ಮಡಿಕೇರಿ ಡಿ.23 NEWS DESK : ಬದುಕು ಇತರರ ಕಷ್ಟ ಸಂಕಷ್ಟಗಳಿಗೆ ಪರಿಹಾರವಾಗುವ ರೀತಿಯಲ್ಲಿ ಇರಬೇಕು. ಸ್ವರ್ಗ ಎಂಬುದು ಇದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ ಆದರೆ ಅದನ್ನು ಅನಭವಿಸಬೇಕಾದರೆ ನಿರಾಶ್ರಿತ, ನಿರ್ಗತಿಕ ಹಾಗೂ ಅನಾಥರ ಸೇವೆಯನ್ನು ಮಾಡುವ ಮೂಲಕ ಗಳಿಸಬೇಕು ಎಂದು ತನಲ್ ಟ್ರಸ್ಟ್ ಕೇರಳದ ವಡಗರ ವಿಭಾಗದ ಪ್ರತಿನಿಧಿ ಮೊಹಮ್ಮದ್ ಆಲಿ ಹೇಳಿದರು. ಮಡಿಕೇರಿಯ ತನಲ್ ಆಶ್ರಮದ 8ನೇ ವಾರ್ಷಿಕ ಮಹಾಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ತನಲ್ ಸೇವಾ ಕೇಂದ್ರಗಳ ಅಧೀನದಲ್ಲಿ ದೇಶಾದ್ಯಾಂತ ಮೂರು ಲಕ್ಷದಷ್ಟು ಜನರು ಆಶ್ರಯ ಪಡುತ್ತಿದ್ದಾರೆ. 1330 ಶಾಲೆಗಳು ತನಲ್ ಆದೀನದಲ್ಲಿ ಕಾರ್ಯಚರಿಸುತ್ತಿದ್ದು, ಇನ್ನು ಅನೇಕ ಜನ ಹಸಿವು, ಬಡತನದಿಂದ ಬದುಕು ಸಾಗಿಸುತ್ತಿದ್ದಾರೆ ಎಂದು ಹೇಳಿದರು. ಅಧ್ಯಕ್ಷ ಮೊಹಮ್ಮದ್ ಮುಸ್ತಫ ತನಲ್ ಆಶ್ರಮದ ಪ್ರಾರಂಭ ಹಾಗೂ ಅದರ ಕಾರ್ಯಚಟುವಟಿಕೆಗಳ ಬಗ್ಗೆ ತಿಳಿಸಿ, ಎಲ್ಲರನ್ನು ಸ್ವಾಗತಿಸಿದರು. ಅಬ್ದುಲಾ ಕಾರ್ಯಕ್ರಮ ನಿರೂಪಿಸಿದರು. ಪ್ರಧಾನ ಕಾರ್ಯದರ್ಶಿ ಬಾಳೆಯಡ ದಿವ್ಯ ವಾರ್ಷಿಕ ವರದಿಯನ್ನು ಮಂಡಿಸಿದರು. ಕೋಶಾಧಿಕಾರಿ ಕರಾಮತ್ತುಲ್ಲಾ ಖಾನ್ ವರ್ಷದ ಲೆಕ್ಕಾಚಾರವನ್ನು ಮಂಡಿಸಿದರು. ಮುಹೀನ ಅಬೂಬಕ್ಕರ್ ವಂದಿಸಿದರು. :: ಸನ್ಮಾನ :: ತನಲ್ ಆಶ್ರಮ ಸಮಿತಿಯಲ್ಲಿ ಪ್ರಾರಂಭದಿಂದ ಇದುವರೆಗೂ ಸೇವೆ ಸಲ್ಲಿಸುತ್ತಿರುವ ಹಿರಿಯ ವೈಕ್ತಿ ಬಾಬುಚಂದ್ರ ಉಳ್ಳಾಗಡಿ ವಿವೇಕಾನಂದ ಸಂಸ್ಥೆಯಿಂದ ನಿರಂತರವಾಗಿ ಶುಷ್ರೂಷೆ ಹಾಗೂ ಸೇವೆಯನ್ನು ಸಲ್ಲಿಸುತ್ತಿರುವ ಮೌನ ಹಾಗೂ ಶೋಭಾ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ, ಗೌರವಿಸಲಾಯಿತು. :: ನೂತನ ಸಮಿತಿ ಅಸ್ತಿತ್ವಕ್ಕೆ :: ಅಧ್ಯಕ್ಷರಾಗಿ ಮೊಹಮ್ಮದ್ ಮುಸ್ತಫ, ಪ್ರಧಾನ ಕಾರ್ಯದರ್ಶಿಯಾಗಿ ಬಾಳೆಯಡ ದಿವ್ಯಾ, ಕೋಶಾಧಿಕಾರಿಯಾಗಿ ಖರಾಮತ್ತುಲ್ಲಾ ಖಾನ್ ಅವರನ್ನು ಈ ಹಿಂದಿನಂತೆ ಮುಂದುವರೆಸಲು ತೀರ್ಮಾನಿಸಲಾಗಿದ್ದು, ಕಾರ್ಯಕಾರಿ ಸಮಿತಿಗಾಗಿ ಐದು ಜನ ಮಹಿಳೆಯರು ಸೇರಿದಂತೆ ಒಟ್ಟು ಹದಿಮೂರು ಜನ ಸದಸ್ಯರನ್ನು ಆಯ್ಕೆ ಮಾಡಲಾಯಿತು.











