
ಮಡಿಕೇರಿ ಏ.27 NEWS DESK : ಹಾಕಿ ಇಂಡಿಯಾ ಸಂಸ್ಥೆಗೆ 100 ವಷ೯ಗಳು ತುಂಬಿದ ಹಿನ್ನಲೆಯಲ್ಲಿ ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ನಿಂದ ವಿಶಿಷ್ಯವಾಗಿ ಈ ಸಂಭ್ರಮವನ್ನು ಆಚರಿಸಲಾಯಿತು. ಭಾರತೀಯ ಹಾಕಿ ರಂಗದ ದಿಗ್ಗಜ ಆಟಗಾರರನ್ನು ಗಾಲ್ಪ್ ಕ್ಲಬ್ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತ ಮದ್ರಾಸ್ ಕ್ರಿಕೆಟ್ ಕ್ಲಬ್ ಗಳ ಸಂಯುಕ್ತಾಶ್ರಯದಲ್ಲಿ ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಸಭಾಂಗಣದಲ್ಲಿ ಶನಿವಾರ ವಿಶಿಷ್ಟ ಕಾಯ೯ಕ್ರಮ ಆಯೋಜಿತವಾಗಿತ್ತು. ಭಾರತೀಯ ಹಾಕಿ ಕ್ರೀಡೆಗೆ ಶತಮಾನೋತ್ಸವದ ಸಂಭ್ರಮವನ್ನು ಹಾಕಿದಿಗ್ಗಜರಿಗೆ ಸನ್ಮಾನದ ಗೌರವಾಪ೯ಣೆ ಮೂಲಕ ಆಚರಿಸಲಾಯಿತು. ಮಾಳೆಯಂ ಮುತ್ತಪ್ಪ, ಅಂಜಪರವಂಡ ಡಾ. ಬಿ. ಸುಬ್ಬಯ್ಯ. ಮುಕ್ಕಾಟೀರ ತಿಮ್ಮಯ್ಯ ಅಪ್ಪಯ್ಯ. ಬಾಳೆಯಡ ಪೂಣಚ್ಚ, ಬುಟ್ಟಿಯಂಡ ಚಂಗಪ್ಪ, ಮುಕ್ಕಾಟೀರ ವಿನೋದ್ ಚಿಣ್ಣಪ್ಪ, ಕೂತಂಡ ಪೂಣಚ್ಚ, ಪೈಕೇರ ಕಾಳಯ್ಯ, ಮನೆಯಪಂಡ ಸೋಮಯ್ಯ, ಸಿ.ಎಸ್. ಪೂಣಚ್ಚ, ಲೆಫ್ಟಿನೆಂಟ್ ಕನ೯ಲ್ ಬಾಳೆಯಡ ಕೆ. ಸುಬ್ರಹ್ಮಣಿ, ಬಿ.ಪಿ. ಗೋವಿಂದ, ಮೊಹಮ್ಮದ್ ರಿಯಾಜ್, ಮತ್ತು ಪದ್ಮಶ್ರೀ ವಾಸುದೇವನ್ ಭಾಸ್ಕರನ್ ಅವರನ್ನು ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಅಧ್ಯಕ್ಷ ಐಚೇಟ್ಟೀರ ಅನಿಲ್, ಗೌರವ ಕಾಯ೯ದಶಿ೯ ಕೊಂಗೆಟೀರ ಹರೀಶ್ ಅಪ್ಪಣ್ಣ, ಮದ್ರಾಸ್ ಕ್ರಿಕೆಟ್ ಕ್ಲಬ್ ನ ಗೌರವ ಕಾಯ೯ದಶಿ೯ ನಿರಂಜನ್ ಮುದಲಿಯಾರ್, ಕ್ರಿಕೆಟ್ ಕ್ಲಬ್ ನ ಹಾಕಿ ಕ್ರಿೀಡಾ ಸಮಿತಿ ಅಧ್ಯಕ್ಷ ರಾಜೀವ್ ರೆಡ್ಡಿ ಹಾಜರಿದ್ದರು. ಈ ಸಂದಭ೯ ಮಾತನಾಡಿದ ಐಚೆಟ್ಟೀರ ಅನಿಲ್, ಮದ್ರಾಸ್ ಕ್ರಿಕೆಟ್ ಕ್ಲಬ್ ಕೂಡ ಶತಮಾನೋತ್ಸವ ಪೂರೈಸುತ್ತಿದೆ. ಇದೇ ಸಂದಭ೯ ಭಾರತೀಯ ಹಾಕಿಗೆ ಕೂಡ ಶತಮಾನ ಭತಿ೯?