ಮಡಿಕೇರಿ NEWS DESK ಸೆ.7 : ದಸರಾ ಆಚರಣೆಯ ಸಂದರ್ಭ ಮಳೆಗೆ ವಿರಾಮ ನೀಡಬೇಕು ಮತ್ತು ದಸರಾ ಜನೋತ್ಸವ ನಿರ್ವಿಘ್ನವಾಗಿ ನಡೆಯಬೇಕೆಂದು ಪ್ರಾರ್ಥಿಸಿ ಪಾಡಿ ಶ್ರೀಇಗ್ಗುತ್ತಪ್ಪ ಹಾಗೂ ತಲಕಾವೇರಿ ಕ್ಷೇತ್ರದಲ್ಲಿ ಮಡಿಕೇರಿ ದಸರಾ ದಶಮಂಟಪ ಸಮಿತಿ ವಿಶೇಷ ಪೂಜೆ ಸಲ್ಲಿಸಿತು. ದಸರಾ ಸಂದರ್ಭ ಮಳೆ ಇಲ್ಲದೆ ಸಂಭ್ರಮದಿಂದ ಹಬ್ಬ ಆಚರಣೆಯಾಗಬೇಕೆಂದು ದಶಮಂಟಪ ಸಮಿತಿ, ಉಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಪ್ರಾರ್ಥಿಸಿದರು. ದಶಮಂಟಪ ಸಮಿತಿಯ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ಅವರು ಮಾತನಾಡಿ ದಶಮಂಟಪಗಳ ಅದ್ದೂರಿಯ ಶೋಭಾಯಾತ್ರೆಗೆ ಸರ್ವರು ಸಹಕರಿಸುವ ವಿಶ್ವಾಸವಿದೆ ಮತ್ತು ಈ ಬಾರಿ ಮಡಿಕೇರಿ ದಸರಾ ಅದ್ದೂರಿಯಾಗಿ ನಡೆಯಲಿದೆ ಎಂದರು.











