ನಾಪೋಕ್ಲು ಜು.14 NEWS DESK : ಮಾದಕ ವಸ್ತು, ದುಶ್ಚಟಗಳಿಂದ ದೂರವಿರಿ ಕಾನೂನನ್ನು ಪಾಲಿಸಿ ಎಂದು ನಾಪೋಕ್ಲು ಪೊಲೀಸ್ ಠಾಣಾಧಿಕಾರಿ ಬಿ.ಜಿ.ರಾಘವೇಂದ್ರ ಹೇಳಿದರು. ನಾಪೋಕ್ಲು ಪೊಲೀಸ್ ಠಾಣಾ ವ್ಯಾಪ್ತಿಯ ಬಲಮುರಿ ಗ್ರಾಮದ ಕೂಡುಪರಂಬು ಕಾಲೋನಿಯಲ್ಲಿ ಆಯೋಜಿಸಲಾಗಿದ್ದ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಸಭೆಯಲ್ಲಿ ಪೋಸ್ಕೋ ಕಾಯ್ದೆ, ಅಟ್ರಾಸಿಟಿ ಕಾಯ್ದೆ, ಅಪ್ರಾಪ್ತ ವಯಸ್ಕರ ಮಾಡುವ ವಾಹನ ಚಾಲನೆ ಬಗ್ಗೆ, ಮಾದಕವಸ್ತು ಸೇವನೆ ಬಗ್ಗೆ ತಿಳಿಸಿ ಅದರಿಂದ ಸಮಾಜಕ್ಕೆ ಆಗುವ ಹಾನಿಯ ಬಗ್ಗೆ ವಿವರಿಸಿದರು. ಕಾನೂನು ತಿಳುವಳಿಕೆ ನೀಡಿ ಎಲ್ಲರೂ ಕಾನೂನನ್ನು ತಪ್ಪದೆ ಪಾಲಿಸಬೇಕು ಎಂದರು. ಸಭೆಯಲ್ಲಿ ಪಾಲ್ಗೊಂಡಿದ್ದ ಸ್ಥಳೀಯರು ಕುಂದು ಕೊರತೆಗಳನ್ನು ಗಮನಕ್ಕೆ ತಂದರು. ಈ ಸಂದರ್ಭ ಕಾರ್ಯಕ್ರಮದಲ್ಲಿ ಕಾಲೋನಿ ನಿವಾಸಿಗಳು, ಗ್ರಾಮಸ್ಥರು ಹಾಗೂ ಪೊಲೀಸ್ ಸಿಬ್ಬಂದಿಗಳು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.










