ಮಡಿಕೇರಿ ನ.7 NEWS DESK : ಗೋಣಿಕೊಪ್ಪದಲ್ಲಿ ನಡೆದ ಜಿಲ್ಲಾ ಮಟ್ಟದ ಅಥ್ಲೆಟಿಕ್ಸ್ ನಲ್ಲಿ ಭಾಗಮಂಡಲ ಅಟಲ್ ಬಿಹಾರಿ ವಾಜಪೇಯಿ ವಸತಿ ವಿಜ್ಞಾನ ಕಾಲೇಜಿ ನ ವಿದ್ಯಾರ್ಥಿಗಳು ಭಾಗವಹಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 400 ಮೀಟರ್ ಹರ್ಡಲ್ಸ್ ನಲ್ಲಿ ಖುಷಿ. ಕೆ.ಎಂ. ಪ್ರಥಮ ಮತ್ತು ಸಾಗರ್ ಟಿ.ಎಸ್. ದ್ವಿತೀಯ ಸ್ಥಾನ ಪಡೆದು ಕಲುಬುರ್ಗಿ ಯಲ್ಲಿ ನಡೆಯುವ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ವಿದ್ಯಾರ್ಥಿಗಳ ಈ ಸಾಧನೆಗೆ ಪ್ರಾಂಶುಪಾಲರಾದ ಲೋಕೇಶ್, ನಿಲಯ ಪಾಲಕರಾದ ಕೆ.ಕೆ.ದೀಪಕ್, ದೈಹಿಕ ಶಿಕ್ಷಣ ಶಿಕ್ಷಕರಾದ ಕೆ.ಪಿ.ಪವನ್ ಸಾಗರ್ ಸಂತೋಷ ವ್ಯಕ್ತಪಡಿಸಿದ್ದಾರೆ.











