
ಕುಶಾಲನಗರ ಏ.25 NEWS DESK : ತೊರೆನೂರು ಗ್ರಾ.ಪಂ ವ್ಯಾಪ್ತಿಯ ದೊಡ್ಡ ಅಳುವಾರ ಗ್ರಾಮದ ಗ್ರಾಮದೇವತೆ ದೊಡ್ಡಮ್ಮ ಹಾಗೂ ಚಿಕ್ಕಮ್ಮ ದೇವರ ವಾರ್ಷಿಕ ಪೂಜೋತ್ಸವ ಶ್ರದ್ಧಾಭಕ್ತಿಯಿಂದ ನೆರವೇರಿತು. ಮುಂಜಾನೆ ದೇವರಿಗೆ ವಿವಿಧ ಅಭಿಷೇಕ, ಹೋಮ ಹವನಗಳು ನಡೆದವು. ದೇವಾಲಯದ ಗರ್ಭಗುಡಿಯಲ್ಲಿನ ದೇವತಾ ಮೂರ್ತಿಗಳನ್ನು ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಿ ಮಹಾಪೂಜೆ ನೆರವೇರಿಸಿದರು. ನಂತರ ಭಕ್ತಾಧಿಗಳಿಗೆ ಮಧ್ಯಾಹ್ನದ ಅನ್ನ ಪ್ರಸಾದ ನೆರವೇರಿಸಲಾಯಿತು. ದೇವಾಲಯದ ಆವರಣದಲ್ಲಿ ಹಮ್ಮಿಕೊಂಡಿದ್ದ ಧಾರ್ಮಿಕ ಕಾರ್ಯಕ್ರಮದಲ್ಲಿ ಕುಶಾಲನಗರ ತಾಲ್ಲೂಕು ಗ್ಯಾರಂಟಿ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಮಾತನಾಡಿ, ಧರ್ಮ ಶ್ರದ್ಧಾ ಕೇಂದ್ರಗಳು ಮನುಷ್ಯನನ್ನು ನೈತಿಕವಾಗಿ ಗಟ್ಟಿಮಾಡಬೇಕು. ಮನಸ್ಸನ್ನು ಪ್ರಶಾಂತವಾಗಿ ಇಡಬೇಕು. ನಿರುಮ್ಮಳವಾದ ಮನಸ್ಥಿತಿ ಹೊಂದುವ ಮೂಲಕ ಆರೋಗ್ಯದಿಂದ ಇರಲು ಸಲಹೆ ನೀಡಿದರು. ದೇವಾಲಯ ಸಮಿತಿ ಅಧ್ಯಕ್ಷ ಎ.ಆರ್.ಮಹದೇವ್, ತೊರೆನೂರು ಗ್ರಾಪಂ ಅಧ್ಯಕ್ಷೆ ಶೋಭಾ ಪ್ರಕಾಶ್, ಅಳುವಾರದಮ್ಮ ದೇವಾಲಯ ಸಮಿತಿ ಅಧ್ಯಕ್ಷ ಎ.ಎನ್.ರಮೇಶ್, ಗ್ರಾಪಂ ಸದಸ್ಯ ಕೆ.ಬಿ.ದೇವರಾಜು, ತಾಲ್ಲೂಕು ಅಕ್ರಮ ಸಕ್ರಮ ಸಮಿತಿ ಸದಸ್ಯ ಸಂಜೀವಯ್ಯ, ಗ್ಯಾರಂಟಿ ಸಮಿತಿ ಸದಸ್ಯ ಅಳುವಾರ ಕಿಶೋರ್, ಹೆಚ್.ಎನ್.ರಾಜಶೇಖರ್, ಕೆ.ಎಸ್.ಕೃಷ್ಣೇಗೌಡ ಇದ್ದರು. ದೇವಾಲಯದ ಅರ್ಚಕ ದೇವರಾಜು ಹಾಗೂ ಜಗದೀಶ್ ಪೂಜಾ ವಿಧಿ ನಡೆಸಿಕೊಟ್ಟರು.









