ಮಡಿಕೇರಿ ಡಿ.23 NEWS DESK : ದಶಕಗಳ ಸಮಸ್ಯೆಯಾಗಿ ಕೊಡಗಿನ ಜಮ್ಮಾ ಹಿಡುವಳಿದಾರರನ್ನು ಕಾಡಿದ್ದ ಜಮ್ಮಾ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ಒದಗಿಸುವ ನಿಟ್ಟಿನಲ್ಲಿ, ಕರ್ನಾಟಕ ಭೂಕಂದಾಯ ಕಾಯ್ದೆಯ ತಿದ್ದುಪಡಿ ವಿದೇಯಕವನ್ನು ಸದನದಲ್ಲಿ ಮಂಡಿಸಿ, ಯಶಸ್ವೀಯಾಗಿ ಅನುಮೋದನೆ ಪಡೆಯುವಲ್ಲಿ ನಿರ್ಣಾಯಕ ಪಾತ್ರ ನಿರ್ವಹಿಸಿದ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರಿಗೆ ಯುನೈಟೆಡ್ ಕೊಡವ ಆರ್ಗನೈಸೇಷನ್ – ಯುಕೊ ಸಂಘಟನೆಯ ಸದಸ್ಯರು ಅಭಿನಂದನೆ ಸಲ್ಲಿಸಿದರು. ಶಾಸಕ ಗೃಹ ಕಚೇರಿಯಲ್ಲಿ ಭೇಟಿ ಮಾಡಿ ಸ್ಮರಣಿಕೆ ನೀಡಿ ಅಭಿನಂದಿಸಿದರು. ನಂತರ ಮಾತನಾಡಿದ ಯುಕೊ ಸಂಘಟನೆಯ ಅಧ್ಯಕ್ಷರಾದ ಕೊಕ್ಕಲೆಮಾಡ ಮಂಜು ಚಿಣ್ಣಪ್ಪ, ಸುಮಾರು 7 ದಶಕಗಳಿಂದ ಜೀವಂತವಾಗಿರುವ ಕೊಡಗಿನ ಈ ಸಮಸ್ಯೆಯು ಜಮ್ಮಾ ಹಿಡುವಳಿದಾರರ ಜೀವ ಹಿಂಡಿತ್ತು, ಕೊಡವರಿಗೆ ಜಮ್ಮಾ ಯಾರೂ ನೀಡಿದ ಜಾಗವಲ್ಲ, ಕೊಡವರ ಜಾಗಕ್ಕೆ ಭೂದಾಖಲಾತಿ ವ್ವಸ್ಥೆ ಜಾರಿಗೆ ಬಂದಾಗ ಜಮ್ಮಾ ಎಂದು ವರ್ಗೀಕರಣ ಮಾಡಲಾಯಿತಲ್ಲದೆ, ರಾಜನರಾಗಲಿ, ಬ್ರಿಟಿಷರು ನೀಡಿರುವ ಬಳುವಳಿ ಆಸ್ತಿಯಲ್ಲ. 1956 ರ ವರೆಗೆ ಕೂರ್ಗ್ ಲ್ಯಾಂಡ್ ರೆವೆನ್ಯೂ ಆಕ್ಟ್ ಜಾರಿಯಲ್ಲಿತ್ತು, ಆನಂತರ ಕೊಡಗು ಕರ್ನಾಟಕದೊಂದಿಗೆ ವಿಲೀನವಾದ ನಂತರ ಕೂರ್ಗ್ ಲ್ಯಾಂಡ್ ರೆವೆನ್ಯೂ ಆಕ್ಟ್ ರದ್ದುಗೊಂಡು ಕರ್ನಾಟಕ ಲ್ಯಾಂಡ್ ರೆವ್ನ್ಯೂ ಆಕ್ಟ್ ಜಾರಿಯಾದಾಗ, ಸಮಸ್ಯೆಗೆ ಕಾರಣವಾಯಿತು. ಅಲ್ಲಿಂದ ಇಲ್ಲಿಯವರೆಗೆ ಸಮಸ್ಯೆ ಜೀವಂತವಾಗಿಯೇ ಉಳಿದುಕೊಂಡು ಬಂದಿದೆ. ಇದಕ್ಕೆ ಕೆಲವು ತಾಂತ್ರಿಕವಾದ ಕಾರಣಗಳೂ ಇರುವುದರಿಂದ ಹಾಗೂ ಶಾಸಕಾಂಗ ಮತ್ತು ನಾಯಾಯಾಂಗ ಮತ್ತು ಕಾರ್ಯಾಂಗದ ಸಮನ್ವಯತೆಯ ಕೊರತೆಯ ಕಾರಣದಿಂದ ಎಷ್ಟೇ ಪ್ರಯತ್ನಿಸಿದರೂ ಇದು ಗೊಂದಲಮಯವಾಗಿಯೇ ಮುಂದುವರಿದುಕೊಂಡು ಬಂದಿದ್ದು ಪರಿಹಾರ ಕಠಿಣ ಸವಾಲಾಗಿತ್ತು. ಇದೀಗ ಎಲ್ಲಾ ಸವಾಲುಗಳನ್ನು ಮೆಟ್ಟಿ ನಿಂತು, ಶಾಸಕಾಂಗ, ನಾಯಾಯಾಂಗ ಮತ್ತು ಕಾರ್ಯಾಂಗಗಳ ಸಮನ್ವಯತೆಯೊಂದಿಗೆ ಸಮಸ್ಯೆ ಪರಿಹಾರಕ್ಕೆ ಪ್ರಯತ್ನಿಸಿರುವುದು ಸಾಮಾನ್ಯದ ಕೆಲಸವಲ್ಲ. ಶಾಸಕ ಪೊನ್ನಣ್ಣನವರ, ಕಾನೂನಿನ ಪರಿಣತೆ, ಸಂವಿದಾನ ಹಾಗೂ ಶಾಸಕಾಂಗದ ಕುರಿತು ಇರುವ ಅಪಾರ ಜ್ಞಾನ, ಮತ್ತು ತನ್ನಲ್ಲಿರುವ ಇಚ್ಛಾಶಕ್ತಿ, ಬದ್ಧತೆಯ ಪರಿಣಾಮ ತಿದ್ದುಪಡಿ ಮಸೂದೆಯನ್ನು ಹೆಚ್ಚು ಪರಿಣಾಮಕಾರಿಯಾಗಿ ಮಂಡಿಸಿ ಸದನದ ಬೆಂಬಲ ಪಡೆಯಲು ಸಾಧ್ಯವಾಯಿತು ಎಂದು ಹೇಳಿದರು. ಪಟ್ಟೆದಾರ ಎಂಬುವುದು ಕಂದಾಯ ಇಲಾಖೆಗೆ ಸಂಬಂದಿಸಿದ ಪದವಾಗಿದ್ದು ಅವಿಭಕ್ತ ಕುಟುಂಬ ವ್ಯವಸ್ಥೆಯಲ್ಲಿ ಕೊಡವ ಕುಟುಂಬದ ಕೊರವುಕಾರರನ್ನು ಪಟ್ಟೆದಾರರನ್ನಾಗಿ ನೇಮಿಸಿ ಕಂದಾಯ ಕುರಿತ ವ್ಯವಹಾರಕ್ಕೆ ಇವರನ್ನು ಹೊಣೆಗಾರರನ್ನಾಗಿ ಮಾಡಲಾಯಿತು. ಇದು ಕೇವಲ ಭೂಮಿ ಮತ್ತು ಕಂದಾಯದ ವಿಷಯಕ್ಕೆ ಸೀಮಿತವಾದ ಪದವಾಗಿದೆ. ಆದರೆ ಕ್ರಮೇಣ ಕೊರವುಕಾರ ಎಂಬ ಪದವು ಪಟ್ಟೆದಾರರಾಗಿ ಪರಿವರ್ತನೆಗೊಂಡು ಕೊರವುಕಾರ ಪದವೇ ಮರೆಯಾಗುತ್ತಾ ಬಂದಿದೆ. ಕೊಡವರ ಕುಲದ ಮುಖ್ಯಸ್ಥರ ಪಾರಂಪರಿಕವಾದ ಪದನಾಮ ಇಂದಿಗೂ ಕೊರವುಕಾರ ಎಂದೇ ಆಗಿದೆ. ಸರಾಕಾರದ ಮಟ್ಟದಲ್ಲಿ ಯಾರ ಹೆಸರಿಗೆ ಭೂಮಿಯ ಪಟ್ಟೆ ಇದೆಯೋ ಅವರೆಲ್ಲಾ ಪಟ್ಟೆದಾರರೇ ಎಂಬ ಅರ್ಥ ಬರುತ್ತದೆ. ಈ ವಿಚಾರದಲ್ಲಿ, ಕೊಡವರಲ್ಲದ ಕೊಡಗಿನ ಇತರೆ ಜಮ್ಮಾ ಹಿಡುವಳಿದಾರರಿಗೂ ಪಟ್ಟೆದಾರರಿದ್ದಾರೆ. ಹಾಗೆಯೇ ಕರ್ನಾಟಕದ ಬೇರೆ ಬೇರೆ ಹಿಡುವಳಿದಾರರಿಗೂ ಪಟ್ಟಿದಾರ ಪದ ಬಳಕೆಯಾಗುತ್ತಿದೆ. ಇಲ್ಲಿ ಗೊಂದಲಗಳಿಗಿಂತ ಸಮಸ್ಯೆ ಬಗೆಹರಿಯುವುದು ಮುಖ್ಯವಾಗುತ್ತದೆ ಎಂದು ಅವರು ಅಬಿಪ್ರಾಯ ವ್ಯಕ್ತಪಡಿಸಿದರು. ಈ ನಿಟ್ಟಿನಲ್ಲಿ, ಸರ್ಕಾರ, ಕಂದಾಯ ಸಚಿವರು, ಸದನಸಮಿತಿ ಹಾಗೂ ವಿರೋಧಪಕ್ಷದ ನಾಯಕರುಗಳ ನಡುವೆ ಸಮನ್ವಯ ಸಾದಿಸಿ, ಎಲ್ಲರ ವಿಶ್ವಾಸವನ್ನುಗಳಿಸಿ, ಸದನದಲ್ಲಿ ಹಾಗು ಸದನ ಸಮಿತಿಯ ಮುಂದೆ ವಿಷಯ ಮಂಡಿಸಿ ವಿಧಾನ ಭೆಯಲ್ಲಿ ತಿದ್ದುಪಡಿ ಮಸೂದೆಯು ಅವಿರೋಧವಾಗಿ ಅನುಮೋದನೆಯಾಗುವಂತೆ ಅಚ್ಚುಕಟ್ಟಾಗಿ ತಮ್ಮ ಜವಾಬ್ದಾರಿ ನಿಬಾಯಿಸಿದ ನಮ್ಮ ಶಾಸಕ ಎ. ಎಸ್ ಅಬಿನಂದನಾರ್ಹರು ಹಾಗೂ ಅವರನ್ನು ಅಭಿನಂದಿಸುವುದು ನಮ್ಮ ಕರ್ತವ್ಯಕೂಡ ಹೌದು ಎಂದು ಅವರು ತಿಳಿಸಿದರು. ಇದೇ ಸಂದರ್ಭ ಮುಖ್ಯಮಂತ್ರಿ ಸಿದ್ಧರಾಮಯ್ಯ, ಕಂದಾಯ ಸಚಿವ ಕೃಷ್ಣಾಬೈರೇಗೌಡ, ವಿರೋಧ ಪಕ್ಷದ ನಾಯಕರಾದ ಆರ್.ಅಶೋಕ್, ಮಡಿಕೇರಿ ಶಾಸಕರಾದ ಡಾ. ಡಾ.ಮಂತರ್‌ಗೌಡ ಹಾಗೂ ಪ್ರತ್ಯಕ್ಷ ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ
ಅಭಿನಂದನೆ ಸಲ್ಲಿಸುವುದಾಗಿ ಅವರು ತಿಳಿಸಿದರು. ಯುಕೊ ಸದಸ್ಯರಾದ ಚೆಪ್ಪುಡಿರ ಸುಜು ಕರುಂಬಯ್ಯ, ನೆಲ್ಲಮಕ್ಕಡ ಮಾದಯ್ಯ,
ಅಜ್ಜಿನಿಕಂಡ ತಿಮ್ಮಯ್ಯ, ತೀತಿಮಾಡ ಬೋಸ್ ಅಯ್ಯಪ್ಪ, ಬಾದುಮಂಡ ವಿಷ್ಣು ಕಾರ್ಯಪ್ಪ, ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಚೊಟ್ಚೆಯಂಡ ಸಂಜು ಕಾವೇರಪ್ಪ, ಮೂರ್ನಾಡು ಕೊಡವ ಸಮಾಜದ ಅದ್ಯಕ್ಷರಾದ ತೇಲಪಂಡ ಸುಬ್ಬಯ್ಯ, ನಿರ್ದೇಶಕರಾದ ಚಂಗಂಡ ಸೂರಜ್, ಅಮ್ಮಾಟಂಡ ದೇವಯ್ಯ, ಸಮಾಜ ಸೇವಕ ಪಾಲೇಂಗಡ ಅಮಿತ್, ಕಾಂಗ್ರೆಸ್ ಪೊನ್ನಂಪೇಟೆ ಬ್ಲಾಕ್ ಅಧ್ಯಕ್ಷರಾದ ಮೀದೇರಿರ ನವೀನ್ ಉಪಸ್ಥಿತರಿದ್ದರು.











