ಸೋಮವಾರಪೇಟೆ ನ.10 NEWS DESK : ರಕ್ತದಾನ ಮಾಡಿ ಜೀವ ಉಳಿಸಿ ಎಂದು ತಾಲೂಕು ಆಸ್ಪತ್ರೆ ವೈದ್ಯಾಧಿಕಾರಿ ಡಾ.ಜಮೀರ್ ತಿಳಿಸಿದರು. ತಥಾಸ್ತು ಸಾತ್ವಿಕ ಸಂಸ್ಥೆ,ಅಬಕಾರಿ ನಿರೀಕ್ಷಕರ ಕಚೇರಿ ಮೈಸೂರು, ಬಿ.ಟಿ.ಚನ್ನಯ್ಯ ಗೌರಮ್ಮ ಸರ್ಕಾರಿ ಪದವಿಕಾಲೇಜು ಸಂಯುಕ್ತಾಶ್ರಯದಲ್ಲಿ ಪಟ್ಟಣದ ಸರ್ಕಾರಿ ಆಸ್ಪತ್ರೆ ಆವರಣದಲ್ಲಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಇಂದು ಜನಸಾಮಾನ್ಯರಲ್ಲಿ ರಕ್ತ ದಾನದಬಗ್ಗೆ ಅರಿವು ಮೂಡಿಸಬೇಕಾಗಿದೆ ಎಂದರು.ತುರ್ತು ಸಂದರ್ಭಗಳಲ್ಲಿ ರಕ್ತ ಅತ್ಯವಶ್ಯಕವಾಗಿ ಬೇಕಾಗಿದೆ ಅಗತ್ಯ ಸಮಯದಲ್ಲಿ ಸಿಕ್ಕಿದರೆ ಜೀವ ಉಳಿಸಬಹುದು ಆದ್ದರಿಂದ ರಕ್ತದಾನಕ್ಕೆ ಮುಂದಾಗಬೇಕೆಂದರು. ಮೈಸೂರು ಅಬಕಾರಿ ನಿರೀಕ್ಷಕರಾದ ಲೋಕೇಶ್ ರವರು ಮಾತನಾಡಿ ಕಳೆದ 3ವರ್ಷಗಳಿಂದ ಅಬಕಾರಿ ಇಲಾಖೆ ತಥಾಸ್ತು ಸಂಸ್ಥೆ ಜೊತೆಸೇರಿ ಶಿಬಿರಗಳನ್ನು ಆಯೋಜಿಸುತ್ತಿದೆ ಜನರ ಸಹಕಾರವಿದೆ ಎಂದ ಅವರು ರಕ್ತದಾನ ಮಹಾದಾನವೆಂದರು. ಬಿ.ಟಿ.ಸಿ.ಜಿ.ಕಾಲೇಜಿನ ಪ್ರಾಂಶುಪಾಲ ಹರ್ಷ ಮಾತನಾಡಿ ರಕ್ತದಾನದ ಬಗ್ಗೆ ಯುವಕರು,ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯವಾಗಬೇಕು ಆನಿಟ್ಟಿನಲ್ಲಿ ನಮ್ಮ ಕಾಲೇಜು ತಥಾಸ್ತು ಸಂಸ್ಥೆ ಜೊತೆ ಸೇರಿ ರಕ್ತದಾನ ಶಿಬಿರ ಆಯೋಜಿಸಲು ಸಹಕರಿಸಲಾಗುತಿದೆಯೆಂದರೂ. ಮಡಿಕೇರಿ ರಕ್ತನಿಧಿ ಘಟಕದ ವೈದ್ಯರಾದ ಕರುಂಬಯ್ಯ ಮಾತನಾಡಿ ಇತ್ತೀಚೆಗೆ ರಕ್ತದ ಬೇಡಿಕೆ ಹೆಚ್ಚಾಗಿದೆ ಜಿಲ್ಲೆಯಲ್ಲಿ ಒಂದೇ ರಕ್ತನಿಧಿ ಘಟಕ ಇರುವುದರಿಂದ ರಕ್ತ ಪೂರೈಸಲು ಕಷ್ಟವಾಗುತ್ತಿದೆ ಎಂದ ಅವರು ಕೊಡಗು ಜಿಲ್ಲೆ ಮಾತ್ರವಲ್ಲದೆ ಅಕ್ಕಪಕ್ಕದ ಜಿಲ್ಲೆಗಳಿಂದಲೂ ಬೇಡಿಕೆ ಬರುತಿದೆ ಆದ್ದರಿಂದ ಹೆಚ್ಚಿನ ಶಿಬಿರಗಳನ್ನು ಆಯೋಜಿಸುವ ಮೂಲಕ ರಕ್ತ ಸಂಗ್ರಹಣೆಯಾಗಬೇಕಿದೆ ಎಂದರು.ಒಬ್ಬ ಆರೋಗ್ಯವಂತ ವ್ಯಕ್ತಿ ಪ್ರತಿ ಮೂರು ತಿಂಗಳಿಗೆ ರಕ್ತದಾನ ಮಾಡಬಹುದಾಗಿದೆ ಎಂದು ತಿಳಿಸಿದರು. ತಥಾಸ್ತು ಸಂಸ್ಥೆಯ ಅಧ್ಯಕ್ಷ ಉದಯ ಮಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಪತ್ರಿಕಾ ಭವನದ ಅಧ್ಯಕ್ಷ ಎಸ್.ಮಹೇಶ್, ತಥಾಸ್ತು ಸಂಸ್ಥೆಯ ಪದಾಧಿಕಾರಿಗಳಾದ ಶಿವಕುಮಾರ್, ರೂಪಾ, ಜನಾರ್ಧನ, ಗಿರೀಶ್, ರಮೇಶ್, ದಿವ್ಯ ಹಾಗೂ ಮುಂತಾದವರು ಉಪಸ್ತಿತರಿದ್ದರು.











