






*ಮೈದಾನ 1*
ಮದ್ರೀರ ಮತ್ತು ಜಮ್ಮಡ ತಂಡಗಳ ನಡುವಿನ ಪಂದ್ಯದಲ್ಲಿ ನಿಗಧಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆಯಲ್ಲಿ ನಡೆದ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಮದ್ರೀರ ತಂಡ ಜಯ ದಾಖಲಿಸಿತು. ಜಮ್ಮಡ ತಶಿನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಳಂಗಂಡ ಮತ್ತು ಚಪ್ಪಂಡ ನಡುವಿನ ಪಂದ್ಯದಲ್ಲಿ 6-1 ಗೋಲುಗಳ ಅಂತರದಲ್ಲಿ ಅಳಂಗಂಡ ತಂಡ ಜಯ ಸಾಧಿಸಿತು. ಪಳಂಗಂಡ ಪರ ಕಾಳಪ್ಪ, ಶಶಾಂಕ್ ಸುಬ್ಬಯ್ಯ ತಲಾ 2, ಅಜಯ್ ಅಯ್ಯಪ್ಪ ಹಾಗೂ ಮಂದಣ್ಣ ತಲಾ 1 ಗೋಲು ದಾಖಲಿಸಿದರು. ಚಪ್ಪಂಡ ಸಾಯಿ ನಾಚಪ್ಪ ಮ್ಯಾನ್ ಆಪ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಾಚಿಮಾಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಮೇಚಿಯಂಡ ತಂಡ ಗೆಲುವು ದಾಖಲಿಸಿತು. ಮೇಚಿಯಂಡ ಪರ ಸೂರಜ್ ಸೋಮಯ್ಯ 2 ಗೋಲು ದಾಖಲಿಸಿದರು. ಮಾಚಿಮಾಡ ಪರ ಚಂಗಪ್ಪ 1 ಗೋಲು ಬಾರಿಸಿದರು. ಮಾಚಿಮಾಡ ಶ್ರೇಯಸ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೂತಂಡ ಮತ್ತು ಮಂಡೀರ (ನೆಲಜಿ) ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಕೂತಂಡ ತಂಡ ಜಯ ಸಾಧಿಸಿತು. ಕೂತಂಡ ಪರ ಸುರೇಶ್ ಅಪ್ಪಯ್ಯ, ರಿಕ್ಕಿ, ಸಂತೋಷ್ ಹಾಗೂ ರಂಜನ್ ತಲಾ 1 ಗೋಲು ದಾಖಲಿಸಿದರು. ಮಂಡೀರ ಶಿಶಿರ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊಳ್ಳಂಡ ಮತ್ತು ಕೇಳಪಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ನಡೆದ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಕೇಳಪಂಡ ಜಯ ಸಾಧಿಸಿತು. ಬೊಳ್ಳಂಡ ಗಣೇಶ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ವಾಟೇರಿರ ಮತ್ತು ಬಾಚಿನಾಡಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಿಂದ ವಾಟೇರಿರ ತಂಡ ಜಯ ಸಾಧಿಸಿತು. ವಾಟೇರಿರ ಪರ ಕಾರ್ತಿಕ್ ಕಾರ್ಯಪ್ಪ, ಪೂವಣ್ಣ, ಶಮಂತ್ ಸೋಮಣ್ಣ ಹಾಗೂ ರೋಹಿತ್ ತಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಬಾಚಿನಾಡಂಡ ಕವನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೇಚೇಟಿರ (ಕಡಗದಾಳು) ಮತ್ತು ಬಡ್ಡೀರ ನಡುವಿನ ಪಂದ್ಯದಲ್ಲಿ ಕೇಚೇಟಿರ ತಂಡ 3-0 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಕೇಚೇಟಿರ ಪರ ವಿಜಯ್ ಉತ್ತಯ್ಯ ಹ್ಯಾಟ್ರಿಕ್ ಗೋಲು