ಮಡಿಕೇರಿ ಜು.4 NEWS DESK : ಸೋಮವಾರಪೇಟೆ ತಾಲ್ಲೂಕು ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿ ಮಳೆಹಾನಿ ಪ್ರದೇಶಕ್ಕೆ ಭೇಟಿ ನೀಡಿ ಪರಿಶೀಲಿಸಿರು. ಹಾನಗಲ್ಲು ಗ್ರಾಮದ ಲೋಹಿತ್ ಮನೆ ಹಾನಿಗೊಂಡಿದ್ದು, ಜೋಸೆಫ್ ಮತ್ತು ರೂಪಾ ಅವರ ಮನೆ ಮುಂಭಾಗ ಬರೆ ಕುಸಿದಿರುವ ಸ್ಥಳಕ್ಕೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಶಿಥಿಲಗೊಂಡಿದ್ದ ಮನೆಗಳಿಗೆ ಟಾರ್ಪಲ್ ವಿತರಿಸಿ, ನೋಟಿಸ್ ನೀಡಿದರು. ಈ ಸಂದರ್ಭ ಹಾನಗಲ್ಲು ಗ್ರಾಮ ಪಂಚಾಯಿತಿಯ ಅಧ್ಯಕ್ಷ ಯಶಾಂತ್ ಕುಮಾರ್, ಉಪಾಧ್ಯಕ್ಷರಾದ ರೇಣುಕ, ಸದಸ್ಯ ಸುದೀಪ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮೇದಪ್ಪ ಸೇರಿದಂತೆ ಮತ್ತಿತರರು ಹಾಜರಿದ್ದರು.











