*ಮೈದಾನ 1*
ಮಂಡೇಟಿರ ಮತ್ತು ಚಂಗುಲಂಡ ನಡುವಿನ ಪಂದ್ಯದಲ್ಲಿ ಎರಡೂ ತಂಗಳು ನಿಗಧಿತ ಅವಧಿಯಲ್ಲಿ ತಲಾ 2 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 5-4 ಗೋಲುಗಳ ಅಂತರದಲ್ಲಿ ಚಂಗುಲಂಡ ತಂಡ ಗೆಲುವು ದಾಖಲಿಸಿತು. ಚಂಗುಲಂಡ ಪರ ಗೌತಮ್ 2 ಹಾಗೂ ಮಂಡೇಟಿರ ಪರ ತಿಲಕ್ ಅಯ್ಯಪ್ಪ ಮತ್ತು ನೆಹಾಲ್ ಬೆಳ್ಯಪ್ಪ ತಲಾ 1 ಗೋಲು ದಾಖಲಿಸಿದರು. ಮಂಡೇಟಿರ ಸೋಹನ್ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಳ್ಳಿಚಂಡ ಮತ್ತು ಮಚ್ಚಾರಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 4-2 ಗೋಲುಗಳ ಅಂತರದಲ್ಲಿ ಕಳ್ಳಿಚಂಡ ತಂಡ ಜಯ ಸಾಧಿಸಿತು. ಕಳ್ಳಿಚಂಡ ಪರ ದೀವನ್ ಹಾಗೂ ಕಾವೇರಪ್ಪ ತಲಾ 1 ಗೋಲು ದಾಖಲಿಸಿದರು. ಮಚ್ಚಾರಂಡ ಪರ ಗಣಪತಿ ಹಾಗೂ ತಮ್ಮಯ್ಯ ತಲಾ 1 ಗೋಲು ದಾಖಲಿಸಿದರು. ಮಚ್ಚಾರಂಡ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಂಗಂಡ ಮತ್ತು ಕಂಬೀರಂಡ ತಂಡಗಳ ನಡುವೆ ನಡೆದ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ಕಂಬೀರಂಡ ತಂಡ ಗೆಲುವು ಸಾಧಿಸಿತು. ಕಂಬೀರಂಡ ತಂಡದ ಪರ ಮಯ್ಯುರ್ ಬೋಪಯ್ಯ ಹಾಗೂ ಮೊಣ್ಣಪ್ಪ ತಲಾ 1 ಗೋಲು ದಾಖಲಿಸಿದರು. ಕೊಂಗಂಡ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬಾಳೆಯಡ ಮತ್ತು ಕೋಣೇರಿರ ತಂಡಗಳ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಕೋಣೇರಿರ ಗೆಲುವು ದಾಖಲಿಸಿತು. ಕೋಣೇರಿರ ಪರ ಮಧು ಮಂದಣ್ಣ, ವಿಪಿನ್ ಚಂಗಪ್ಪ ಹಾಗೂ ಜೀವನ್ ಚೆಂಗಪ್ಪ ತಲಾ 1 ಗೋಲು ದಾಖಲಿಸಿದರು. ಬಾಳೆಯಡ ವಿನಿಲ್ ಮಂದಣ್ಣ 1 ಗೋಲು ದಾಖಲಿಸಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಇಟ್ಟಿರ ಮತ್ತು ಕಂಬೆಯಂಡ ನಡುವಿನ ಪಂದ್ಯದಲ್ಲಿ 4-2 ಗೋಲುಗಳ ಅಂತರದಲ್ಲಿ ಇಟ್ಟಿರ ತಂಡ ಜಯ ಸಾಧಿಸಿತು. ಇಟ್ಟಿರ ಪರ ರೋಹನ್ ಅಚ್ಚಯ್ಯ, ಶಾನ್ ಸೋಮಣ್ಣ, ಭವಿಶ್ ಕುಶಾಲಪ್ಪ ಹಾಗೂ ಕವಿನ್ ಕುಟ್ಟಪ್ಪ ತಲಾ 1 ಗೋಲು ದಾಖಲಿಸಿದರು. ಕಂಬೆಯಂಡ ಪರ ಲಿಖಿತ್ ತಿಮ್ಮಯ್ಯ ಹಾಗೂ ಕಾರ್ಯಪ್ಪ ತಲಾ 1 ಗೋಲು ದಾಖಲಿಸಿದರು. ಕಂಬೆಯಂಡ ಕಾರ್ಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಾಂಡಂಡ ಮತ್ತು ನುಚ್ಚಿಮಣಿಯಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕಾಂಡಂಡ ಗೆಲುವು ಸಾಧಿಸಿತು. ಕಾಂಡಂಡ ಪರ ಆದಿತ್ಯ ಅಪ್ಪಣ್ಣ 1 ಗೋಲು ದಾಖಲಿಸಿದರು. ನುಚ್ಚಿಮಣಿಯಂಡ ಪೂವಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಲ್ಲಂಡ ಮತ್ತು ಕುಲ್ಲೇಟಿರ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಕುಲ್ಲೇಟಿರ ಜಯ ಸಾಧಿಸಿತು. ಕುಲ್ಲೇಟಿರ ಪರ ನಿಶ್ಚಲ್ ನಾಚಪ್ಪ ಹ್ಯಾಟ್ರಿಕ್ ಗೋಲು ದಾಖಲಿಸಿದರೆ, ಅವನೀಶ್ ಮಂದಪ್ಪ 1 ಗೋಲು ದಾಖಲಿಸಿದರು. ಮಲ್ಲಂಡ ಪೊನ್ನಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಮಾದಂಡ ಮತ್ತು ಮದ್ರೀರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಮಾದಂಡ ತಂಡ ಜಯ ಸಾಧಿಸಿತು. ಮಾದಂಡ ಪರ ಸಂದೇಶ್ ಅಪ್ಪಯ್ಯ 1 ಗೋಲು ದಾಖಲಿಸಿದರು. ಮದ್ರೀರ ಗಣಪತಿ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಪಳಂಗಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ ತಲಾ 1 ಗೋಲುಗಳ ಮೂಲಕ ಎರಡೂ ತಂಡಗಳು ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 5-4 ಗೋಲುಗಳ ಅಂತರದಲ್ಲಿ ಮೇಚಿಯಂಡ ಜಯ ಸಾಧಿಸಿತು. ಮೇಚಿಯಂಡ ಪರ ವಿನಿತ್ ನಾಣಯ್ಯ 1 ಹಾಗೂ ಪೊನ್ನಪ್ಪ 1 ಗೋಲು ದಾಖಲಿಸಿದರು. ಪಳಂಗಂಡ ಶಶಾಂಕ್ ಸುಬ್ಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊಳ್ಳಂಡ ಮತ್ತು ವಾಟೇರಿರ ನಡುವಿನ ಪಂದ್ಯದಲ್ಲಿ 3-1 ಗೋಲುಗಳ ಅಂತರದಲ್ಲಿ ಬೊಳ್ಳಂಡ ತಂಡ ಜಯ ಸಾಧಿಸಿತು. ಬೊಳ್ಳಂಡ ಪರ ಯಶ್ ಮಾಚಯ್ಯ 2 ಹಾಗೂ ರೋಶನ್ 1 ಗೋಲು ಬಾರಿಸಿದರು. ವಾಟೇರಿರ ನಾಣಯ್ಯ 1 ಗೋಲು ದಾಖಲಿಸಿದರು. ವಾಟೇರಿರ ಕರಣ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೆಚೇಟಿರ (ಕಡಗದಾಳು) ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಗೆಲುವು ದಾಖಲಿಸಿತು. ಬೊಟ್ಟೋಳಂಡ ಪರ ಪೃಥ್ವಿ ಬೋಪಣ್ಣ, ಸೂರಜ್ ಅಯ್ಯಪ್ಪ ಹಾಗೂ ಗಗನ್ ಅಪ್ಪಣ್ಣ ತಲಾ 1 ಗೋಲು ದಾಖಲಿಸಿದರು. ಕಚೇಟಿರ ತೇಜಸ್ವಿ ದೇವಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕನ್ನಂಡ ಮತ್ತು ಕೋಡೀರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕನ್ನಡ ತಂಡ ಜಯ ಸಾಧಿಸಿತು. ಕನ್ನಂಡ ತಂಡದ ಪರ ಶರಣ್ ಕಾವೇಪ್ಪ 1 ಗೋಲು ದಾಖಲಿಸಿದರು. ಕೋಡೀರ ತೇಜಶ್ವಿ ದೇವಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಚೇಂದಂಡ ಮತ್ತು ಬಡುವಮಂಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೇಂದಂಡ ತಂಡ ಜಯ ಸಾಧಿಸಿತು. ಚೇಂದಂಡ ಪರ ಮೋಕ್ಷಿತ್ 2, ಅಮೋಘ್ ಹಾಗೂ ತಹಾನ್ ತಲಾ 1 ಗೋಲು ದಾಖಲಿಸಿದರು. ಬಡುವಮಂಡ ನವೀನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.












