
ಮಡಿಕೇರಿ ಮೇ 1 NEWS DESK : ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಪೊನ್ನಂಪೇಟೆಯಲ್ಲಿ ಜಿಲ್ಲಾ ಮಟಟದ ಜ್ಞಾನಜ್ಯೋತಿ ಕಾರುಣ್ಯ ಕಾರ್ಯಕ್ರಮ ನಡೆಯಿತು. ಪೊನ್ನಂಪೇಟೆ ಇಗ್ಗುತ್ತಪ್ಪ ಕೊಡವ ಸೌಹಾರ್ದ ಸಹಕಾರಿ ಸಂಘದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳು, ಪೋಷಕರಿಲ್ಲದ ಹಾಗೂ ಒಂಟಿ ಪೋಷಕರಿರುವ ವಿದ್ಯಾರ್ಥಿಗಳು ಹಾಗೂ ವಿಶೇಷಚೇತನ ವಿದ್ಯಾರ್ಥಿಗಳಿಗೆ ನೋಟ್ ಪುಸ್ತಕ, ಬ್ಯಾಗ್, ಕೊಡೆ, ಬೆಡ್ ಶೀಟ್ ಹಾಗೂ ಇನ್ನಿತರ ಲೇಖನ ಪರಿಕರಗಳನ್ನು ಉಚಿತವಾಗಿ ವಿತರಿಸಲಾಯಿತು. ಎಂಎಸ್‍ಓ ವಕ್ತಾರ ಎಂ.ಇ.ಮಹಮ್ಮದ್ ಕಾರ್ಯಕ್ರಮ ಉದ್ಘಾಟಿಸಿದರು. ಎಂ.ಎಸ್.ಓ ಶಶಿಕುಮಾರ್ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಎಂಎಸ್‍ಓ ಸ್ಥಾಪಕ ಆಡ್ಮಿನ್ ರಶೀದ್ ಕೋರೋತ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಪೊನ್ನಂಪೇಟೆ ಸಮಾಜ ಸೇವಕ ಚೀರಂಡ ಕಂದಾ ಸುಬ್ಬಯ್ಯ, ಡಾ.ಶಿವಪ್ಪ, ಎಂಎಸ್‍ಓ ಆಡ್ಮಿನ್ ಬಾಳೆಯಡ ದಿವ್ಯಾ ಮಂದಪ್ಪ, ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಸುರೇಶ್ ಬಿಳಿಗೇರಿ ಪಾಲ್ಗೊಂಡಿದ್ದರು. ವಿಶೇಷ ಆಹ್ವಾನಿತರಾಗಿ ಬಿ.ಎಸ್.ಪ್ರವೀಣ್ ರೈ, ಆಲೆಮಾಡ ನವೀನ್ ದೇವಯ್ಯ, ಮೈಕಲ್ ವೇಗಸ್, ನಿಯಾಝ್ ಸುಂಟಿಕೊಪ್ಪ, ಮುದ್ದಿಯಡ ನಿತಿನ್, ಸೋನಿ ರೈ, ಆರಿಫಾ ಮೊಯ್ದು, ಟಿ.ಆರ್.ವಿನೋದ್, ರಾಧಾ ಶಶಿಕುಮಾರ್, ಸುನಿತಾ ಗಿರೀಶ್, ಆನಿ ಸಾಲ್ಡಾನ ಹಾಜರಿದ್ದರು. ಎಂಎಸ್‍ಓ ಅಡ್ಮಿನ್ ಅಗ್ನಿ ಚನ್ನನಾಯಕ ಹಾಗೂ ಲೀಲಾವತಿ ನಿರೂಪಿಸಿದರು. ಒಕ್ಕೂಟದ ಪ್ರತಿನಿಧಿ ಸುನಿತಾ ಬಿಳಿಗೇರಿ ಧ್ಯೇಯಗೀತೆ ಹಾಡಿದರು. ಚೀರಂಡ ಚಂಗಪ್ಪ ಸ್ವಾಗತಿಸಿದರು. ಎ.ಹೆಚ್.ಇಂದಿರಾ ವಂದಿಸಿದರು.
ಸನ್ಮಾನ :: ಸಮಾಜ ಸೇವಕರಾದ ಕಾಟಿಮಾಡ ಜಿಮ್ಮಿ ಅಣ್ಣಯ್ಯ, ಕೈಬುಲೀರ ಪಾರ್ವತಿ ಬೋಪಯ್ಯ, ಎಂಎಸ್‍ಓ ಸ್ಥಾಪಕ ಅಡ್ಮಿನ್ ಅನಿಲ್ ಕುಮಾರ್ ರೈ, ರಶೀದ್ ಕೋರೋಡ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು.









