಾಣಿ ಮೂಲಕ ಪ್ರಮೋದ್ ಅವರನ್ನು ಸಂಪರ್ಕಿಸಿ, ಕಳೆದುಕೊಂಡಿರುವ ಹಣದ ಕುರಿತು ಮಾಹಿತಿ ನೀಡಿದ ಮೇರೆಗೆ 4500 ರೂಪಾಯಿ ಹಿಂದಿರುಗಿಸಿ ಸಾರ್ವಜನಿಕರ ಪ್ರಶಂಸೆಗೆ ಪ್ರಮೋದ್ ಪಾತ್ರರಾಗಿದ್ದಾರೆ.