ಸೋಮವಾರಪೇಟೆ ನ.7 NEWS DESK : ಜಿಲ್ಲೆಯ 3 ಸ್ಥಳೀಯ ಸಂಸ್ಥೆಗಳಿಗೆ ಆಡಳಿತಾಧಿಕಾರಿಗಳನ್ನು ನೇಮಿಸಿ ಆದೇಶ ಹೊರಡಿಸಿದೆ. 5 ವರ್ಷ ಆಡಳಿತಾವಧಿ ಮುಗಿಸಿರುವ ಕುಶಾಲನಗರ ಹಾಗೂ ವಿರಾಜಪೇಟೆ ಪುರಸಭೆಗೆ ಉಪವಿಭಾಗಾಧಿಕಾರಿಗಳು, ಸೋಮವಾರಪೇಟೆ ಪಟ್ಟಣ ಪಂಚಾಯಿತಿಗೆ ತಹಶೀಲ್ದಾರರನ್ನು 4/11/25 ರಿಂದ ಜಾರಿಗೆ ಬರುವಂತೆ ಆಡಳಿತಾಧಿಕಾರಿಗಳನ್ನಾಗಿ ನೇಮಿಸಿ ರಾಜ್ಯ ನಗರಾಭಿವೃದ್ಧಿ ಇಲಾಖೆಯ ಅದೀನ ಕಾರ್ಯದರ್ಶಿ ಟಿ.ಮಂಜುನಾಥ್ ಆದೇಶ ಹೊರಡಿಸಿದ್ದಾರೆ. ರಾಜ್ಯದ ಒಟ್ಟು 53 ಪುರಸಭೆ, 42 ನಗರಸಭೆ ಹಾಗೂ 23 ಪಟ್ಟಣ ಪಂಚಾಯ್ತಿಯ ಆಡಳಿತಾವಧಿ ಮುಗಿದಿರುವ ಹಿನ್ನಲೆಯಲ್ಲಿ ಆಡಳಿತಾಧಿಕಾರಿಗಳನ್ನು ನೇಮಿಸಲಾಗಿದೆ. ಮುಂದೆ ಸರ್ಕಾರ ವಾರ್ಡ್ವಿಂಗಡನೆ,ಮೀಸಲಾತಿ ನಿಗದಿಪಡಿಸ ಬೇಕಾಗಿರುವುದರಿಂದ ಮುಂದಿನ 4, 5 ತಿಂಗಳು ಆಡಳಿತಾಧಿಕಾರಿಗಳ ಆಡಳಿತನಡೆಯುವ ಸಾಧ್ಯತೆ ಇದೆ.











