ವಿರಾಜಪೇಟೆ ನ.29 NEWS DESK : ವಿರಾಜಪೇಟೆಯ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲ್ಲೂಕು ಮಟ್ಟದ ವಿಜ್ಞಾನ ಮಾದರಿ ಪ್ರದರ್ಶನದಲ್ಲಿ ಕಾವೇರಿ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿ ಎನ್.ಎಂ.ತರುಣ್ ವೈಯಕ್ತಿಕ ವಿಭಾಗದಲ್ಲಿ ವಿಜ್ಞಾನ ಮಾದರಿ ಪ್ರದರ್ಶಿಸಿ ಪ್ರಥಮ ಸ್ಥಾನವನ್ನು ಪಡೆದು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾನೆ. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರು ಹಾಗೂ ವಿಜ್ಞಾನ ವಿಭಾಗದ ಶಿಕ್ಷಕರಾದ ಶ್ರೀಮಾನ್ ಸುದೇಶ್ ಬಿ.ಎಸ್ ರವರು ಮಾರ್ಗದರ್ಶನ ನೀಡಿದ್ದಾರೆ. ಇವರ ಸಾಧನೆಗೆ ಶಾಲೆ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ,ಸಂಯೋಜಕಿ ಹಾಗೂ ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು ಪೋಷಕರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.











