ಮಡಿಕೇರಿ ಜು.12 NEWS DESK : ಸ್ಕೌಟ್ ಮತ್ತು ಗೈಡ್ ಮಡಿಕೇರಿ ತಾಲ್ಲೂಕು ಸ್ಥಳೀಯ ಸಂಸ್ಥೆಗೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಗಿದ್ದು, ಪದಗ್ರಹಣ ಕಾರ್ಯಕ್ರಮ ಸ್ಕೌಟ್ ಮತ್ತು ಗೈಡ್ ಭವನದಲ್ಲಿ ನಡೆಯಿತು. ತಾಲೂಕಿನ ನೂತನ ಅಧ್ಯಕ್ಷರಾಗಿ ಈರಮಂಡ ಹರಿಣಿ ವಿಜಯ್, ಉಪಾಧ್ಯಕ್ಷರಾಗಿ ಬಿ.ಎನ್.ರಮೇಶ್, ಪಿ.ಎಂ.ರವಿ, ಅರುಣ್, ನೀಲಮ್ಮ, ಕಡ್ಲೇರ ತುಳಸಿ ಮೋಹನ್, ಕುಡೆಕಲ್ ಸಂತೋಷ್, ಪ್ರಧಾನ ಕಾರ್ಯದರ್ಶಿಯಾಗಿ ಆರ್.ಪಿ.ಚಂದ್ರಶೇಖರ್, ಖಜಾಂಚಿಯಾಗಿ ಸಿ.ಎಸ್.ಕಾವೇರಮ್ಮ, ಸಹ ಕಾರ್ಯದರ್ಶಿಯಾಗಿ ಚಂದನ್ ನಂದರಬೆಟ್ಟು ಹಾಗೂ ನಳಿನಿ ಅವರುಗಳನ್ನು ಆಯ್ಕೆ ಮಾಡಲಾಗಿದೆ. ಸ್ಕೌಟ್ ಮತ್ತು ಗೈಡ್‌ನ ಪ್ರಧಾನ ಆಯುಕ್ತ ಕೆ.ಟಿ.ಬೇಬಿ ಮ್ಯಾಥ್ಯೂ ನೂತನ ಪದಾಧಿಕಾರಿಗಳಿಗೆ ಪ್ರಮಾಣವಚನ ಬೋಧಿಸಿದರು.











