
ಮಡಿಕೇರಿ ಏ.29 NEWS DESK : ಸುಮಾರು ಐದು ದಶಕಗಳ ಕಾಲ ರಾಜಕಾರಣದಲ್ಲಿ ತೊಡಗಿಸಿಕೊಂಡಿದ್ದ ಕಾಂಗ್ರೆಸ್ ಪಕ್ಷದ ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಅವರ ನಿಧನಕ್ಕೆ ಕೊಡಗು ಜಿಲ್ಲಾ ಕಾಂಗ್ರೆಸ್‍ನ ಪದಾಧಿಕಾರಿಗಳು ಸಂತಾಪ ಸೂಚಿಸಿದ್ದಾರೆ. ಕೊಡಗು ಜಿಲ್ಲಾ ಮಾಜಿ ಮೂಡಾ ಅಧ್ಯಕ್ಷ ಬಿ.ಕೆ.ಕೃಷ್ಣ, ಕೊಡವ ಅಕಾಡೆಮಿಯ ಮಾಜಿ ಅಧ್ಯಕ್ಷ ಪಿ.ಕೆ.ಪೊನ್ನಪ್ಪ, ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಮಾಜಿ ಶಾಸಕರುಗಳಾದ ಅರುಣ್ ಮಾಚಯ್ಯ, ಕೆ.ಎಂ.ಇಬ್ರಾಹಿಂ, ಡಿಸಿಸಿ ಉಪಾಧ್ಯಕ್ಷರುಗಳಾದ ಸುಜು ತಿಮ್ಮಯ್ಯ, ಕೆ.ಎಂ.ಲೋಕೇಶ್, ಅಬ್ದುಲ್ ರೆಹಮಾನ್, ಅರವಿಂದ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಎಸ್.ಐ.ಮುನೀರ್ ಅಹಮ್ಮದ್, ಕೊಲ್ಯದ ಗಿರೀಶ್, ವಿ.ಪಿ.ಸುರೇಶ್, ಹೊಸೂರು ಸೂರಜ್, ನಗರಸಭಾ ಸದಸ್ಯರುಗಳಾದ ಎಂ.ಬಿ.ಸದಾ ಮುದ್ದಪ್ಪ, ಮೂಡ ಅಧ್ಯಕ್ಷ ಬಿ.ವೈ.ರಾಜೇಶ್, ಸದಸ್ಯರಾದ ಆರ್.ಪಿ.ಚಂದ್ರಶೇಖರ್, ಕಾನಿಹಿತ್ತಲು ಮೊಣ್ಣಪ್ಪ, ಎಂ.ಎ.ಉಸ್ಮಾನ್, ಸಭಾಸ್ಟಿನ್, ಕರೀಂ, ಶ್ರೀಧರ್ ನಾಯರ್, ಎರ್ಮು ಹಾಜಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳು, ಕೆಪಿಸಿಸಿ ಸದಸ್ಯರುಗಳು ಅಲ್ಲದೇ ಬೆಲ್ಲು ಬೋಪಯ್ಯ, ಕೆ.ಜಿ.ಪೀಟರ್, ನೆರವಂಡ ಉಮೇಶ್, ಚುಮ್ಮಿದೇವಯ್ಯ, ಉದಯ ಕುಮಾರ್, ಖಲೀಲ್ ಬಾಷಾ, ಕುಶಾಲಪ್ಪ, ಸುರಯ್ಯ ಅಬ್ರಾರ್, ಫ್ಯಾನ್ಸಿ ಪಾರ್ವತಿ, ಪಿ.ಕೆ.ಜಗದೀಶ್, ಪ್ರಕಾಶ್ ಆಚಾರ್ಯ, ಅಂಬೆಕಲ್ ನವೀನ್, ನಾಪಂಡ ಮುತ್ತಪ್ಪ, ಕೆ.ಯು.ರಜಾಕ್, ಪುಷ್ಪ ಪೂಣಚ್ಚ, ಜಿ.ಸಿ.ಜಗದೀಶ್, ವಸಂತ್ ಕುಮಾರ್, ಮುನೀರ್ ಮಾಚಾರ್ ಮೊದಲಾದವರು ಶೋಕ ವ್ಯಕ್ತಪಡಿಸಿದ್ದಾರೆ.









