ವಿರಾಜಪೇಟೆ ಅ.18 NEWS DESK : ನಗರದ ಶಿವಕೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣು ಮೂರ್ತಿ ನಾಗದೇವರ ದೇವಾಲಯದಲ್ಲಿ ಅ.21, 22 ಮತ್ತು 23 ರಂದು ದೀಪಾವಳಿ ಹಬ್ಬದ ಪ್ರಯುಕ್ತ ದೀಪೋತ್ಸವ ಪೂಜೆ ನಡೆಯಲಿದೆ. ದೇವಾಲಯದಲ್ಲಿ ಮೂರು ದಿನಗಳ ಕಾಲ ಸಂಜೆ 6 ಗಂಟೆಗೆ ವಿಶೇಷ ಪೂಜೆ, ಶ್ರೀದುರ್ಗಿ ವಿಷ್ಣು ಮೂರ್ತಿ ನಾಗದೇವರಿಗೆ ಮಹಾಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಪೂಜಾ ಕೈಂಕರ್ಯಗಳು ಜರುಗಲಿದೆ. ಮೂರು ದಿನಗಳು ಭಕ್ತಾಧಿಗಳಿಗೆ ಪ್ರಸಾದ ವಿನಿಯೋಗ ಹಾಗೂ ಅನ್ನಸಂತರ್ಪಣೆ ನಡೆಯಲಿದೆ ಎಂದು ದೇವಾಲಯದ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.











