ಸುಂಟಿಕೊಪ್ಪ ಸೆ.15 NEWS DESK : ಸುಂಟಿಕೊಪ್ಪ ಹೃದಯಭಾಗದಲ್ಲಿರುವ ಫ್ಯಾಷನ್ ಜ್ಯುವೆಲ್ಲರಿ ಶಾಪ್‍ನಿಂದ 22 ಗ್ರಾಂ. ತೂಕದ ಚಿನ್ನದ ಸರ ಕಳುವಾಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಭಾನುವಾರ ರಾತ್ರಿ ಮಳಿಗೆ ಮುಚ್ಚುವ ಮೊದಲು ದಾಸ್ತಾನು ಪರಿಶೀಲಿಸುವ ಸಂದರ್ಭ ಚಿನ್ನದ ಸರ ಕಳುವು ಆಗಿರುವುದು ಅಂಗಡಿಯವರ ಗಮನಕ್ಕೆ ಬಂದಿದೆ. ತಕ್ಷಣ ಸಿಸಿ ಕ್ಯಾಮರ ಪರಿಶೀಲಿಸಿದಾಗ ಸಂಜೆ 5 ರ ಸುಮಾರಿಗೆ ಮಗುವಿನೊಂದಿಗೆ ಬಂದಿದ್ದ ಮೂವರು ಮಹಿಳೆಯರು ಕಳ್ಳತನ ಮಾಡಿರುವುದು ಬೆಳಕಿಗೆ ಬಂದಿದೆ. ಈ ಕುರಿತು ಅಂಗಡಿ ಮಾಲೀಕರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಮಳಿಗೆಗೆ ಭೇಟಿ ನೀಡಿ ಪರಿಶೀಲಿಸಿದ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.










