ಮಡಿಕೇರಿ ಡಿ.20 NEWS DESK : ವಿರಾಜಪೇಟೆ ತಾಲ್ಲೂಕಿನ ಬೇಟೋಳಿ ವ್ಯಾಪ್ತಿಯ ಹೆಗ್ಗಳ, ಬೂದಿಮಾಳ, ಬೇಟೋಳಿ, ರಾಮನಗರ, ನೀಮಲಗಿರಿ ಭಾಗದಲ್ಲಿ ರಸ್ತೆ ಕಾಮಗಾರಿ ಆರಂಭಗೊಂಡಿದೆ. 2024-25ನೇ ಸಾಲಿನ ಮಳೆ ಹಾನಿ ಪರಿಹಾರ ನಿಧಿ ಕಾಮಗಾರಿ ಸುಮಾರು 24 ಲಕ್ಷ ಅನುದಾನ ಒದಗಿಸಿ 8 ಕಡೆ ರಸ್ತೆ ಡಾಂಬರೀಕರಣ ಹಾಗೂ ಕಾಂಕ್ರೀಟ್ ಅಳವಡಿಸುವ ಕಾಮಗಾರಿ ಚಾಲನೆ ದೊರೆತಿದೆ. ರಾಮನಗರ, ಕೊಡುಂಗಲ್ಲೂರು ದೇವಸ್ಥಾನಕ್ಕೆ ಹೋಗುವ ರಸ್ತೆ ಕಾಮಗಾರಿ ಪ್ರಗತಿಯಲ್ಲಿದ್ದು, ವಲಯ ಕಾಂಗ್ರೆಸ್ ಅಧ್ಯಕ್ಷ ವರ್ಗೀಸ್ ಲೆನಿನ್ ಹಾಗೂ ರಾಮನಗರ ಭಾಗದ ಕಾರ್ಯಕರ್ತರಾದ ತೀರೇಶ್, ರಾಜೇಶ್, ಸುಮಂತ್, ಕಿಶೋರ್ ಸೇರಿ ಇತರ ಕಾರ್ಯಕರ್ತರೊಂದಿಗೆ ರಸ್ತೆ ಕಾಮಗಾರಿಯ ಗುಣಮಟ್ಟವನ್ನು ಪರಿಶೀಲಿಸಿದರು. ಈ ಕಾಮಗಾರಿಗೆ ಅನುದಾನ ಒದಗಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಹಾಗೂ ಸಹಕರಿಸಿದ ಜಿಲ್ಲಾಧ್ಯಕ್ಷ ಧರ್ಮಜ ಉತ್ತಪ್ಪ, ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಟ್ಟಡ ರಂಜಿ ಪೂಣಚ್ಚ ಅವರಿಗೆ ಹೆಗ್ಗಳ ಬೂದಿಮಾಳ ಹಾಗೂ ಬೇಟೋಳಿ ರಾಮನಗರ ಗ್ರಾಮಸ್ಥರು ಧನ್ಯವಾದ ಸಲ್ಲಿಸಿದರು.











