






ಮಡಿಕೇರಿ ಏ.11 NEWS DESK : 2024-25ನೇ ಸಾಲಿನ ದ್ವಿತೀಯ ಪಿಯುಸಿ ಪಿಸಿಎಂಸಿ ಪರೀಕ್ಷೆಯಲ್ಲಿ ಕೊಡಗಿನ ಟಿ.ಎಸ್.ರೋಹಿತ್ ರಾಜ್ಯಕ್ಕೆ 7ನೇ ಸ್ಥಾನ ಪಡೆದಿದ್ದಾನೆ. ಮಂಗಳೂರಿನ ಪ್ರೆಸಿಡೆನ್ಸಿ ಪಿಯು ಕಾಲೇಜಿನಲ್ಲಿ ವ್ಯಾಸಂಗ ಮಾಡಿದ ಟಿ.ಎಸ್.ರೋಹಿತ್ 600 ಅಂಕಗಳಿಗೆ 593 ಅಂಕಗಳನ್ನು ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ರೋಹಿತ್ ಮೂಲತಃ ಕೊಡಗಿನ ಕುಂಬಳದಾಳು ಗ್ರಾಮದ ತೆಕ್ಕಡೆ ಸುಗುಗಣಪತಿ ಮತ್ತು ಜ್ಯೋತಿ ದಂಪತಿಯ ಪುತ್ರ.