






ನಾಪೋಕ್ಲು ಏ.10 NEWS DESK : ಕಕ್ಕುಂದಕಾಡು ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಾಲಯದ ವಾರ್ಷಿಕ ಜಾತ್ರಾ ಮಹೋತ್ಸವವು ವಿವಿಧ ಧಾರ್ಮಿಕ ಪೂಜಾ ಕೈಂರ್ಕುಗಳೊಂದಿಗೆ ಸಂಪನ್ನಗೊಂಡಿತು. ಮಂಗಳವಾರ ಮಹಾಪೂಜೆ ಧ್ವಜಾರೋಹಣ ದೀಪಾರಾಧನೆ, ದೇವರ ಪ್ರದಕ್ಷಣೆ ಬಲಿಯೊಂದಿಗೆ ಉತ್ಸವಕ್ಕೆ ಚಾಲನೆ ನೀಡಿ ಬಳಿಕ ಭಕ್ತರಿಗೆ ಅನ್ನಸಂತರ್ಪಣೆ ನಡೆಯಿತು. ಬುಧವಾರ ಬೆಳಿಗ್ಗೆ ದೇವರ ದರ್ಶ ಬಲಿ, ಮಹಾಭಿಷೇಕ, ಮತ್ತು ಮಧ್ಯಾಹ್ನ ಮಹಾಪೂಜೆ, ವಿಶೇಷ ಸೇವೆಗಳು, ದೇವರ ಪ್ರದಕ್ಷಣೆ ನೃತ್ಯ ಜರುಗಿ ಮಹಾಮಂಗಳಾರತಿ ನಂತರ ತೀರ್ಥ, ಪ್ರಸಾದ ವಿತರಣೆ ಮತ್ತು ಅನ್ನಸಂತರ್ಪಣೆ ನೆರವೇರಿತು. ಸಂಜೆ ಪಟ್ಟಣದಲ್ಲಿ ದೇವರ ಉತ್ಸವ ಮೂರ್ತಿಯನ್ನು ಚೆಂಡೆ, ವಾದ್ಯಗೋಷ್ಠಿಗಳೊಂದಿಗೆ ಪಟ್ಟಣದಲ್ಲಿ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು. ಕಾವೇರಿನದಿಯಲ್ಲಿ ಅವಭೃತಸ್ನಾನದ ಬಳಿಕ ಸನ್ನಿಧಿಗೆ ಹಿಂತುರುಗಿ ದೇವರ ಪ್ರದಕ್ಷಣೆ ನೃತ್ಯ ಬಲಿ ಜರುಗಿತು. ಗುರುವಾರ ಶುದ್ಧ ನವಕ ಕಲಶ, ಮಹಾಪೂಜೆ, ಮಂತ್ರಾಕ್ಷತೆಯೋಂದಿಗೆ ಜಾತ್ರಾ ಮಹೋತ್ಸವ ಸಂಪನ್ನಗೊಂಡಿತು. ದೇವಾಲಯದ ಮುಖ್ಯ ಅರ್ಚಕ ಸುಧೀರ, ತಂತ್ರಿಗಳಾದ ರಮೇಶ್ ಶರ್ಮಾ, ಸುರೇಶ್ ಶರ್ಮ, ಸತ್ಯಮೂರ್ತಿ ಸರಳಾಯ ಧಾರ್ಮಿಕ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿದರು. ಈ ಸಂದರ್ಭ ದೇವಾಲಯದ ಆಡಳಿತ ಮಂಡಳಿ ಅಧ್ಯಕ್ಷ ಟಿ.ಆರ್.ಶ್ರೀನಿವಾಸ, ಕಾರ್ಯದರ್ಶಿ ಟಿ.ಎ.ಸುಜಿ ಕುಮಾರ್, ಖಜಾಂಚಿ ಎಂ.ಪಿ.ಗೋಪಾಲ, ಉಪಾಧ್ಯಕ್ಷ ಟಿ.ಕೆಸೂರ್ಯಕುಮಾರ್, ಕಾರ್ಯಾಧ್ಯಕ್ಷ ಟಿ.ಎನ್.ರಮೇಶ್, ಹಿರಿಯರಾದ ಆನಂದ ಸ್ವಾಮಿ, ನಿರ್ದೇಶಕರುಗಳಾದ ರಾಧಾಕೃಷ್ಣ ರೈ, ತಂಗ, ಮಹೇಶ್, ಸೀನ, ಭವಾನಿ, ಲೀಲಾ ಸೇರಿದಂತೆ ಉತ್ಸವದಲ್ಲಿ ಊರಿನ ಭಕ್ತರು ಅಧಿಕ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.
ವರದಿ : ದುಗ್ಗಳ ಸದಾನಂದ.