






ಸಿದ್ದಾಪುರ ಏ.10 NEWS DESK : ನೆಲ್ಲಿಹುದಿಕೇರಿಯ ನಾಲ್ಕನೇ ವಾರ್ಡ್‌ನ ಲಕ್ಕಿ ಇಲೆವೆನ್ ಯುವಕ ಸಂಘ ನಡೆಸಿದ ಲಕ್ಕಿ ಇಲೆವೆನ್ ಪ್ರೀಮಿಯರ್ ಲೀಗ್‌ನಲ್ಲಿ ರಾಯಲ್ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಪಂದ್ಯಾವಳಿಯಲ್ಲಿ ವಾರ್ಡ್ ನೂರಕ್ಕೂ ಅಧಿಕ ಯುವಕರು ಪಂದ್ಯಾವಳಿಯಲ್ಲಿ ಪಾಲ್ಗೊಂಡಿದ್ದರು. 8 ತಂಡಗಳು ಭಾಗವಹಿಸಿದ್ದ ಪಂದ್ಯಾವಳಿಯ ರೋಚಕ ಫೈನಲ್ ಪಂದ್ಯಾಟದಲ್ಲಿ ಡ್ರೀಮ್ 46 ತಂಡವನ್ನು ಮಣಿಸಿದ ರಾಯಲ್ ಬ್ರದರ್ಸ್ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿತು. ಪೊನ್ನಂಪೇಟೆ ಹಾಗೂ ಮಾಲ್ದಾರೆ ಮಹಿಳಾ ತಂಡಗಳ ನಡುವೆ ಪ್ರದರ್ಶನ ಪಂದ್ಯ ನಡೆಯಿತು. ಮಾಲ್ದಾರೆಯ ಮಹಿಳಾ ತಂಡವು ಜಯಗಳಿಸಿತು. ಪುರುಷರ ಪಂದ್ಯಾವಳಿಯಲ್ಲಿ ವಿಜೇತರಾದ ಎರಡು ತಂಡಗಳಿಗೆ ಪ್ರಶಸ್ತಿ ಹಾಗೂ ನಗದು ಬಹುಮಾನ ನೀಡಲಾಯಿತು. ಪಂದ್ಯಾವಳಿಯ ಸರಣಿ ಶ್ರೇಷ್ಠನಾಗಿ నిధిలో ಅನಿಯನ್, ಫೈನಲ್ ಪಂದ್ಯದ ಪಂದ್ಯ ಪುರುಷೋತ್ತಮ ಪ್ರಶಸ್ತಿಯನ್ನು ಜೀಯದ್, ಉತ್ತಮ బౌలరా ಪ್ರಶಸ್ತಿಯನ್ನು ಅಜ್ಜಲ್. ಉತ್ತಮ ಕ್ಷೇತ್ರರಕ್ಷಕ ಪ್ರಶಸ್ತಿಯನ್ನು ನಯಾಜ್, ಉತ್ತಮ ಬ್ಯಾಟ್ಸ್‌ಮನ್ ಆಗಿ ನಿಖಿಲ್, ಉತ್ತಮ ಗೂಟ ರಕ್ಷಕನಾಗಿ ಜಾಫರ್, ಭವಿಷ್ಯದ ಆಟಗಾರನಾಗಿ ರಫೀಕ್, ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಕ್ರೀಡಾಪಟು ನಿಖಿಲ್ ದಾಸ್, ಉತ್ತಮ ಹಿಡಿತಗಾರನಾಗಿ ಸಲಹುದ್ದೀನ್ ಮುಸ್ತಫಾ, ಉತ್ತಮ ತಂಡವಾಗಿ ಸಿ.ಸಿ ಕ್ರಿಕೆಟರ್ಸ್ ತಂಡ ಪಡೆದುಕೊಂಡಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎನ್.ಡಿ.ಪಿ ಜಿಲ್ಲಾಧ್ಯಕ್ಷ ವಿ.ಕೆ. ಲೊಕೇಶ್, ಗ್ರಾಮದಲ್ಲಿ ನಡೆಯುವ ಕ್ರೀಡಾಕೂಟದಿಂದ ಒಗ್ಗಟ್ಟು ಮೂಡಲಿದೆ. ಯುವಜನರು ಮೊಬೈಲ್‌ನಿಂದ ದೂರವಿದ್ದು, ಕ್ರೀಡೆಗೆ ಹೆಚ್ಚು ಮಹತ್ವ ನೀಡಬೇಕು ಎಂದು ಕರೆ ನೀಡಿದರು. ಕಾರ್ಯಕ್ರಮದಲ್ಲಿ ನೆಲ್ಲಿಹುದಿಕೇರಿ ಗ್ರಾ.ಪಂ ಅಧ್ಯಕ್ಷೆ ಧನಲಕ್ಷ್ಮಿ, ಉಪಾಧ್ಯಕ್ಷೆ ಪ್ರಮೀಳಾ, ಸದಸ್ಯರಾದ ಅಪ್ಪಲ್, ಸಿಂಧು, ಕ್ರೀಡಾ ಸಂಘಟನೆಯ ಪದಾಧಿಕಾರಿ ಉದಯ್ ಕುಮಾರ್, ಆಸಿಫ್, ಸಂಶುದ್ದೀನ್, ಸೌಕತ್ ಅಲಿ, ಮುಸ್ತಫ, ಅಭಿ, ರಫೀಕ್ ಸಿಎ, ಅಶ್ರಫ್ ಸಿ.ಎ., ಹಾಜರಿದ್ದರು.