
*ಮೈದಾನ 1*
ಚೆಪ್ಪುಡಿರ ಮತ್ತು ಕರ್ತಮಾಡ ನಡುವಿನ ಪಂದ್ಯದಲ್ಲಿ 4-0 ಗೋಲುಗಳ ಅಂತರದಲ್ಲಿ ಚೆಪ್ಪುಡಿರ ತಂಡ ಗೆಲುವು ಸಾಧಿಸಿತು. ಚೆಪ್ಪುಡಿರ ಪರ ವಚನ್ 2, ಚೇತನ್ ಚಿಣ್ಣಪ್ಪ ಹಾಗೂ ಸೋಮಣ್ಣ ತಲಾ 1 ಗೋಲು ದಾಖಲಿಸಿದರು. ಕರ್ತಮಾಡ ತರುಣ್ ಚಂಗಪ್ಪ ಮ್ಯಾನ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಮಾದಂಡ ಮತ್ತು ಮೇಚಿಯಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಮೇಚಿಯಂಡ ತಂಡ ಜಯ ಸಾಧಿಸಿತು. ಮೇಚಿಯಂಡ ಪರ ವಿನಿತ್ ನಾಣಯ್ಯ ಹಾಗೂ ಸುನೀಲ್ ನಾಣಯ್ಯ ಗೋಲು ದಾಖಲಿಸಿದರು. ಮಾದಂಡ ಪರ ಸೈನಾ ಪೊನ್ನಪ್ಪ 1 ಗೋಲು ಬಾರಿಸಿದರು. ಮಾದಂಡ ಮಿಲನ್ ಪೂಣಚ್ಚ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬೊಳ್ಳಂಡ ಮತ್ತು ಬೊಟ್ಟೋಳಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಬೊಟ್ಟೋಳಂಡ ಜಯ ಸಾಧಿಸಿತು. ಬೊಟ್ಟೋಳಂಡ ಪರ ಸೂರಜ್ ಅಯ್ಯಪ್ಪ ಹಾಗೂ ಮುತ್ತಣ್ಣ ತಲಾ 1 ಗೋಲು ದಾಖಲಿಸಿದರು. ಬೊಳ್ಳಂಡ ಪರ ರತುಲ್ ತಿಮ್ಮಯ್ಯ 1 ಗೋಲು ಬಾರಿಸಿದರು. ಬೊಳ್ಳಂಡ ನಿರನ್ ಸುಬ್ಬಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೊಂಗೇಟಿರ ಮತ್ತು ಚೇನಂಡ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 5-3 ಗೋಲುಗಳ ಅಂತರದಲ್ಲಿ ಕೊಂಗೇಟಿರ ಗೆಲುವು ಸಾಧಿಸಿತು. ಚೇನಂಡ ಮೌರ್ಯ ತಿಮ್ಮಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಐಚೆಟ್ಟೀರ ಮತ್ತು ನಾಳಿಯಂಡ ನಡುವಿನ ಪಂದ್ಯದಲ್ಲಿ 2-0 ಗೋಲುಗಳ ಅಂತರದಲ್ಲಿ ನಾಳಿಯಂಡ ತಂಡ ಗೆಲುವು ಸಾಧಿಸಿತು. ನಾಳಿಯಂಡ ಪರ ಕವನ್ ಹಾಗೂ ಕಾಳಪ್ಪ ತಲಾ 1 ಗೋಲು ದಾಖಲಿಸಿದರು. ಐಚೆಟ್ಟೀರ ವೇದ್ ಬಿದ್ದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ನೆಲ್ಲಮಕ್ಕಡ ಮತ್ತು ನಾಪಂಡ ನಡುವಿನ ಪಂದ್ಯದಲ್ಲಿ 4-1 ಗೋಲುಗಳ ಅಂತರದಲ್ಲಿ ನೆಲ್ಲಮಕ್ಕಡ ತಂಡ ಜಯ ಸಾಧಿಸಿತು. ನೆಲ್ಲಮಕ್ಕಡ ಪರ ಪ್ರತಿಕ್ ಪೂವಣ್ಣ 2 ಹಾಗೂ ವೃಕ್ಷಿತ್ ಸೋಮಯ್ಯ 1 ಗೋಲು ದಾಖಲಿಸಿದರು. ನಾಪಂಡ ಪರ ಪ್ರವೀಣ 1 ಗೋಲು ದಾಖಲಿಸಿದರು. ನಾಪಂಡ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೋಳೇರ ಮತ್ತು ಚೆಕ್ಕೇರ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಕೋಳೇರ ತಂಡ ಗೆಲುವು ಸಾಧಿಸಿತು. ಕೋಳೇರ ಪರ ಕೌಶಿಕ್ ಕಾರ್ಯಪ್ಪ, ವಿನಯ್ ನಾಣಯ್ಯ ಹಾಗೂ ಮಿಲನ್ ಮಾಚಯ್ಯ ತಲಾ 1 ಗೋಲು ದಾಖಲಿಸಿದರು. ಚೆಕ್ಕೇರ ವರುಣ್ ಮಾದಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
