





ವಿರಾಜಪೇಟೆ ಏ.5 NEWSDESK : ವಿರಾಜಪೇಟೆಯ ಅಪ್ಪಯ್ಯ ಸ್ವಾಮಿ ರಸ್ತೆಯಲ್ಲಿರುವ ಪ್ರಜಾಪಿತ ಬ್ರಹ್ಮಕುಮಾರಿ ಈಶ್ವರೀಯ ವಿಶ್ವ ವಿದ್ಯಾಲಯ ಜ್ಞಾನಗಂಗಾ ಭವನ’ದಲ್ಲಿ ಏ.6 ರಿಂದ 8 ರವರೆಗೆ ಚಿಣ್ಣರ ಬೇಸಿಗೆ ಸಂಭ್ರಮ ಶಿಬಿರವನ್ನು ಏರ್ಪಡಿಸಲಾಗಿದೆ ಎಂದು ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ‘ಜ್ಞಾನಗಂಗಾ ಭವನ’ ಸೇವಾ ಕೇಂದ್ರದ ಮುಖ್ಯ ಸಂಚಾಲಕಿ ಬಿ.ಕೆ.ಕೋಮಲ ತಿಳಿಸಿದ್ದಾರೆ. ಮೂರು ದಿನಗಳ ಕಾಲ ನಡೆಯುವ ಶಿಬಿರದಲ್ಲಿ 8 ರಿಂದ 16 ವರ್ಷದೊಳಗಿನ ಮಕ್ಕಳು ಭಾಗವಹಿಸಬುದಾಗಿದೆ. ಶಿಬಿರವು ಬೆಳಿಗ್ಗೆ 10 ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ. ಶಿಬಿರದಲ್ಲಿ ವ್ಯಾಯಾಮ, ದ್ಯಾನ, ಸ್ವಚ್ಚ ಮನಸ್ಸು, ಸ್ವಚ್ಛ ಜೀವನದಿಂದ ಸ್ವಚ್ಚ ಭಾರತ, ಗೇಮ್ಸ್, ವ್ಯಕ್ತಿತ್ವ ವಿಕಸನ, ಆಲೋಚನೆಯ ನೆಲೆ, ಏಕಾಗ್ರತೆಯ ಕಲೆ, ಭಯದ ನಿವಾರಣೆ, ಧ್ಯಾನದ ಮಹತ್ವಿಕೆ, ಕ್ರಿಯೆಯಲ್ಲಿ ಆಲೋಚನೆಗಳು, ಮೌಲ್ಯಗಳು, ಗುಂಪು ಚಟುವಟಿಕೆಗಳು, ಒಳಾಂಗಣ, ಹೊರಾಂಗಣ ಆಟೋಟಗಳು ಸೇರಿದಂತೆ ಇತರ ಚಟುವಟಿಕೆಗಳು ನಡೆಯಲಿದೆ. ಆಸಕ್ತ ಮಕ್ಕಳು ನೋಂದಾವಣೆಗಾಗಿ 8105419822 ಸಂಖ್ಯೆಗೆ ಸಂಪರ್ಕಿಸುವಂತೆ ಕೋರಿದ್ದಾರೆ.