




ಮಡಿಕೇರಿ ಏ.1 NEWS DESK : ಸೈನಿಕ ಶಾಲೆಯ ಎನ್‌ಸಿಸಿ ಘಟಕದ ವತಿಯಿಂದ ಕೂಡಿಗೆಯ ಸಂತೆ ಮಾರುಕಟ್ಟೆಯಲ್ಲಿ ಪರಿಸರ ಜಾಗೃತಿ ಮೂಡಿಸಲಾಯಿತು. ಶಾಲಾ ಮಕ್ಕಳು ತಯಾರಿಸಿದ ಪೇಪರ್ ಕವರ್ ಗಳನ್ನು ಮಾರುಕಟ್ಟೆಯಲ್ಲಿದ್ದ ಎಲ್ಲಾ ವ್ಯಾಪಾರಿಗಳಿಗೆ ವಿತರಿಸಲಾಯಿತು. ಮಾರುಕಟ್ಟೆಗೆ ಆಗಮಿಸಿದ್ದ ಗ್ರಾಹಕರಿಗೆ ಹಾಗೂ ವ್ಯಾಪಾರಿಗಳಿಗೆ ಪ್ಲಾಸ್ಟಿಕ್ ಕವರ್ ಬಳಕೆಯಿಂದ ಪರಿಸರದ ಮೇಲಾಗುವ ದುಷ್ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು. ಜೊತೆಗೆ ಎಲ್ಲಾ ಗ್ರಾಹಕರು ಮತ್ತು ವ್ಯಾಪಾರಿಗಳು ಮುಂದಿನ ದಿನಮಾನಗಳಲ್ಲಿ ಪೇಪರ್ ಕವರ್ ಬಳಕೆಯನ್ನು ಮಾಡಬೇಕೆಂದು ಮನವಿ ಮಾಡಿದರು. ಈ ಎಲ್ಲಾ ಪೇಪರ್ ಕವರ್ ಗಳನ್ನು ಶಾಲೆಯ ವಿದ್ಯಾರ್ಥಿಗಳೇ ತಯಾರು ಮಾಡಿ ವಿತರಿಸಿದರು.ಪೇಪರ್ ಕವರ್ ತಯಾರಿಕೆಯ ಕುರಿತು ಮಕ್ಕಳಿಗೆ ಕಾರ್ಯಾಗಾರವನ್ನು ನಡೆಸಲಾಯಿತು. ಕಾರ್ಯಾಗಾರದ ನೇತೃತ್ವವನ್ನು ಶಾಲೆಯ ದಿವ್ಯ ಸಿಂಗ್ ವಹಿಸಿದ್ದರು. ಮಕ್ಕಳು ಸಾವಿರಾರು ಪೇಪರ್ ಕವರ್ ಗಳನ್ನು ತಯಾರು ಮಾಡುವುದರೊಂದಿಗೆ, ಪರಿಸರದ ಸಂರಕ್ಷಣೆಯಲ್ಲಿ ಪೇಪರ್ ಕವರ್ ಗಳ ಮಹತ್ವವನ್ನು ಅರಿತರು. ಜೊತೆಗೆ ಪೇಪರ್ ಕವರ್ ಗಳನ್ನು ತಯಾರಿಸುತ್ತಾ ಕಲಿಕೆಯ ಅನುಭವವನ್ನು ಪಡೆದರು. ಈ ಸಂದರ್ಭ ಶಾಲೆಯ ಶಿಕ್ಷಕರಾದ ಶ್ರೀಲೇಖ, ರಾಜಗೋಲ್ಕರ್, ಅಶೋಕನ್, ದಾದಾ ಕುಸ್ನಾಳೆ, ನೂತನ, ಭೀಮಾಂಬಿಕ, ಸಲ್ಮಾ, ಸುಬೇದಾರ್ ಬಲ್ಬಿರ್ ಸಿಂಗ್, ಅವಲ್ದಾರ್ ಸುಮಿತ್ ಗುಂಡು ಹಾಗೂ ಶಾಲೆಯ 75 ವಿದ್ಯಾರ್ಥಿಗಳು ಹಾಜರಿದ್ದರು.