ಬಾರಿಸಿ ಗೆಲುವು ತಂದುಕೊಟ್ಟರು. ಬಡ್ಡೀರ ಸೋಮಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಮಂಡೇಪಂಡ ಮತ್ತು ಮಾಚಂಡ ನಡುವಿನ ಪಂದ್ಯದಲ್ಲಿ 6-0 ಗೋಲುಗಳ ಅಂತರದಲ್ಲಿ ಮಂಡೇಪಂಡ ತಂಡ ಗೆಲುವು ದಾಖಲಿಸಿತು. ಮಂಡೇಪಂಡ ಪರ ಚಂದನ್ ಕಾರ್ಯಪ್ಪ ಹಾಗೂ ದಿಲನ್ ದೇವಯ್ಯ ತಲಾ 2, ಕವನ್ ಮುತ್ತಪ್ಪ ಹಾಗೂ ಮುಖೇಶ್ ಮೊಣ್ಣಯ್ಯ ತಲಾ 1 ಗೋಲು ದಾಖಲಿಸಿದರು. ಮಾಚಂಡ ಪ್ರಿನ್ಸ್ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮಂದನೆರವಂಡ ಮತ್ತು ಮಂಡೇಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮಂಡೇಡ ತಂಡ ಗೆಲುವು ಸಾಧಿಸಿತು. ಮಂಡೇಡ ಪರ ಅಭಯ್ ಅಚ್ಚಯ್ಯ 1 ಗೋಲು ದಾಖಲಿಸಿದರು. ಮಂದನೆರವಂಡ ಗಗನ್ ಚೆಂಗಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಾಂಡೇರ ಮತ್ತು ಮೂಕಳಮಾಡ ತಂಡಗಳ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಮೂಕಳಮಾಡ ಜಯ ಸಾಧಿಸಿತು. ಮೂಕಳಮಾಡ ಪರ ಗಣಪತಿ 2 ಹಾಗೂ ಸೋಮಣ್ಣ 1 ಗೋಲು ದಾಖಲಿಸಿದರು. ಕಾಂಡೇರ ಅಕ್ಷಯ್ ಕಾವೇರಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೆರುಮಾಡಂಡ ಮತ್ತು ಚೌರೀರ (ಹೊದವಾಡ) ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಚೆರುಮಾಡಂಡ ಗೆಲುವು ಸಾಧಿಸಿತು. ಚೆರುಮಾಡಂಡ ಪರ ಕವನ್ ಕಾರ್ಯಪ್ಪ 2 ಹಾಗೂ ಶಾನ್ ಕಾರ್ಯಪ್ಪ 1 ಗೋಲು ದಾಖಲಿಸಿದರು. ಚೌರೀರ ಪರ ಪೆಮ್ಮಯ್ಯ 1 ಗೋಲು ಬಾರಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುರುವಂಡ ಮತ್ತು ಚೆರಿಯಪಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಮುರುವಂಡ ತಂಡ ಜಯ ಸಾಧಿಸಿತು. ಮುರುವಂಡ ಪರ ಕಾರ್ಯಪ್ಪ 2, ವರುಣ್ ಗಣಪತಿ ಹಾಗೂ ಮಿಥುನ್ ಅಣ್ಣಯ್ಯ ತಲಾ 1 ಗೋಲು ದಾಖಲಿಸಿದರು. ಚೆರಿಯಪಂಡ ದೀಪಕ್ ಸುಬ್ಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಅಜ್ಜಿನಂಡ ಮತ್ತು ಬೈರೆಟೀರ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಅಜ್ಜಿನಂಡ ತಂಡ ಜಯ ಸಾಧಿಸಿತು. ಅಜ್ಜಿನಂಡ ಪರ ಜೂನ ನಾಣಯ್ಯ 2 ಹಾಗೂ ಚೈತ್ರ ಅಯ್ಯಪ್ಪ 1 ಗೋಲು ದಾಖಲಿಸಿದರು. ಬೈರೆಟೀರ ಪರ ಗಗನ್ ಬೋಪಣ್ಣ 1 ಗೋಲು ಬಾರಿಸಿ, ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 3*
