






ಕುಶಾಲನಗರ, ಏ.15 NEWS DESK : ಕುಶಾಲನಗರದ ವಾಸವಿ ಯುವಜನ ಸಂಘ ಮತ್ತು ಶ್ರೀಮತ್ ವಾಸವಿ ಕನ್ನಿಕಾ ಪರಮೇಶ್ವರಿ ಟ್ರಸ್ಟ್ ವತಿಯಿಂದ ವಾಸವಿ ಜಯಂತಿ ಅಂಗವಾಗಿ ಕೊಡಗು ಜಿಲ್ಲಾ ಆಸ್ಪತ್ರೆ ರಕ್ತನಿಧಿ ಕೇಂದ್ರದ ಸಹಯೋಗದೊಂದಿಗೆ ಏ.16 ರಂದು ಕುಶಾಲನಗರದಲ್ಲಿ ರಕ್ತದಾನ ಶಿಬಿರ ನಡೆಯಲಿದೆ ಎಂದು ಸಂಘದ ಅಧ್ಯಕ್ಷ ಕೆ.ಪ್ರವೀಣ್ ತಿಳಿಸಿದರು. ಕುಶಾಲನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಕುಶಾಲನಗರದ ಬೈಪಾಸ್ ರಸ್ತೆಯ ವಾಸವಿ ಮಹಲ್ ಹಿಂಭಾಗ ನಡೆಯಲಿದೆ ಎಂದು ತಿಳಿಸಿದರು. ನಮ್ಮ ಸಂಘದ ವತಿಯಿಂದ ಹಲವಾರು ವರ್ಷಗಳಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದ್ದೇವೆ. ಮಡಿಕೇರಿಯಲ್ಲಿ ಜಿಲ್ಲಾ ಆಸ್ಪತ್ರೆ ಮತ್ತು ಮೆಡಿಕಲ್ ಕಾಲೇಜು ಇಲ್ಲೇ ಇರುವುದರಿಂದ ಬಹಳಷ್ಟು ಶಸ್ತ್ರಚಿಕಿತ್ಸೆಗಳು ಇಲ್ಲೇ ನಡೆಯುತ್ತದೆ ಮತ್ತು ತುರ್ತು ಪ್ರಥಮ ಚಿಕಿತ್ಸೆ ಸಿಗುತ್ತದೆ. ಇಂತಹ ಸಂದರ್ಭದಲ್ಲಿ ಕೂಡ ರಕ್ತದ ಅವಶ್ಯಕತೆ ಬಹಳ ಇರುತ್ತದೆ. ಹಾಗಾಗಿ ಈ ರಕ್ತದಾನ ಶಿಬಿರಗಳಲ್ಲಿ ಅತಿ ಹೆಚ್ಚಿನ ಸಂಖ್ಯೆಯಲ್ಲಿ ರಕ್ತದಾನಿಗಳು ಪಾಲ್ಗೊಂಡು ಸಹಕರಿಸಬೇಕಾಗಿ ಅವರು ಕೋರಿದರು. ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷರಾದ ವಿ.ವೈಶಾಖ್, ವಿ.ಜೆ.ಬಾಲಾಜಿ, ಕಾರ್ಯದರ್ಶಿ ಬಿ.ಎನ್. ಅಂಜನ್, ಸಹ ಕಾರ್ಯದರ್ಶಿ ನಾಗ ಶ್ರೇಯಸ್ಸ್, ನಿರ್ದೇಶಕರಾದ ರವಿಪ್ರಕಾಶ್, ನಿಖಿಲ್ ಮತ್ತು ಗೌತಮ್ ಇದ್ದರು. ಹೆಚ್ಚಿನ ಮಾಹಿತಿಗೆ 7019167576 7338249044 ಸಂಪರ್ಕಿಸಲು ಅವರು ಕೋರಿದರು.