




ಕುಶಾಲನಗರ ಏ.1 NEWS DESK : ಭಕ್ತಕೋಟಿಯ ಪಾಲಿನ ನಡೆದಾಡುವ ಶ್ರೇಷ್ಠ ಸಂತ ಸಿದ್ದಗಂಗಾ ಮಠದ ಶ್ರೀ ಶಿವಕುಮಾರ ಸ್ವಾಮೀಜಿಯವರ ಸಾಧನೆಗಳಿಗೆ ನಾಡಿನ ಯಾವುದೇ ಮಠಗಳು ಸರಿಸಾಟಿಯಾಗಲಾರವು ಎಂದು ಕೊಡಗು ವಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ ಬಣ್ಣಿಸಿದರು. ಶ್ರೀ ಸಿದ್ದಗಂಗಾ ಭಕ್ತಮಂಡಳಿ ವತಿಯಿಂದಕುಶಾಲನಗರದಲ್ಲಿ ಹಮ್ಮಿಕೊಂಡಿದ್ದ ಡಾ.ಶಿವಕುಮಾರ ಸ್ವಾಮೀಜಿ ಯವರ 118ನೇ ಹುಟ್ಟುಹಬ್ಬದ ಅಂಗವಾಗಿ ಹಮ್ಮಿಕೊಂಡಿದ್ದ ಭಾವಚಿತ್ರ ಮೆರವಣಿಗೆ ಉದ್ಘಾಟಿಸಿ ಅವರು ಮಾತನಾಡಿದರು. ತ್ರಿವಿಧ ದಾಸೋಹಿ ಶ್ರೀಗಳ ಸಾಧನೆಯ ಮೂಲಕ ದೈವತ್ವಕ್ಕೇರಿದ ಮೇರುಪುರುಷರಾದರು. ಅವರ ಚಿಂತನೆಗಳು ಹಾಗೂ ಸಾಧನೆಗಳು ಈಗಿನ ತಲೆಮಾರಿನ ಯುವಕರಿಗೆ ಆದರ್ಶಪ್ರಾಯವಾಗಬೇಕು ಎಂದರು. ಭೂಮಿ ಮೇಲೆ ಆಕಸ್ಮಿಕವಾಗಿ ಬಂದ ಅತಿಥಿಗಳಾದ ನಾವು ಒಳಿತನ್ನು ಮಾಡುವ ಮೂಲಕ ಇಲ್ಲಿ ಸಂದರೆ ಅಲ್ಲಿಯೂ ಸಲ್ಲಬಹುದು ಎಂದು ಬಸವಣ್ಣನವರ ವಚನವನ್ನು ಉಲ್ಲೇಖಿಸಿ ಪ್ರವಚನ ನೀಡಿದರು. ಪಟ್ಟಣದ ಗಣಪತಿ ದೇವಾಲಯದಿಂದ ಹೊರಟ ಮೆರವಣಿಗೆ ರಥಬೀದಿಗಾಗಿ ಸೋಮೇಶ್ವರ ದೇವಾಲಯದವರೆಗೂ ಬಂದಿತು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು. ಇದೇ ಸಂದರ್ಭ ಎಲೆ ಮರೆಯ ಕಾಯಿಯಂತೆ ಸಾಮಾಜಿಕ ಸೇವೆಗೈವ ಮೂಲಕ ಜನರ ಮನದಲ್ಲಿರುವ ಕೊಡಗು ಬಿವಿ ಕುಲಪತಿ ಡಾ.ಅಶೋಕ್ ಸಂಗಪ್ಪ ಆಲೂರ, ಕುಶಾಲನಗರ ಪುರಸಭೆ ಮುಖ್ಯಾಧಿಕಾರಿ ಕೃಷ್ಣಪ್ರಸಾದ್, ಬಿಎಸ್ ಆರ್ ಉದ್ಯಮ ಸಂಸ್ಥೆಗಳನ್ನು ತೆರೆದು ನೂರಾರು ಬಡ ಕುಟುಂಬಗಳಿಗೆ ಊರುಗೋಲಾಗಿರುವ ಡಿ.ಎಸ್.ಜಗದೀಶ್, ಬಾಬಣ್ಣಾ, ಡಾ.ಸುಜಯ್ ಅವರನ್ನು ಇದೇ ಸಂದರ್ಭ ಸಿದ್ದಗಂಗಾ ಶ್ರೀಗಳ ಭಾವಚಿತ್ರಗಳನ್ನು ನೀಡಿ ಗೌರವಿಸಲಾಯಿತು. ಸಿದ್ದಗಂಗಾ ಭಕ್ತ ಮಂಡಳಿ ಸಂಚಾಲಕ ಕೆ.ಎಸ್.ಮೂರ್ತಿ, ಜಿಲ್ಲಾ ವೀರಶೈವ ಮಹಾಸಭಾ ಅಧ್ಯಕ್ಷ ಹೆಚ್.ವಿ.ಶಿವಪ್ಪ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷೆ ದೀಪಿಕಾ ಕರುಣ, ಕುಶಾಲನಗರ ತಾಲ್ಲೂಕು ವೀರಶೈವ ಸಮಾಜದ ಅಧ್ಯಕ್ಷ ಹೆಚ್.ಎಂ.ಮಧುಸೂದನ್, ನಗರಾಧ್ಯಕ್ಷ ಎಂ.ಎಸ್.ಶಿವಾನಂದ, ವಿವೇಕಾನಂದ ಶಿಕ್ಷಣ ಸಂಸ್ಥೆ ಅಧ್ಯಕ್ಷ ಎನ್.ಎನ್.ಶಂಭುಲಿಂಗಪ್ಪ, ಎಂ.ಬಿ.ಬಸವರಾಜು, ಮಡಿಕೇರಿ ರವೀಶ್, ತಾಲ್ಲೂಕು ಕದಳಿ ವೇದಿಕೆ ಅಧ್ಯಕ್ಷೆ ಹೇಮಲತಾ, ಅಕ್ಕನಬಳಗದ ಅಧ್ಯಕ್ಷೆ ಕಮಲಮ್ಮ, ಕಾರ್ಯದರ್ಶಿ ಮನುಜಗದೀಶ್, ಬೆಟ್ಟದಪುರ ಹೋಬಳಿ ಶಸಾಪ ಅಧ್ಯಕ್ಷ ಶಿವಕುಮಾರ್, ತೊರೆನೂರು ಚಂದ್ರಪ್ಪ, ಟಿ.ಬಿ.ಜಗದೀಶ್, ಕೆ.ಎಸ್.ಕೃಷ್ಣೇಗೌಡ, ಶಿವದೇವ್, ಹಿರಿಯರಾದ ವಿಜಯಾ ಪಾಲಾಕ್ಷ, ಟಿ.ಜಿ.ಪ್ರೇಮಕುಮಾರ್, ಸರೋಜಾ ಆರಾಧ್ಯ, ಲೇಖನಾ, ವೇದಾವತಿ, ಶಿಕ್ಷಕ ಬಸವರಾಜು, ಪುರಸಭೆ ಸದಸ್ಯ ಎಂ.ಬಿ.ಸುರೇಶ್, ಮೊದಲಾದವರಿದ್ದರು.