






ಮಡಿಕೇರಿ ಏ.10 NEWS DESK : ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್ ಕೊಡಗು ಜಿಲ್ಲಾ ಘಟಕದ ವಿರಾಜಪೇಟೆ ತಾಲ್ಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ತಾಲ್ಲೂಕು ಅಧ್ಯಕ್ಷ ವಿಜಯ್ ಕುಮಾರ್ ತಿಳಿಸಿದ್ದಾರೆ. ಜಿಲ್ಲಾಧ್ಯಕ್ಷರಾದ ಚಾಮೆರ ದಿನೇಶ್ ಬೆಳ್ಯಪ್ಪ ಅವರ ನಿರ್ದೇಶನದಂತೆ ವಿರಾಜಪೇಟೆ ತಾಲ್ಲೂಕು ಘಟಕದ ಉಪಾಧ್ಯಕ್ಷರಾಗಿ ಮುಕ್ಕಾಟಿರ ಕಾವೇರಮ್ಮ ಕರಂಬಯ್ಯ, ಪ್ರಧಾನ ಕಾರ್ಯದರ್ಶಿಯಾಗಿ ಬಿ.ಜೆ.ಸವಿತಾ ಹಾಗೂ ಸದಸ್ಯರಾಗಿ ಕೆ.ಎಚ್.ಪವಿತ್ರ , ಪಿ.ಕೆ.ಪೂವಮ್ಮ , ಕಡೇಮಡ ಸುವಿತ್, ನಝೀರ್ ಚೊಕ್ಕಂಡ, ಇಸ್ಮಾಯೀಲ್ ಎಂ.ಎಂ.ಡ್ಯಾನಿ ಕುಶಾಲಪ್ಪ ಕರಿನೆರವಂಡ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ವಿಜಯ್ ಕುಮಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.