






ಮಡಿಕೇರಿ NEWS DESK ಏ.9 : ಕೂರ್ಗ್ ಕ್ರಿಕೆಟ್ ಫೌಂಡೇಶನ್ ವತಿಯಿಂದ ಪಾಲಿಬೆಟ್ಟದಲ್ಲಿ ನಡೆಯುತ್ತಿರುವ ಕೊಡವ ಕ್ರಿಕೆಟ್ ಲೆದರ್ ಬಾಲ್ ಪ್ರೀಮಿಯರ್ ಲೀಗ್ ಸಿಸನ್-2ರ 9ನೇ ದಿನದ ಪಂದ್ಯಾವಳಿಯಲ್ಲಿ ಟೀಮ್ ಕೂರ್ಗ್ ಯುನೈಟೆಡ್ ಹಾಗೂ ಟೀಮ್ ಪ್ರಗತಿ ಕ್ರಿಕೆಟರ್ಸ್ ತಂಡಗಳು ಗೆಲುವು ಸಾಧಿಸಿದವು. ಟೀಮ್ ಕೂರ್ಗ್ ಯುನೈಟೆಡ್ ಮತ್ತು ಟೀಮ್ ಕೊಡವ ಟ್ರೈಬ್ಸ್ ನಡುವೆ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಕೂರ್ಗ್ ಯುನೈಟೆಡ್ ತಂಡ 20 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್‌ಗಳನ್ನು ಕಳೆದುಕೊಂಡು 135 ರನ್‌ಗಳನ್ನು ಸೇರಿಸಿತು. ಇದನ್ನು ಬೆನ್ನೆಟ್ಟಿದ ಕೊಡವ ಟ್ರೈಬ್ಸ್ ತಂಡ 16.1 ಓವರ್‌ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು 96 ರನ್ ಗಳನ್ನಷ್ಟೇ ಸೇರಿಸಿ ಕೂರ್ಗ್ ಯುನೈಟೆಡ್ ಎದುರು ಸೋಲೊಪ್ಪಿಕೊಂಡಿತು. ಟಾಸ್ ಗೆದ್ದ ಕೊಡವ ಟ್ರೆöÊಬ್ಸ್ ತಂಡ ಮೊದಲು ಬೌಲಿಂಗ್ ಅನ್ನು ಆಯ್ದುಕೊಂಡಿತು. ಕೂರ್ಗ್ ಯುನೈಟೆಡ್ ನ ಅಟ್ರಂಗಡ ಶರತ್ ನಂಜಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಟೀಮ್ ಪ್ರಗತಿ ಕ್ರಿಕೆಟರ್ಸ್ ಮತ್ತು ಟೀಮ್ ಕೂರ್ಗ್ ಬ್ಲಾಸ್ಟರ್ಸ್ ನಡುವೆ ನಡೆದ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಪ್ರಗತಿ ಕ್ರಿಕೆಟರ್ಸ್ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 129 ರನ್ ಗಳನ್ನು ಗಳಿಸಿತು. ಇದನ್ನು ಬೆನ್ನಟ್ಟಿದ ಕೂರ್ಗ್ ಬ್ಲಾಸ್ಟರ್ಸ್ ತಂಡ 18 ಓವರ್ ಗಳಲ್ಲಿ ತನ್ನೆಲ್ಲಾ ವಿಕೆಟ್ ಗಳನ್ನು ಕಳೆದುಕೊಂಡು ಕೇವಲ 65 ರನ್‌ಗಳನ್ನು ಸೇರಿಸಿ ಸೋಲೊಪ್ಪಿಕೊಂಡಿತು. ಟೀಮ್ ಪ್ರಗತಿ ಕ್ರಿಕೆಟರ್ಸ್ನ ತೀತಮಾಡ ಅಭಿಮನ್ಯು ದೇವಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದುಕೊಂಡರು.