
ಮಡಿಕೇರಿ NEWS DESK ಏ.25 : ಜಮ್ಮು ಕಾಶ್ಮೀರದಲ್ಲಿ ಉಗ್ರರಿಂದ ನಡೆದ ಭೀಕರ ಹತ್ಯಾಕಾಂಡವನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಹಾಗೂ ಸರ‍್ವಜನಿಕರು ಶನಿವಾರಸಂತೆಯಲ್ಲಿ ಪಂಜಿನ ಮೆರವಣಿಗೆಯೊಂದಿಗೆ ಪ್ರತಿಭಟನೆ ನಡೆಸಿದರು. ರ‍್ತಕರು ಅಂಗಡಿಗಳನ್ನು ಬಂದ್ ಮಾಡಿ ಸಂತಾಪ ಸೂಚಿಸಿದರು. ಹಿಂದೂ ಸಂಘಟನೆಗಳ ಪ್ರಮುಖರಾದ ಜಾಗನಳ್ಳಿ ಸುರೇಶ್, ಧನಂಜಯ್, ದಿನೇಶ್, ಎಸ್.ಎನ್.ರಘು, ಅನಂತಕುಮಾರ್, ವಿಶ್ವ ಹಿಂದೂ ಪರಿಷತ್ತಿನ ರಾಜ್ಯ ಸಂಘಟನಾ ಕರ‍್ಯರ‍್ಶಿ ಉಲ್ಲಾಸ್. ತಳೂರು ಪುನೀತ್ ಮತ್ತಿತರರು ಪಾಲ್ಗೊಂಡು ಭಯೋತ್ಪಾದಕರ ಹೇಯ ಕೃತ್ಯವನ್ನು ಖಂಡಿಸಿದರು.








