








ಮಡಿಕೇರಿ ಏ.12 NEWS DESK : ಕಾಂತೂರು-ಮೂರ್ನಾಡು ಶ್ರೀ ಪನ್ನಂಗಾಲ ದೇವಿಯ ವಾರ್ಷಿಕೋತ್ಸವವು ಏ.17 ಮತ್ತು 18 ರಂದು ನಡೆಯಲಿದೆ.
ಏ.17 ರಂದು ಬೆಳಿಗ್ಗೆ ದೇವರ ಶುದ್ಧ ಕಳಸ ಪೂಜೆ, ಕೆರೆ ಮನೆಯಿಂದ ಭಂಡಾರ ತರುವುದು, ಎತ್ತು ಪೋರಾಟ, ದೇವರ ದರ್ಶನ ಹಾಗೂ ಸಂಜೆ 7 ಗಂಟೆಗೆ ಕುರುಂದ ಭಾರಣಿ ಜರುಗಲಿದೆ. ಏ.18 ರಂದು ಬೆಳಿಗ್ಗೆ ದೇವರ ದರ್ಶನ, ಮಧ್ಯಾಹ್ನ ಅನ್ನಸಂತರ್ಪಣೆ ಹಾಗೂ ಚಾಮುಂಡಿ ಉತ್ಸವ, ಕುರುಂದಾಟ ದೇವರ ಜಳಕ ನಡೆಯಲಿದ್ದು, ಭಕ್ತಾಧಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ದೇವಾಲಯದ ಅಧ್ಯಕ್ಷರು ಹಾಗೂ ತಕ್ಕ ಮುಖ್ಯಸ್ಥರು ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.