ಮಡಿಕೇರಿ ನ.29 NEWS DESK : ಕರಡ ಕೊಡವ ಕಲ್ಚರಲ್ ಮತ್ತು ರಿಕ್ರಿಯೇಶನ್ ಕ್ಲಬ್ ಆಯೋಜಿಸಿದ ತೃತೀಯ ವರ್ಷದ ಕಡಿಯತ್ ನಾಡ್ ಕಪ್ ಹಾಕಿ ಪಂದ್ಯಾವಳಿ-2025 ರ ಉದ್ಘಾಟನಾ ಸಮಾರಂಭದ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕರಾದ ಅಜ್ಜಿಕುಟ್ಟಿರ ಎಸ್.ಪೊನ್ನಣ್ಣ ಭಾಗವಹಿಸಿ ಶುಭ ಕೋರಿದರು. ಬಳಿಕ ಮಾತನಾಡಿದ ಶಾಸಕರು, ಕೊಡಗು ಎಂದರೆ ಹಾಕಿಗೆ ಪ್ರಸಿದ್ಧವಾದ ನಾಡು. ಅದರಲ್ಲೂ ವಿಶೇಷವಾಗಿ ಕೊಡವ ಜನಾಂಗದವರು ಹಾಕಿ ಆಟವನ್ನು ಅತ್ಯಂತ ಹತ್ತಿರದಿಂದ ಬಲ್ಲವರಾಗಿದ್ದು, ಎಲ್ಲೆಡೆ ಕೊಡವರು ಎಂದರೆ ಹಾಕಿ ಎಂಬ ಭಾವನೆ ಮೂಡಿದೆ ಎಂದು ವಿಶ್ಲೇಷಣೆ ನೀಡಿದವರು. ಬಳಿಕ ಸಂಘಟಕರ ಮನವಿ ಸ್ವೀಕರಿಸಿ ಮಾತನಾಡಿ, ಮುಂದಿನ ದಿನಗಳಲ್ಲಿ ಈ ಕ್ರೀಡಾಂಗಣದ ಅಭಿವೃದ್ಧಿಗೆ ಯಾವುದೆಲ್ಲ ಸವಲತ್ತು ಕಲ್ಪಿಸಬೇಕು ಅದನ್ನು ತಾನು ನಿರ್ವಹಿಸುವುದಾಗಿ ಹೇಳಿದರು. ನರಿಯಂದಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಪೆಮ್ಮಂಡ ಕೌಶಿ ಕಾವೇರಮ್ಮ, ಉಪಾಧ್ಯಕ್ಷರು ಹಾಗೂ ವಲಯ ಅಧ್ಯಕ್ಷರು ಕೋಡಿರ ವಿನೋದ್ ನಾಣಯ್ಯ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯರು ಬಾನಂಡ ಪ್ರತ್ಯು, ಪ್ರಮುಖರು ಪ್ರಕಾಶ್, ಕಾವೇರಪ್ಪ, ಜಗಧೀಶ್, ಶೇರಿ ಗಿರೀಶ್, ಸೂರಜ್ ಹೊಸೂರು, ಸಿದ್ದು ನಾಚಪ್ಪ, ಕುಂಡಚ್ಚಿರ ಮಂಜು ದೇವಯ್ಯ, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.











