ವಿರಾಜಪೇಟೆ ಡಿ.23 NEWS DESK : ವಿರಾಜಪೇಟೆ ತಾಲ್ಲೂಕು ಪಾಲಿಬೆಟ್ಟ ಭಾಗದಲ್ಲಿ ಶಾಸಕರ ರೂ.20 ಲಕ್ಷ ಅನುದಾನದಲ್ಲಿ ನಿರ್ಮಾಣಗೊಂಡ ವಿವಿಧ ರಸ್ತೆಗಳನ್ನು ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಉದ್ಘಾಟಿಸಿದರು. ಈ ಭಾಗದ ಜನರ ಬೇಡಿಕೆಗಳಿಗೆ ಸ್ಪಂದಿಸುತ್ತಿರುವ ಶಾಸಕರು ಹಿಂದೆಂದೂ ಕಾಣದ ಅಭಿವೃದ್ಧಿ ಕಾಮಗಾರಿಗಳನ್ನು ಮಾಡುತ್ತಿರುವುದು ಈ ಭಾಗದ ಏಳಿಗೆಗೆ ಕಾರಣವಾಗಿದ್ದು, ಇದು ಮರೆಯಲಾಗದ ಸುವರ್ಣ ಕಾಲ ಎಂದು ಗ್ರಾಮಸ್ಥರು ಬಣ್ಣಿಸಿದ್ದರು. ಈ ಸಂದರ್ಭ ವಲಯ ಅಧ್ಯಕ್ಷರು ಕಾಳಪ್ಪ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಗಣೇಶ್, ಜಿಲ್ಲಾ ಅಲ್ಪಸಂಖ್ಯಾತರ ಅಧ್ಯಕ್ಷ ಹನೀಫ್, ತಾಲ್ಲೂಕು ಅಲ್ಪಸಂಖ್ಯಾತರ ಅಧ್ಯಕ್ಷರು ರಫೀಕ್, ರಜಾಕ್, ಪಂಚಾಯಿತಿ ಸದಸ್ಯರು ಪವಿತ್ರ, ನಾಸಿರ್, ಗಣಪತಿ, ಕಂಜಿತಂಡ ದೇಚಿ ಪೂವಣ್ಣ, ಗಣೇಶ್, ಕುಟ್ಟಂಡ ಕುಟ್ಟಪ್ಪ, ಪುಳಿಯಂಡ ಸತ್ಯ ಮಾದಪ್ಪ, ಕೊಂಗಂಡ ಮಾದಪ್ಪ, ಮಾಲೆಟೀರ ಗಣಪತಿ, ಪಕ್ಷದ ಮುಖಂಡರು, ಕಾರ್ಯಕರ್ತರು, ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.











