

ಸುಂಟಿಕೊಪ್ಪ ಮೇ 6 NEWS DESK : ಸುಂಟಿಕೊಪ್ಪ ಸಂತ ಅಂತೋಣಿ ದೇವಾಲಯದ ಪಾಲಕ ಸಂತ ಅಂತೋಣಿಯವರ ವಾರ್ಷಿಕೋತ್ಸವವು ಸಂಭ್ರಮದಿಂದ ನಡೆಯಿತು. ವಾರ್ಷಿಕೋತ್ಸವದ ಅಂಗವಾಗಿ ಧ್ವಜಾರೋಹಣವನ್ನು ಬಳ್ಳಾರಿ ಧರ್ಮಕ್ಷೇತ್ರದ ಹಟ್ಟಿ ಪವಿತ್ರ ದೇವಾಲಯದ ಧರ್ಮಗುರುಗಳಾದ ಗುರುಗಳಾದ ರೇ.ಫಾ.ವಿಜಯಕುಮಾರ್, ಆರಾಧನೆಯನ್ನು ಬಳ್ಳಾರಿ ಧರ್ಮಕ್ಷೇತ್ರದ ವಂ.ಗುರುಗಳಾದ ರೇ.ಫಾ.ವಿಜಯಕುಮಾರ್, ಆನಂದ್ ಪ್ರಸಾದ್, ಅನಿಲ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ನೇರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಿದರು. ಬೆಂಗಳೂರು ಹೋಲಿ ಘೋಸ್ಟ್ ದೇವಾಲಯದ ಧರ್ಮಗರುಗಳಾದ ಸಿಲುವೈ ಮುತ್ತು ವಿಶೇಷ ಪೂಜೆ ಪ್ರಭೋದನೆಯನ್ನು ನೀಡಿದರು. ಮೈಸೂರಿನ ಪುಷ್ಪಗಿರಿ ಬಾಲಯೇಸುವಿನ ದೇವಾಲಯದ ಧರ್ಮಗುರುಗಳಾದ ಮರಿಯ ಕ್ಷೇವಿಯರ್ ಹಾಗೂ ಸಂತ ಸೆಬಾಸ್ಟಿನ್ ದೇವಾಲಯದ ಧರ್ಮಗುರುಗಳಾದ ಜೆರಾಲ್ಡ್ ಹಾಗೂ ಸಂತ ಅಂತೋಣಿ ದೇವಾಲಯದ ಧರ್ಮಗುರುಗಳಾದ ವಿಜಯಕುಮಾರ್ ಆಡಂಬರ ದಿವ್ಯ ಬಲಿಪೂಜೆ ಪ್ರಭೋದನೆ ಮತ್ತು ಮಕ್ಕಳಿಗೆ ಪ್ರಥಮ ಪರಮ ಪ್ರಸಾದ ಸಂಸ್ಕಾರ ವಿತರಿಸಿದರು. ಮಧ್ಯಾಹ್ನ ಅಂಬು ಕಾಣಿಕೆಯ ಹರಕೆಯನ್ನು ಭಕ್ತಾಧಿಗಳು ಸಲ್ಲಿಸಿದರು. ಮರುದಿನ ಸಂತ ಅಂತೋಣಿಯವರ ದೇವಾಲಯದ ಧರ್ಮಗುರುಗಳು ಹಾಗೂ ಕ್ರೈಸ್ತ ಭಕ್ತಾಧಿಗಳು ಕನ್ನಡ ವೃತ್ತದಲ್ಲಿ ಮೈಸೂರು ಧರ್ಮಕ್ಷೇತ್ರದ ವಿಶ್ರಾಂತ ಮಹಾ ಧರ್ಮಾಧ್ಯಕ್ಷರು ಹಾಗೂ ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿಗಳಾದ ಪರಮಪೂಜ್ಯ ಡಾ.ಬರ್ನಾಡ್ ಮೋರಸ್ ಅವರನ್ನು ಕನ್ನಡ ವೃತ್ತದಲ್ಲಿ ಅದ್ಧೂರಿಯಾಗಿ ಸ್ವಾಗತಿಸಿ ಮೆರವಣಿಗೆಯೊಂದಿಗೆ ದೇವಾಲಯಕ್ಕೆ ಕರೆದೋಯ್ಯಲಾಯಿತು. ಮೈಸೂರು ಧರ್ಮಕ್ಷೇತ್ರದ ಪ್ರೇಷಿತ ಆಡಳಿತಾಧಿಕಾರಿ ಪರಮಪೂಜ್ಯ ಡಾ. ಬರ್ನಾಡ್ ಮೋರಸ್ ಹಬ್ಬದ ಅಡಂಬರ ಗಾಯನ ದಿವ್ಯ ಬಲಿಪೂಜೆ ಹಾಗೂ ಮಕ್ಕಳಿಗೆ ಧೃಢೀಕರಣ ಸಂಸ್ಕಾರವನ್ನು ನೇರವೇರಿಸಿದರು. ಮಡಿಕೇರಿ ವಲಯದ ಶೇಷ್ಠ ಗುರುಗಳಾದ ಫಾಧರ್ ಜಾರ್ಜ್ ದೀಪಕ್, ವಿರಾಜಪೇಟೆ ಸಂತ ಅನ್ನಮ್ಮ ದೇವಾಲಯದ ವಲಯದ ಶ್ರೇಷ್ಠ ಧರ್ಮ ಗುರುಗಳಾದ ಜೇಮ್ಸ್ ಡೋಮಿನಿಕ್ ಹಾಗೂ ವಿವಿಧ ಧರ್ಮ ಕೇಂದ್ರಗಳಿಂದ ಆಗಮಿಸಿದ್ದ ಧರ್ಮಗುರುಗಳು ಒಗ್ಗೂಡಿ ಆಡಂಬರ ಬಲಿಪೂಜೆಯನ್ನು ನೇರವೇರಿಸಿದರು. ಬೀಟಿಕಟ್ಟೆ ದೇವಾಲಯದ ಜಾನ್ ಡಿಕುನ್ನ, ಕೂಡಿಗೆ ಚಾಲ್ಸ್ ನರೋನ, ಪೌಲ್ ಹೇರ್ಸ,7ನೇ ಹೊಸಕೋಟೆ ಸಂತ ಸೆಬಾಸ್ಟಿನ್ ದೇವಾಲಯದ ರೆ.ಫಾ.ಸಬಾಸ್ಟಿನ್ ಪೂವತ್ತಗಲ್ (ಸುನಿಲ್),ಕುಶಾಲನಗರ ಸಂತ ಸೆಬಾಸ್ಟಿನ್ ದೇವಾಲಯದ ರೇ. ಫಾ. ಮಾರ್ಟಿನ್, ಮಾದಾಪುರ ದೇವಾಲಯದ ರೇ.ಫಾ.ಸೂಸೈರಾಜ್, ಸೋಮವಾರಪೇಟೆ ಜಯವೀರ ಮಾತೆ ದೇವಾಲಯದ ರೇ. ಪಾ. ಅವಿನಾಶ್, ರಾಯಲ್ ಕ್ರಾಸ್ತಾ, ಹ್ಯಾರಿಟೇರಿ, ಪುಷ್ಪಗೀರಿ ಬಾಲ ಯೇಸು ದೇವಾಲಯದ ಮರಿಯನ್ ಕ್ಸೇವಿಯರ್, ರೇ.ಪಾ.ಚಾಲ್ಸ್ ಹಾಗೂ ಸಂತ ಅಂತೋಣಿ ದೇವಾಲಯದ ಫಾಧರ್ ವಿಜಯಕುಮಾರ್ ಮತ್ತಿತರರು ಇದ್ದರು. ವಾರ್ಷಿಕೋತ್ಸವದ ಅಂಗವಾಗಿ ದೇವಾಲಯದ ಒಳಾಂಗಣವನ್ನು ಬಣ್ಣ ಹೂಗಳು, ಬಂಟಿಗ್ಸ್ ಹಾಗೂ ಹೊರಾಂಗಣವನ್ನು ವಿದ್ಯುತ್ ದೀಪಾಗಳಿಂದ ಅಲಂಕಾರಿಸಲಾಗಿತ್ತು. ಸಂತ ಕ್ಲಾರ ಕನ್ಯಾಸ್ತ್ರಿ ಮಠದ ಕನ್ಯಾಸ್ತ್ರೀಯರು, ಕುಶಾಲನಗರ, ಹೊಸಕೋಟೆ, ಸೋಮವಾರಪೇಟೆ ಸೇರಿದಂತೆ ವಿವಿಧ ಭಾಗಗಳಿಂದ ಕನ್ಯಾಸ್ತ್ರಿಯರು ದೇವಾಲಯದ ವಾರ್ಷಿಕೋತ್ಸವದಲ್ಲಿ ಪಾಲ್ಗೊಂಡಿದ್ದರು. ನಂತರ ವಿದ್ಯುತ್ ದೀಪಾಲಂಕೃತ ಭವ್ಯ ಮಂಟಪದಲ್ಲಿ ಪಾಲಕ ಸಂತ ಅಂತೋಣಿಯವರ ಪ್ರತಿಮೆಯನ್ನು ಇರಿಸಿ ಬ್ಯಾಂಡ್‍ಸೇಟ್ ನೊಂದಿಗೆ ಧರ್ಮಗುರುಗಳು, ಕ್ರೈಸ್ತ ಸನ್ಯಾಸಿನಿಯರು ಮತ್ತು ಸುಂಟಿಕೊಪ್ಪ ಸೇರಿದಂತೆ ವಿವಿಧ ಕಡೆಗಳಿಂದ ನೂರಾರು ಸಂಖ್ಯೆಯ ಕ್ರೈಸ್ತ ಬಾಂಧವರು ಪ್ರಾರ್ಥನೆ ಹಾಗೂ ಭಕ್ತಿ ಗಾಯನಗಳನ್ನು ಹಾಡುತ್ತ ಮೊಂಬತ್ತಿ ಹಿಡಿದು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆಯನ್ನು ನಡೆಸಿದರು. ದೇವಾಲಯದಲ್ಲಿ ಪರಮ ಪ್ರಸಾದ ಆರಾಧನೆ ಹಾಗೂ ಆರ್ಶಿವಚನದೊಂದಿಗೆ ವಾರ್ಷಿಕೋತ್ಸವವು ಸಂಪನ್ನಗೊಂಡಿತು.









