







ಸಿದ್ದಾಪುರ ಏ.15 NEWS DESK : ಡಾ.ಬಿ.ಆರ್.ಅಂಬೇಡ್ಕರ್ ಅವರ 134ನೇ ಜನ್ಮದಿನಾಚರಣೆಯನ್ನು ಸಿದ್ದಾಪುರದ ಬಿಜೆಪಿ ಶಕ್ತಿ ಕೇಂದ್ರದ ವತಿಯಿಂದ ಆಚರಿಸಲಾಯಿತು. ಶಕ್ತಿ ಕೇಂದ್ರದ ಪ್ರಮುಖರು ಹಾಗೂ ಕಾರ್ಯಕರ್ತರು ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು. ಬಿಜೆಪಿ ಶಕ್ತಿ ಕೇಂದ್ರದ ಪ್ರಮುಖ ರೊಪೇಶ್, ಗ್ರಾ.ಪಂ ಸದಸ್ಯ ಆನಂದ, ರೀನಾತುಳಸಿ, ಡಿಜಿತ್, ಜಯಂತ್, ಹರೀಶ್, ಮಣಿ, ಶಾಜಿ, ಅನೀಲ್ , ಮೋಹನ್, ಅಜಿ ಅಯ್ಯಪ್ಪ, ಸುರೇಶ್ ಗುಹ್ಯ ಇನ್ನಿತರರು ಉಪಸ್ಥಿತರಿದ್ದರು.