
ಮಡಿಕೇರಿ ಏ.23 NEWS DESK : ಕೊಡವ ಕೌಟುಂಬಿಕ ಹಾಕಿ ಹಬ್ಬವು ಕ್ರೀಡೆಯ ಜತೆಗೇ ತನ್ನ ವೈವಿಧ್ಯತೆಯ ಕಾಯ೯ಕ್ರಮಗಳ ಮೂಲಕ ಜಗತ್ತಿನ ಗಮನವನ್ನೇ ಸೆಳೆದಿದ್ದು, ಇಂಥ ಕ್ರೀಡಾ ಹಬವನ್ನು ಮುಂದಿನ ವಷ೯ಗಳಲ್ಲಿ ಮತ್ತಷ್ಟು ವೈಭವದಿಂದ ಆಯೋಜಿಸುವ ನಿಟ್ಟಿನಲ್ಲಿ ಸವ೯ ಸಮುದಾಯವರೂ ಕೈಜೋಡಿಸಬೇಕೆಂದು ಹಿರಿಯ ರಾಜಕಾರಣಿ ಎಂ.ಸಿ.ನಾಣಯ್ಯ ಕರೆ ನೀಡಿದ್ದಾರೆ. ಮಡಿಕೇರಿಯ ರೆಡ್ ಬ್ರಿಕ್ಸ್ ಇನ್ ನ ಸತ್ಕಾರ್ ಸಭಾಂಗಣದಲ್ಲಿ ಪತ್ರಕತ೯ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಬರೆದು ಪತ್ರಕತ೯ ಅನಿಲ್ ಹೆಚ್.ಟಿ. ಹೊರತಂದಿರುವ ಸ್ಟಿಕ್ ವಕ್೯ ಮ್ಯಾಜಿಕ್ – ಸಾಗಾ ಆಫ್ ಕೊಡವ ಫ್ಯಾಮಿಲಿ ಹಾಕಿ ಎಂಬ ಕೊಡವ ಹಾಕಿ ಪಂದ್ಯಾಟದ 25 ವಷ೯ಗಳ ಇತಿಹಾಸದ ಮಾಹಿತಿಯುಳ್ಳ ಇಂಗ್ಲೀಷ್ ಪುಸ್ತಕವನ್ನು ಲೋಕಾಪ೯ಣೆಗೊಳಿಸಿ ಅವರು ಮಾತನಾಡಿದರು. 5 ಸಾವಿರ ಹಾಕಿ ಆಟಗಾರರು ಪಂದ್ಯಾಟದಲ್ಲಿ ಪಾಲ್ಗೊಳ್ಳುವುದೇ ಚರಿತ್ರಾಹ೯ ವಿಚಾರ. ಲಿಮ್ಕಾ ಬುಕ್ ಆಫ್ ರೆಕಾಡ್ಸ್೯, ಗಿನ್ನೀಸ್ ರೆಕಾಡ್೯ಗೂ ಕೂಡ ಸೇರಿರುವ ಹಾಕಿ ಪಂದ್ಯಾವಳಿ ಮುಂದಿನ ದಿನಗಳಲ್ಲಿ ವಿಶ್ವದಾಖಲೆಯನ್ನು ನಿರಂತರ ಉಳಿಸಿಕೊಳ್ಳುವಂತಾಗಲಿ ಎಂದು ನಾಣಯ್ಯ ಹಾರೈಸಿದರು. ಪಾಂಡಂಡ ಕುಟ್ಟಪ್ಪ ಮತ್ತು ಕಾಶಿ ಸಹೋದರರ ಪರಿಕಲ್ಪನೆಯಲ್ಲಿ ಮೂಡಿದ ಕೊಡವ ಕೌಟುಂಬಿಕ ಹಾಕಿ ಯಾವುದೇ ಸಮಸ್ಯೆಗಳಿಲ್ಲದೇ 25 ವಷ೯ಗಳನ್ನು ಪೂರೈಸಿದೆ. 25 ಕುಟುಂಬಗಳ ಆಯೋಜಕ ಸಮಿತಿ ಈ ಯಶಸ್ಸಿನಲ್ಲಿ ಪಾಲುದಾರರಾಗಿದ್ದಾರೆ. ಅಂಥ ಎಲ್ಲಾ ಕುಟುಂಬಗಳನ್ನೂ 25 ನೇ ವಷಾ೯ಚರಣೆ ಸಂದಭ೯ ಸ್ಮರಿಸಿಕೊಳ್ಳುವುದು ಅಗತ್ಯ ಎಂದೂ ನಾಣಯ್ಯ ಹೇಳಿದರು. ಕೊಡವ ಹಾಕಿ ಅಕಾಡೆಮಿಯ ಅಧ್ಕ್ಷಕ್ಷ ಪಾಂಡಂಡ ಬೋಪಣ್ಣ ಮಾತನಾಡಿ, ತನ್ನ ತಂದೆ ಪಾಂಡಂಡ ಕುಟ್ಟಪ್ಪನವರು ಕೊಡವ ಕುಟುಂಬಗಳ ನಡುವೇ ಹಾಕಿ ಪಂದ್ಯಾವಳಿ ಪ್ರಾರಂಭ ಮಾಡಿದಾಗ ಅನೇಕರು ವೖತ್ತಿಪರರಲ್ಲದವರನ್ನು ಬಳಸಿಕೊಂಡು ಎಂಥ ಹಾಕಿ ಎಂದು ವ್ಯಂಗ್ಯ, ಹಾಸ್ಯ ಮಾಡಿದ್ದರು. ಆದರೂ ಛಲಬಿಡದೆ ತನ್ನ ತಂದೆ ಕುಟ್ಟಪ್ಪನವರು ಹಾಕಿ ಪಂದ್ಯಾವಳಿಯನ್ನು ಯಶಸ್ಸಿನ ಹಾದಿಯಲ್ಲಿ ಸಾಗಿಸಿದ್ದರು. ತಂದೆ ಹಾಕಿ ಕೊಟ್ಟ ಮಾಗ೯ದಶ೯ನದಂತೆ ಕೊಡವ ಹಾಕಿ ಅಕಾಡೆಮಿಯ ಅಧ್ಯಕ್ಷನಾಗಿ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿಯನ್ನು ಮುನ್ನಡೆಸುತ್ತಿದ್ದೇನೆ. ಪ್ರತೀ ವಷ೯ವೂ 20-30 ಹೊಸ ತಂಡಗಳು ಪಂದ್ಯಾವಳಿಯಲ್ಲಿ ಪಾಲ್ಗೊಳ್ಳುತ್ತಿವೆ. ಇದೇ ರೀತಿ ಮುಂದುವರೆದರೆ ಮುಂದಿನ 5 ವಷ೯ಗಳಲ್ಲಿ 500 ತಂಡಗಳು ಬರುವ ಸಾಧ್ಯತೆಯಿದೆ. ಈಗಾಗಲೇ 2033 ರವರೆಗೆ ಅಂದರೆ ಮುಂದಿನ 8 ವಷ೯ಗಳವರೆಗೂ ಆಯೋಜಿಕ ಕುಟುಂಬಸ್ಥರು ಕೊಡವ ಹಾಕಿ ಪಂದ್ಯಾವಳಿ ಆಯೋಜನೆಗೆ ಸಿದ್ದರಾಗಿದ್ದಾರೆ. ಅಂತರರಾಷ್ಟ್ರೀಯ ಸಿಂಥೆಟಿಕ್ ಟಫ್೯, ಮೈದಾನ ಬೇಕು. ಹಾಕಿಗೆ ಆದ್ಯತೆ ನೀಡುವಂಥ ಕ್ರೀಡಾ ಅಕಾಡೆಮಿಯೂ ಕೊಡಗಿಗೆ ಬೇಕು. ಇದರ ಜಾರಿಗೆ ತಾನು ಪ್ರಯತ್ನಿಸುತ್ತಿದ್ದೇನೆ ಎಂದೂ ಪಾಂಡಂಡ ಬೋಪಣ್ಣ ಹೇಳಿದರು. ಸಕಾ೯ರದ ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿಯ ಕೊಡಗು ಜಿಲ್ಲಾ ಅಧ್ಯಕ್ಷ ತೀತೀರ ಧಮ೯ಜ ಉತ್ತಪ್ಪ ಮಾತನಾಡಿ, ಪಾಂಡಂಡ ಕುಟ್ಟಪ್ಪನವರು 1997 ರಲ್ಲಿ ಪ್ರಾರಂಭಿಸಿದ್ದ ಕೊಡವ ಕುಟುಂಬಗಳ ನಡುವಿನ ಹಾಕಿ ಪಂದ್ಯಾವಳಿ ಅನೇಕ ದಾಖಲೆಗಳ ಮೂಲಕ ದೇಶದಲ್ಲಿಯೇ ಪುಟ್ಟ ಜನಾಂಗವಾದ ಕೊಡವರ ಕ್ರೀಡಾ ಸಾಧನೆಯನ್ನು ವಿಶ್ವಮಟ್ಟದಲ್ಲಿ ಗುರುತಿಸುವಂತಾಗಿದೆ ಎಂದು ಶ್ಲಾಘಿಸಿದರು. 25 ವಷ೯ಗಳ ಹಾಕಿ ಪಂದ್ಯಾವಳಿಯ ಸಮಗ್ರ ಮಾಹಿತಿಯ ಕೖತಿಯನ್ನು ಪ್ರಕಟಿಸಿರುವುದು ಶ್ಲಾಘನೀಯ ಪ್ರಯತ್ನವಾಗಿದೆ ಎಂದೂ ಧಮ೯ಜ ಹೇಳಿದರು. ಸ್ಟಿಕ್ ವಕ್೯ ಮ್ಯಾಜಿಕ್ ಕೖತಿಯ ಲೇಖಕ, ಪತ್ರಕತ೯ ಕೊಟ್ಟಿಯಂಡ ಜೀವನ್ ಚಿಣ್ಣಪ್ಪ ಮಾತನಾಡಿ, ಅನೇಕ ಕುಟುಂಬಗಳಲ್ಲಿ ಸಮಪ೯ಕ ಮಾಹಿತಿಯ ದಾಖಲೆಯ ಕೊರತೆಯಿದೆ. ಮುಂದಿನ ದಿನಗಳಲ್ಲಿ ಇಂಥ ಕೊರತೆಯಾಗಂತೆ ಕೊಡವ ಹಾಕಿ ಅಕಾಡೆಮಿಯೇ ಪರಿಪೂಣ೯ ರೀತಿಯಲ್ಲಿ ಪ್ರತೀ ವಷ೯ದ ಹಾಕಿ ಪಂದ್ಯಾವಳಿಯ ದಾಖಲೆಯನ್ನು ಸಂಗ್ರಹಿಸಿಟ್ಟುಕೊಳ್ಳುವಂತಾಗಬೇಕು ಎಂದರು. ಕೊಡವ ಹಾಕಿ ಪಂದ್ಯಾವಳಿ ಜಗತ್ತಿನ ಗಮನವನ್ನೇ ಸೆಳೆದಿರುವ ಈ ಸಂದಭ೯ ಕೊಡಗಿನಲ್ಲಿ ಹಾಕಿ ಇತಿಹಾಸವನ್ನು ಬಿಂಬಿಸುವ ಹಾಕಿ ಕ್ರೀಡಾ ಸಂಗ್ರಹಾಲಯ ರೂಪುಗೊಳ್ಳುವಂತಾಗಬೇಕು ಎಂದೂ ಜೀವನ್ ಸಲಹೆ ನೀಡಿದರು. ಕೊಡವ ಹಾಕಿ ಪಂದ್ಯಾವಳಿಯ ಮೂಲಕ ಇತ್ತೀಚಿ ವಷ೯ಗಳಲ್ಲಿ ಯುವ ಆಟಗಾರರಂತೆಯೇ ಯುವ ವೀಕ್ಷಕ ವಿವರಣೆಗಾರರು ಹೊರಹೊಮ್ಮುತ್ತಿರುವುದು ಶ್ಲಾಘನೀಯ ಬೆಳವಣಿಗೆ ಎಂದೂ ಜೀವನ್ ಹೇಳಿದರು. ಮುದ್ದಂಡ ಹಾಕಿ ಪಂದ್ಯಾವಳಿ ಆಯೋಜಕ ಸಮಿತಿ ಅಧ್ಯಕ್ಷ ರಶಿನ್ ಸುಬ್ಬಯ್ಯ ಮಾತನಾಡಿ, ಹೊಸ ಪ್ರಯತ್ನವಾಗಿ ಈ ಕೊಡವ ಹಾಕಿ ಪಂದ್ಯಾವಳಿ ಸಾಗಿ ಬಂದ ಹಾದಿಯ ಬಗ್ಗೆ ಸಾಕ್ಷ್ಯ ಚಿತ್ರವನ್ನೂ ನಿಮಿ೯ಸುತ್ತಿದ್ದೇವೆ .ಸೋಷಿಯಲ್ ಮೀಡಿಯಾ ಮೂಲಕ ಯುವಪೀಳಿಗೆಯನ್ನು ಮುದ್ದಂಡ ಹಾಕಿ ಪಂದ್ಯಾವಳಿ ನಿರೀಕ್ಷಗೂ ಮೀರಿ ತಲುಪಿದೆ ಎಂದರು. ಇದೇ ರೀತಿಯ ವಿನೂತನ ಪ್ರಯತ್ನಗಳು ಪ್ರತೀ ವಷ೯ವೂ ಮುಂದುವರೆದರೆ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿಯೂ ಪ್ರಜ್ವಲಿಸಲು ಸಾಧ್ಯವಿದೆ ಎಂದೂ ರಶಿನ್ ಸುಬ್ಬಯ್ಯ ಹೇಳಿದರು. ಸ್ಟಿಕ್ ವಕ್೯ ಮ್ಯಾಜಿಕ್ ಕೃತಿಯ ಪ್ರಕಾಶಕ, ಪತ್ರಕತ೯ ಅನಿಲ್ ಹೆಚ್. ಟಿ. ಮಾತನಾಡಿ, 1 ಸಮುದಾಯ,1 ನಾಡು, 1 ಕ್ರೀಡೆ, ನೂರಾರು ತಂಡಗಳು, ಸಾವಿರಾರು ಆಟಗಾರರ ಮೂಲಕ ಕೊಡವ ಕೌಟುಂಬಿಕ ಹಾಕಿ ಪಂದ್ಯಾವಳಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆದಿದೆ. ಈ ಬಾರಿ ಬೆಳ್ಳಿ ಹಬ್ಬದ ಸಂಭ್ರಮದಲ್ಲಿ ಮುದ್ದಂಡ ಕುಟುಂಬಸ್ಥರು ಮಹಿಳಾ ಹಾಕಿ ಪಂದ್ಯಾವಳಿಯ ಮೂಲಕ ಮಹಿಳೆಯರಿಗೂ ಆದ್ಯತೆ ನೀಡುವ ಮಹತ್ವದ ಪ್ರಯತ್ನಕ್ಕೆ ಮುದ್ದಂಡ ಹಾಕಿ ಪಂದ್ಯಾವಳಿ ಸಮಿತಿಯವರು ಮುಂದಾಗಿದ್ದಾರೆ ಎಂದು ಹೆಮ್ಮೆ ವ್ಯಕ್ತಪಡಿಸಿದರು. ಹೆಸರಾಂತ ಹಾಕಿ ಕ್ರೀಡಾ ವೀಕ್ಷಕ ವಿವರಣೆಗಾರ ಮಾಳೇಟಿರ ಶ್ರೀನಿವಾಸ್ ಮಾತನಾಡಿ, ಕೊಡವ ಹಾಕಿ ಪಂದ್ಯಾವಳಿ ಕೇವಲ ಕೊಡವ ಜನಾಂಗದವರಿಗೆ ಮಾತ್ರ ಸೇರಿದ್ದು ಎಂದು ಯಾರೂ ಭಾವಿಸಬಾರದು. ಮಡಿಕೇರಿಯಲ್ಲಿ ಈ ಬಾರಿ ಆಯೋಜಿಸಲ್ಪಟ್ಟಿರುವ ಮುದ್ದಂಡ ಹಾಕಿ ಪಂದ್ಯಾವಳಿಯನ್ನು ಎಲ್ಲಾ ಜನಾಂಗದವರೂ ವೀಕ್ಷಿಸಿ ಪ್ರೋತ್ಸಾಹಿಸುವುದು ಅಗತ್ಯ ಎಂದರು. ಕೊಡವ ಜನಾಂಗದ ಮೊದಲ ಅಂತರರಾಷ್ಟ್ರೀಯ ಹಾಕಿ ಆಟಗಾರ ಮಾಳೆಯಂಡ ಡಿ. ಮುತ್ತಪ್ಪ ವೇದಿಕೆಯಲ್ಲಿದ್ದು ಕೃತಿಗೆ ಶುಭ ಹಾರೈಸಿದರು. ಇದೇ ಸಂದಭ೯ ಕೊಡವ ಕೌಟುಂಬಿಕ ಹಾಕಿ ಪಂದ್ಯಾಟದ ಮೊದಲ ಪಂದ್ಯಾವಳಿಯಲ್ಲಿ 1997 ರಲ್ಲಿ ಮೊದಲ ಗೋಲು, ಮೊದಲ ಹ್ಯಾಟ್ರಿಕ್ ಗಳಿಕೆಯ ಸಾಧನೆ ಮಾಡಿದ್ದ ಅಪ್ಪನೆರವಂಡ ಚುಮ್ಮಿ ದೇವಯ್ಯ ಮತ್ತು ಕೊಡವ ಹಾಕಿ ಪಂದ್ಯಾವಳಿಯ 25 ನೇ ವಷ೯ದ ಸಂದಭ೯ ಮಡಿಕೇರಿಯಲ್ಲಿ ಬೖಹತ್ ಕಲೆಯ ಮೂಲಕ ಹಾಕಿಯ ಬೆಳ್ಳಿ ಹಬ್ಬದ ಸಂಭ್ರಮವನ್ನು ಪ್ರದಶಿ೯ಸಿದ ಮಚ್ಚಾರಂಡ ದೀಪಿಕಾ ಅಪ್ಪಯ್ಯ ಅವರನ್ನು ಗೌರವಿಸಲಾಯಿತು. ಮಾದೇಟಿರ ಬೆಳ್ಯಪ್ಪ ನಿರೂಪಿಸಿ, ಅಲೆಮಾಡ ಚಿತ್ರಾ ನಂಜಪ್ಪ ನಿವ೯ಹಿಸಿದ ಕಾಯ೯ಕ್ರಮದಲ್ಲಿ ಚೆಟ್ಟೀರ ಗ್ರಂಥ ಕಾಯ೯ಪ್ಪ ಪ್ರಾಥಿ೯ಸಿದರು.
ಸ್ಟಿಕ್ ವಕ್೯ ಮ್ಯಾಜಿಕ್ ಕೃತಿಯ ಬಗ್ಗೆ :: 25 ವಷ೯ಗಳ ಕೊಡವ ಹಾಕಿ ಪಂದ್ಯಾವಳಿಯ ಸಮಗ್ರ ಮಾಹಿತಿ – ಛಾಯಾಚಿತ್ರಗಳು 172 ಪುಟಗಳ ಲ್ಲಿಇವೆ. ಹಾಕಿ ವೀಕ್ಷಕ ವಿವರಣೆಗಾರರ ಮಹತ್ವದ ಕುರಿತು ಮಾಹಿತಿ, ಕೊಡಗಿನ ಒಲಂಪಿಯನ್ ಹಾಕಿ ಕ್ರೀಡಾತಾರೆಗಳ ಮಾಹಿತಿ, ಬಾರತಹಾಕಿ ತಂಡ ವಿಶ್ವಕಪ್ ಗೆದ್ದ ಸಂದಭ೯ದ ಮೆಲಕು. ಕ್ರೀಡಾ ತಜ್ಞ ಡಾ. ಕಲ್ಯಾಟಂಡ ಬಿ. ಚಿಣ್ಣಪ್ಪ ಅವರ ಸಾಧನೆಯ ಮಾಹಿತಿ, ಕೊಡವ ಹಾಕಿ ಅಕಾಡೆಮಿ ಅಧ್ಯಕ್ಷರ ಸಂದಶ೯ನ