*ಮೈದಾನ 2*
ಪರದಂಡ ಮತ್ತು ಐನಂಡ ನಡುವಿನ ಪಂದ್ಯದಲ್ಲಿ 3-0 ಗೋಲುಗಳ ಅಂತರದಲ್ಲಿ ಪರದಂಡ ತಂಡ ಜಯ ಸಾಧಿಸಿತು. ಪರದಂಡ ಪರ ಪ್ರಜ್ವಲ್ ಪೂವಣ್ಣ ಹ್ಯಾಟ್ರಿಕ್ ಗೋಲು ದಾಖಲಿಸಿದರು. ಐನಂಡ ನ್ಯೂನ್ ನಾಚಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಬಯವಂಡ ಮತ್ತು ಕರವಂಡ ನಡುವಿನ ಪಂದ್ಯದಲ್ಲಿ 2-1 ಗೋಲುಗಳ ಅಂತರದಲ್ಲಿ ಕರವಂಡ ತಂಡ ಗೆಲುವು ದಾಖಲಿಸಿದರು. ಕರವಂಡ ಪರ ಕಿಶನ್ ಸೋಮಯ್ಯ ಹಾಗೂ ದಕ್ಷನ್ ದೇವಯ್ಯ ತಲಾ 1 ಗೋಲು ದಾಖಲಿಸಿದರು. ಬಯವಂಡ ಪರ ಜನಕ 1 ಗೋಲು ಬಾರಿಸಿದರು. ಬಯವಂಡ ಪೊನ್ನಣ್ಣ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.
ಕಳ್ಳಿಚಂಡ ಮತ್ತು ಕಂಬೀರಂಡ ನಡುವಿನ ಪಂದ್ಯದಲ್ಲಿ ನಿಗದಿತ ಅವಧಿಯಲ್ಲಿ ಎರಡೂ ತಂಡಗಳು ತಲಾ 1 ಗೋಲುಗಳ ಮೂಲಕ ಸಮಬಲ ಸಾಧಿಸಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 5-3 ಗೋಲುಗಳ ಅಂತರದಲ್ಲಿ ಕಂಬೀರಂಡ ಜಯ ಸಾಧಿಸಿತು. ಕಂಬೀರಂಡ ಪರ ಬೋಪಣ್ಣ ಹಾಗೂ ಕಳ್ಳಿಚಂಡ ಪರ ಗೌತಮ್ ತಲಾ 1 ಗೋಲು ದಾಖಲಿಸಿದರು. ಕಳ್ಳಿಚಂಡ ಸಾವನ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕೋನೇರಿರ ಮತ್ತು ಇಟ್ಟೀರ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಇಟ್ಟೀರ ಗೆಲುವು ದಾಖಲಿಸಿತು. ಇಟ್ಟೀರ ಪರ ಶಾಮ್ ಸೋಮಣ್ಣ 1 ಗೋಲು ದಾಖಲಿಸಿದರು. ಕೋನೇರಿರ ಟಿನು ಪೂವಯ್ಯ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕಾಂಡಂಡ ಮತ್ತು ಕುಲ್ಲೇಟಿರ ನಡುವಿನ ಪಂದ್ಯದಲ್ಲಿ ಎರಡೂ ತಂಡಗಳು ಶೂನ್ಯ ಸಾಧನೆ ಮಾಡಿದ ಹಿನ್ನೆಲೆ ಟೈ ಬ್ರೇಕರ್‍ನಲ್ಲಿ 4-3 ಗೋಲುಗಳ ಅಂತರದಲ್ಲಿ ಕಾಂಡಂಡ ಗೆಲುವು ದಾಖಲಿಸಿತು. ಕುಲ್ಲೇಟಿರ ಶುಭಂ ಚಿಟ್ಟಿಯಪ್ಪ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು. ಕುಪ್ಪಂಡ (ಕೈಕೇರಿ) ಮತ್ತು ಮತ್ರಂಡ ನಡುವಿನ ಪಂದ್ಯದಲ್ಲಿ 1-0 ಗೋಲುಗಳ ಅಂತರದಲ್ಲಿ ಕುಪ್ಪಂಡ ತಂಡ ಜಯ ಸಾಧಿಸಿತು. ಕುಪ್ಪಂಡ ಪರ ಸೋಮಯ್ಯ 1 ಗೋಲು ದಾಖಲಿಸಿದರು. ಮತ್ರಂಡ ವಿಶಾಲ್ ಪ್ಲೇಯರ್ ಆಫ್ ದಿ ಮ್ಯಾಚ್ ಪ್ರಶಸ್ತಿ ಪಡೆದರು.