ಅಣ್ಣಾಡಿಯಂಡ ಮತ್ತು ದಾಸಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲು ದಾಖಲಿಸುವ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ನಡೆದ ಟೈ ಬ್ರೇಕರ್‍ನಲ್ಲಿ 4-1 ಗೋಲುಗಳ ಅಂತರದಲ್ಲಿ ಅಣ್ಣಾಡಿಯಂಡ ತಂಡ ಗೆಲುವು ಸಾಧಿಸಿತು. ಅಣ್ಣಾಡಿಯಂಡ ಪರ ನವೀನ್ ನಾಚಪ್ಪ 1, ಟೈ ಬ್ರೇಕರ್‍ನಲ್ಲಿ ಕಾರ್ಯಪ್ಪ, ಸೋಮಣ್ಣ, ಮುದ್ದಯ್ಯ ಹಾಗೂ ನವೀನ್ ನಾಚಪ್ಪ ತಲಾ 1 ಗೋಲು ದಾಖಲಿಸಿದರು. ದಾಸಂಡ ಪರ ಚಂದನ್ 1-1 ಗೋಲು ದಾಖಲಿಸಿದರು. ದಾಸಂಡ ಅಚ್ಚಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪರದಂಡ ಮತ್ತು ಬೊಪ್ಪಂಡ ನಡುವಿನ ಪಂದ್ಯದಲ್ಲಿ 5-0 ಗೋಲುಗಳ ಅಂತರದಲ್ಲಿ ಪರದಂಡ ತಂಡ ವಿಜಯ ಸಾಧಿಸಿತು. ಪರದಂಡ ಪರ ಪ್ರಜ್ವಲ್ ಪೂವಣ್ಣ ಹ್ಯಾಟ್ರಿಕ್ ಗೋಲು ಬಾರಿಸಿದರೆ, ರಾಜನ್ ಅಯ್ಯಪ್ಪ ಹಾಗೂ ಚೆಶ್ವಿನ್ ಉತ್ತಪ್ಪ ತಲಾ 1 ಗೋಲು ಬಾರಿಸಿದರು. ಗೋಲ್ ಕೀಪರ್ ದರ್ಶನ್ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮುಡ್ಯೋಳಂಡ ಮತ್ತು ಚೌರೀರ (ಹೊದ್ದೂರು) ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಮುಡ್ಯೋಳಂಡ ತಂಡ ಗೆಲುವು ದಾಖಲಿಸಿತು. ಮುಡ್ಯೋಳಂಡ ಪರ ಅಭಿಷೆಕ್ ಅಚ್ಚಯ್ಯ, ಚೇತನ್ ಚೀಯಣ್ಣ ಹಾಗೂ ದಿನು ಗಣಪತಿ ತಲಾ 1 ಗೋಲು ದಾಖಲಿಸಿದರು. ಚೌರೀರ ಪರ ಧ್ಯಾನ್ ತಮ್ಮಣ್ಣ 1 ಗೋಲು ಬಾರಿಸಿದರು. ಚೌರೀರ ಅಯ್ಯಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಾಡೆಯಂಡ ಮತ್ತು ಕರ್ತಚ್ಚಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಪಾಡೆಯಂಡ ತಂಡ ಜಯ ಸಾಧಿಸಿತು. ಪಾಡೆಯಂಡ ಪರ ಮಿಲನ್ ಸುಬ್ಬಯ್ಯ, ಮಂದಣ್ಣ, ಸಂತು ಅಯ್ಯಪ್ಪ ಹಾಗೂ ಮಿಥುನ್ ಮುತ್ತಪ್ಪ ತಲಾ 1 ಗೋಲು ದಾಖಲಿಸಿದರು. ಕರ್ತಚ್ಚಿರ ಡ್ಯಾನಿ ಕಾಳಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಮೈಂದಪಂಡ ಮತ್ತು ಬಟ್ಟೀರ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮೈಂದಪಂಡ ಗೆಲುವು ಸಾಧಿಸಿತು. ಮೈಂದಪಂಡ ಪರ ಡೆನ್ಸಿ ಚಿಣ್ಣಪ್ಪ 2 ಗೋಲು ದಾಖಲಿಸಿದರು. ಬಟ್ಟೀರ ಡೆಲಿನ್ ಮುತ್ತಮ್ಮ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಲ್ಲಮಾಡ ಮತ್ತು ಆಪಾಡಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಮಲ್ಲಮಾಡ ತಂಡ ಜಯ ಸಾಧಿಸಿತು. ಮಲ್ಲಮಾಡ ಪರ ಸಂದೇಶ್ ಬೆಳ್ಯಪ್ಪ ಹಾಗೂ ಸುಧಿ ತಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಗೋಲು ಕೀಪರ್ ಡೀನ್ ಮಾಚಯ್ಯ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.