







ಮಡಿಕೇರಿ ಏ.15 NEWS DESK : ನಗರದ ಶಕ್ತಿ ಆಶ್ರಮಕ್ಕೆ ಕುಕ್ಕರ್ ನ್ನು ಕೊಡುಗೆಯಾಗಿ ನೀಡಲಾಯಿತು. ಸೋಮವಾರಪೇಟೆಯ ಎಂ.ಎ.ರುಬೀನಾ ಶಕ್ತಿ ಆಶ್ರಮಕ್ಕೆ ಅವಶ್ಯಕವಾಗಿದ್ದ ಕುಕ್ಕರ್ ನ್ನು ಕೊಡಗೆಯಾಗಿ ನೀಡಿದರು. 2023ರಲ್ಲಿ ಸೋಮವಾರಪೇಟೆಯ ಜೆಸಿಐ ಸಂಸ್ಥೆಯ ಅಧ್ಯಕ್ಷೆಯಾಗಿ ಒಂದು ವರ್ಷದ ಅವಧಿಯಲ್ಲಿ ಹಲವಷ್ಟು ಸಮಾಜಮುಖಿ ಕೆಲಸ ಕಾರ್ಯ ಮಾಡಿದ್ದು, ಅನಾಥಾಶ್ರಮಕ್ಕೆ ತನ್ನ ಕೈಲಾದ ಸಹಾಯ ಮಾಡುವ ಹಂಬಲದಲಲ್ಲಿದ್ದ ರುಬೀನಾ ರಿಗೆ ಭರವಸೆ ನೀಡಿ ಸಹಕರಿಸಿದ್ದು ತನ್ನ ಪ್ರೌಢಶಾಲೆಯ ತರಗತಿ ಶಿಕ್ಷಕರಾದ ಮನೂಬಾಯಿ ಸುಮಾರು ಹದಿನೈದು ಸಾವಿರ ವೆಚ್ಚದ ಐವತ್ತು ಲೀಟರಿನ ಕುಕ್ಕರ್ ಕೊಡುಗೆಯಾಗಿ ನೀಡಿ ಸ್ಪಂದಿಸಿದ್ದಾರೆ. ಈ ಸಂದರ್ಭ ಚಂದನ್ ನಂದರಬೆಟ್ಟು, ರಿಶಾ ಉಪಸ್ಥಿತರಿದ್ದರು.