





ಸೋಮವಾರಪೇಟೆ NEWS DESK ಏ.9 : ಸೋಮವಾರಪೇಟೆ ಭಾಗದ ವಿವಿಧೆಡೆ ಬುಧವಾರ ಗುಡುಗು ಸಿಡಿಲಿನೊಂದಿಗೆ ಧಾರಾಕಾರ ಮಳೆಯಾಗಿದೆ. ಶಾಂತಳ್ಳಿ ಗ್ರಾಮದಲ್ಲಿ ಮನೆಗೆ ಸಿಡಿಲು ಬಡಿದು ಹಾನಿಯಾಗಿದೆ. ಗ್ರಾಮದ ಕೃಷಿಕ ಕೆ.ಎಂ.ಗಿರೀಶ್ ಅವರ ಮನೆಗೆ ಸಿಡಿಲು ಬಡಿದು, ಮನೆಯಲ್ಲಿದ್ದ ಟಿ.ವಿ., ಫ್ರಿಡ್ಜ್, ಕೂಲರ್, ವಿದ್ಯುತ್ ವಯರ್‌ಗಳು ಹಾನಿಗೀಡಾಗಿವೆ. ಮನೆಯೊಳಗೆ ಮನೆ ಮಂದಿಯಿದ್ದರೂ ಅದೃಷ್ಟವಶಾತ್ ಯಾವುದೇ ಹೆಚ್ಚಿನ ಅಪಾಯ ಸಂಭವಿಸಿಲ್ಲ.