ಾಗುತ್ತಿರುವುದು ಕ್ರೀಡಾ ಕ್ಷೇತ್ರಕ್ಕೆ ಹೆಮ್ಮೆ ತರುವಂಥದ್ದು ಎಂದರಲ್ಲದೇ, ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ವತಿಯಿಂದ ದೇಶದ ಹಾಕಿ ರಂಗದ ದಿಗ್ಗಜರನ್ನು ಸನ್ಮಾನಿಸುವ ಮೂಲಕ ಹಾಕಿ ಕ್ರೀಡೆಗೆ ಗಾಲ್ಪ್ ಕ್ಪೀಡಾಳುಗಳು ತಮ್ಮ ಗೌರವ ಸಲ್ಲಿಸುತ್ತಿದ್ದಾರೆ ಎಂದರು. ಸನ್ಮಾನಕ್ಕೆ ಪಾತ್ರರಾದ ಹಾಕಿ ದಿಗ್ಗಜರು ಯುವಕ್ರೀಡಾಪಟುಗಳಿಗೆ ಮಾದರಿಯಾಗಿದ್ದಾರೆ ಎಂದು ಶ್ಲಾಘಿಸಿದ ಅನಿಲ್, ಇವರ ಪ್ರೋತ್ಸಾಹ ಭಾರತದ ಹಾಕಿ ಕ್ರೀಡಾರಂಗದಲ್ಲಿ ನವಚೈತನ್ಯಕ್ಕೆ ಕಾರಣವಾಗಬೇಕಾಗಿದೆ ಎಂದು ಆಶಯ ವ್ಯಕ್ತಪಡಿಸಿದರು. ಸನ್ಮಾನಿತರ ಪರವಾಗಿ ಮಾತನಾಡಿದ ಲೆಪ್ಠಿನೆಂಟ್ ಕನ೯ಲ್ ಬಾಳೆಯಡ ಕೆ. ಸುಬ್ರಹ್ಮಣಿ , ಭಾರತ ಹಾಕಿಗೆ ಚಿನ್ನದ ಪದಕ ದೊರಕದೇ 50 ವಷ೯ಗಳೇ ಆಗಿವೆ. ಯುವಕ್ರೀಡಾಪಟುಗಳು ಮತ್ತಷ್ಟು ಚೈತನ್ಯದೊಂದಿಗೆ ಭಾರತಕ್ಕೆ ಸ್ವಣ೯ ಪದಕ ದೊರಕಿಸುವ ನಿಟ್ಟಿನಲ್ಲಿ ಕಾಯ೯ಪ್ರವೖತ್ತರಾಗಬೇಕೆಂದರು. ಮಕೇ೯ರಾ ಡೌನ್ಸ್ ಗಾಲ್ಫ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್ ವತಿಯಿಂದ ನೀಡಲಾಗಿರುವ ಸನ್ಮಾನ ತಮ್ಮೆಲ್ಲರ ಕ್ರೀಡಾ ಸಾಧನೆಗೆ ಮತ್ತಷ್ಟು ಧನ್ಯತೆ ಮೂಡಿಸಿದೆ ಎಂದೂ ಅವರು ಸ್ಮರಿಸಿದರು. ಕಾಯ೯ಕ್ರಮವನ್ನು ಐಚೆಟ್ಟೀರ ರೋಹಿತ್ ನಿರೂಪಿಸಿದರು. ಮಕೇ೯ರಾ ಡೌನ್ಸ್ ಗಾಲ್ಪ್ ಕ್ಲಬ್ ಮತ್ತು ಮದ್ರಾಸ್ ಕ್ರಿಕೆಟ್ ಕ್ಲಬ್ ತಂಡಗಳ ನಡುವೇ ಮಡಿಕೇರಿಯ ಸಾಯಿ ಕ್ರೀಡಾನಿಲಯದ ಕೖತಕ ಹುಲ್ಲು ಹಾಸಿನ ಮೈದಾನದಲ್ಲಿ ಪ್ರದಶ೯ನ ಹಾಕಿ ಪಂದ್ಯಾಟ ನೆಡೆಯಿತು.









