ವಿರಾಜಪೇಟೆ ಆ.20 NEWS DESK : ಪ್ರಜಾಪಿತ ಬ್ರಹ್ಮಾಕುಮಾರಿ ಈಶ್ವರೀಯ ವಿಶ್ವವಿದ್ಯಾಲಯ ವಿರಾಜಪೇಟೆ ಸೇವಾ ಕೇಂದ್ರದಲ್ಲಿ ಪಾವನಪರ್ವ ರಕ್ಷಾ ಬಂಧನ ಹಾಗೂ ಶ್ರೀ ಕೃಷ್ಣ ಜನ್ಮಾಷ್ಟಮಿಯ ಮಹೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಮಡಿಕೇರಿ ಶಾಖೆಯ ಸಹ ಸಂಚಾಲಕಿ ಬಿ.ಕೆ.ಧನಲಕ್ಷ್ಮಿ ಅವರು ರಕ್ಷಾಬಂಧನದ ಆಧ್ಯಾತ್ಮಿಕ ರಹಸ್ಯವನ್ನು ತಿಳಿಸಿ ಮಾತನಾಡಿ, ಯಾರು ಪರಮಾತ್ಮನ ನೆನಪು ಎಂಬ ಶ್ರೀರಕ್ಷೆಯಲ್ಲಿ ಬಂಧಿತ ಆಗುತ್ತಾರೋ ಅವರಿಗೆ ಉಳಿದೆಲ್ಲ ಬಂಧನಗಳು ದೂರ ಆಗುವುದು. ನಮ್ಮ ಜೀವನದಲ್ಲಿ ಪವಿತ್ರ ಧಾರಣೆ ಮಾಡುವ ಪ್ರತಿಜ್ಞೆ ಮಾಡಿಕೊಂಡು ಪಾವನರಾಗುವುದೇ ನಿಜವಾದ ರಾಕಿ ಕಟ್ಟಿಕೊಳ್ಳುವುದು ಆಗಿದೆ. ಆಧ್ಯಾತ್ಮಿಕ ದೃಷ್ಟಿಯ ತಿಲಕ ಇಟ್ಟು, ಸಿಹಿ ತಿಂದು ಬಾಯಿ ಎಷ್ಟು ಮಧುರ, ಹಾಗೆ ನಮ್ಮ ಮಾತು ಮಧುರವಾಗಿರಬೇಕು. ಮಾತಿನಿಂದ ಯಾರಿಗೂ ದುಃಖ ಕೊಡಬಾರದು, ಶ್ರೀ ಕೃಷ್ಣ ಸತ್ಯಯುಗದ ಪ್ರಥಮ ರಾಜಕುಮಾರ ಕೃಷ್ಣ ದೇವತಾ ಪುರುಷನಾಗಿದ್ದಾನೆ. ಮರ್ಯಾದ ಪುರುಷೋತ್ತಮನೆಂದು ಹೇಳಲಾಗುತ್ತದೆ. ರಕ್ಷಾ ಬಂಧನವೆಂದರೆ ಕೇವಲ ದಾರ ಕಟ್ಟಿಕೊಳ್ಳುವುದಲ್ಲ, ಇದು ಮನಸನ್ನು ಸಕಾರಾತ್ಮಕ ಮಾಡಿಕೊಳ್ಳುವುದು ಆಗಿದೆ. ಮನಸ್ಸನ್ನು ಬಲಶಾಲಿ ಮಾಡಿಕೊಳ್ಳಲು ರಾಜಯೋಗ (ಮೆಡಿಟೇಶನ್) ಅಭ್ಯಾಸ ಮಾಡಬೇಕು. ಇದರಲ್ಲಿ ಸ್ವಯಂ ನಾನು ಯಾರು ಎಂಬುದು ಹಾಗೂ ಪರಮಾತ್ಮನ ಸತ್ಯ ಪರಿಚಯದ ಅವಶ್ಯಕತೆ ಇದೆ ಸ್ವಯಂನ ಪರಿವರ್ತನೆಯಿಂದ ವಿಶ್ವ ಪರಿವರ್ತನೆ ಸಾಧ್ಯ. ಪ್ರಪಂಚವನ್ನು ನಾವು ಬದಲಿಸುತ್ತೇವೆ ಎಂದು ಹೇಳುತ್ತೇವೆ, ಆದರೆ ಅದು ಸಾಧ್ಯವಿಲ್ಲ ಎಂದು ಸುಧೀರ್ಘವಾಗಿ ಮಾತನಾಡಿದರು. ಪುರಸಭೆ ಅಧ್ಯಕ್ಷೆ ದೇಚಮ್ಮ ಕಾಳಪ್ಪ ಮಾತನಾಡಿ 2018 ರಲ್ಲಿ ನಾನು ಪಟ್ಟಣ ಪಂಚಾಯಿತಿ ಅಧ್ಯಕ್ಷ ಆಗಿದ್ದಾಗ ಈ ಜಾಗ ಬ್ರಹ್ಮಕುಮಾರಿಯ ಈಶ್ವರ ವಿಶ್ವವಿದ್ಯಾನಿಲಯಕ್ಕೆ ಕೊಡಬೇಕು ಎಂದು ಎಲ್ಲರೂ ತೀರ್ಮಾನಿಸಿ ಮಂಜೂರು ಮಾಡಲಾಯಿತು. ಪರಮಾತ್ಮ ಯಾರ ಮೂಲಕನಾದರೂ ತನ್ನ ಕಾರ್ಯವನ್ನು ಮಾಡಿಸಿಕೊಳ್ಳುತ್ತಾನೆ ಎಂದರು. ಪುರಸಭೆ ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಮನುಷ್ಯನಿಗೆ ಶಾಂತಿಗಾಗಿ ಇಂತಹ ಆಧ್ಯಾತ್ಮಿಕ ಸಂಸ್ಥೆಗಳು ಬೇಕು. ನನಗೆ ಇಲ್ಲಿಗೆ ಬಂದಾಗ ಬಹಳ ಶಾಂತಿಯ ಅನುಭವ ಆಗುತ್ತಿದೆ ಎಂದರು. ಕೊಡವ ಪೊಮ್ಮಕ್ಕಡ ಒಕ್ಕೂಟದ ಮಾಜಿ ಅಧ್ಯಕ್ಷೆ ಕಾಂತಿ ಸತೀಶ್ ಮಾತನಾಡಿ ನಾನು ಇಲ್ಲಿ ಕೋರ್ಸ್ ತೆಗೆದುಕೊಂಡು ಸಂಸ್ಥೆಯ ಪ್ರಧಾನ ಕೇಂದ್ರದಲ್ಲಿ ಅಬು ಪರ್ವತ ರಾಜಸ್ಥಾನಕ್ಕೆ ಹೋಗಿ ಬಂದಮೇಲೆ ನನಗೆ ಶಿವ ಪರಮಾತ್ಮನ ಶಕ್ತಿ ಬಂದಿದೆ ಎಂದರು ತಮ್ಮ ಅನುಭವವನ್ನು ಹಂಚಿಕೊಂಡರು. ಅತಿತಿಗಳಿಗೆ ಈಶ್ವರಿಯ ಉಡುಗೊರೆಯನ್ನು ನೀಡಲಾಯಿತು. ನಂತರ ಪ್ರಸಾದ ನೀಡಲಾಯಿತು. ಬ್ರಹ್ಮಕುಮಾರಿ ಈಶ್ವರಿಯ ವಿಶ್ವವಿದ್ಯಾನಿಲಯದ ವಿರಾಜಪೇಟೆ ಶಾಖೆಯ ಮುಖ್ಯ ಸಂಚಾಲಕಿ ಬಿ.ಕೆ. ಕೋಮಲ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭ ಸೇವಾ ಕೇಂದ್ರದ ಸದಸ್ಯರುಗಳು, ಸೇರಿದಂತೆ ಇತರರು ಹಾಜರಿದ್ದರು.











