ನವದೆಹಲಿ NEWS DESK ಡಿ.25 : ಥಾಯ್ಲೆಂಡ್ ಮತ್ತು ಕಾಂಬೋಡಿಯಾ ದೇಶಗಳ ನಡುವಿನ ಗಡಿ ಸಂಘರ್ಷ ವಿವಾದಿತ ಪ್ರದೇಶದಲ್ಲಿರುವ ಪ್ರಸಕ್ತ ಕಾಂಬೋಡಿಯಾ ಗಡಿಯೊಳಗೆ ಬರುವ 9 ಮೀಟರ್ (ಸುಮಾರು 30 ಅಡಿ) ಎತ್ತರದ ವಿಷ್ಣುವಿನ ವಿಗ್ರಹವನ್ನು ಥಾಯ್ಲೆಂಡ್ ಸೇನೆ ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದೆ. ಇದು ಇತ್ತೀಚಿನ ದಿನಗಳಲ್ಲಿ ಹಿಂದೂ ಮತ್ತು ಬೌದ್ಧರ ಪ್ರಮುಖ ಪ್ರಾರ್ಥನಾ ಸ್ಥಳವಾಗಿ ಹೊರಹೊಮ್ಮಿತ್ತು. ಆದರೆ ಈ ಪ್ರದೇಶ ತನಗೆ ಸೇರಿದ್ದೆಂದು ವಾದಿಸುತ್ತಿರುವ ಥಾಯ್ಲೆಂಡ್ ಸೇನೆ ವಿಗ್ರಹವನ್ನು ಬೀಳಿಸಿದೆ. ಈ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ.










