

ಮಡಿಕೇರಿ ಸೆ.12 NEWS DESK : ನಗರದ ಕೆಎಸ್‌ಆರ್‌ಟಿಸಿ ಡಿಪೋ ಬಳಿಯ ಶಾಂತಿನಿಕೇತನ ಬಡಾವಣೆಯಲ್ಲಿ ಶಾಂತಿನಿಕೇತನ ಯುವಕ ಸಂಘದ ವತಿಯಿಂದ ಪ್ರತಿಷ್ಠಾಪಿಸಲಾಗಿರುವ 47ನೇ ವರ್ಷದ ಗಣೇಶ ಮೂರ್ತಿಯ ವಿಸರ್ಜನೋತ್ಸವು ಇಂದು (ಸೆ.12) ರಂದು ಭವ್ಯ ಶೋಭಾಯಾತ್ರೆಯೊಂದಿಗೆ ನಡೆಯಲಿದೆ. ಸಂಜೆ 6 ಗಂಟೆಗೆ ಶಾಂತಿನಿಕೇತನ ಬಡಾವಣೆಯಿಂದ ಶೋಭಾಯಾತ್ರೆ ಆರಂಭವಾಗಲಿದ್ದು, ಚಲನ ವಲನಗಳನ್ನೊಳಗೊಂಡ ಭವ್ಯ ಮಂಟಪದಲ್ಲಿ ಲೋಕ ಕಲ್ಯಾಣಕ್ಕಾಗಿ ಮಹಾಗಣಪತಿಯಿಂದ ದೈತ್ಯ ಶತಮಹಿಷಿಯ ಸಂಹಾರ ಮಾಡುವ ಪೌರಾಣಿಕ ಕಥಾಹಂದರವನ್ನು ಪ್ರಸ್ತುತ ಪಡಿಸಲಾಗುತ್ತದೆ. :: ಪ್ರದರ್ಶನ ಸ್ಥಳ :: ಶೋಭಾಯಾತ್ರೆಯ ಮಂಟಪದ ಪ್ರಥಮ ಪ್ರದರ್ಶನ ಶಾಂತಿಕೇತನ ಬಡಾವಣೆಯಲ್ಲಿ ನಡೆಯಲಿದೆ. ನಂತರ ಡಿಪೋ ಬಳಿ, ಜನರಲ್ ತಿಮ್ಮಯ್ಯ ವೃತ್ತ, ನಗರ ಪೊಲೀಸ್ ಠಾಣೆ ಮುಂಭಾಗ, ಹಳೆ ಖಾಸಗಿ ಬಸ್ ನಿಲ್ದಾಣ, ಚೌಕಿ, ಚೌಡೇಶ್ವರಿ ದೇವಾಲಯದ ಬಳಿ ಪ್ರದರ್ಶನ ಇರಲಿದೆ ಎಂದು ಶಾಂತಿನಿಕೇತನ ಯುವಕ ಸಂಘದ ಪದಾಧಿಕಾರಿಗಳು ತಿಳಿಸಿದ್ದಾರೆ.











