ನಾಪೋಕ್ಲು ಡಿ.27 NEWS DESK : ಭಾಗಮಂಡಲದಲ್ಲಿ ಶ್ರೀ ಅಯ್ಯಪ್ಪ ಸ್ವಾಮಿಯ 43ನೇ ವರ್ಷದ ಮಂಡಲ ಪೂಜೆಯು ಶ್ರದ್ಧಾಭಕ್ತಿಯಿಂದ ನೆರವೇರಿತು. ವರ್ಷಂಪ್ರತಿ ಆಚರಿಸಿಕೊಂಡು ಬರುವಂತೆ ಈ ವರ್ಷವು ಶ್ರೀ ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆಯ ಶೋಭಾ ಯಾತ್ರೆ, ಸಿಂಗಾರಿ ಮೇಳ ಸೇರಿದಂತೆ ವಿವಿಧ ಪೂಜಾ ವಿಧಿ ವಿಧಾನಗಳು ಜೊತೆ ಅದ್ದೂರಿಯಿಂದ ಜರುಗಿತು. ಗುರುಸ್ವಾಮಿಗಳಾದ ಸಿ.ಆರ್ ಜಯನ್ ಮತ್ತು ಹೆಚ್.ಎಸ್.ವಸಂತ್ ಅವರ ನೇತೃತ್ವದಲ್ಲಿ ಭಾಗಮಂಡಲದ ತಲಕಾವೇರಿ ರಸ್ತೆಯ ಬದಿಯಲ್ಲಿರುವ ಅಯ್ಯಪ್ಪ ಬನದಲ್ಲಿ ಪೂಜೆ ಪ್ರಾರಂಭಿಸಿ ನಂತರ ಸಿಂಗಾರಿ ಮೇಳದೊಂದಿಗೆ ಶ್ರೀ ಅಯ್ಯಪ್ಪ ಸ್ವಾಮಿಯ ಶೋಭಾ ಯಾತ್ರೆಯು ಭಾಗಮಂಡಲದ ಮುಖ್ಯರಸ್ತೆಯಲ್ಲಿ ಸಾಗಿ ಬಂದು ಶ್ರೀ ಭಗಂಡೇಶ್ವರ ದೇವಾಲಯದ ಮುಂಭಾಗದಲ್ಲಿ ಮಂಡಲ ಪೂಜಾ ನೆರವೇರಿತು,ಈ ಸಂದರ್ಭ ಭಕ್ತಾದಿಗಳೆಲ್ಲರೂ ಶ್ರೀ ಅಯ್ಯಪ್ಪ ಸ್ವಾಮಿಯ ಕೃಪೆಗೆ ಪಾತ್ರರಾಗಿ ಪ್ರಸಾದ ವಿತರಣೆ ಮತ್ತು ಅನ್ನದಾನದಲ್ಲಿ ಪಾಲ್ಗೊಂಡರು. ಮಂಡಲ ಪೂಜೆಯಲ್ಲಿ ಭಾಗಮಂಡಲ, ಕರಿಕೆ ಅಯ್ಯಂಗೇರಿ, ದೊಡ್ಡಪುಲಿಕೊಟ್ಟು, ನಾಪೋಕ್ಲು, ಬೆಟ್ಟಗೇರಿ, ಚೆರಂಬಾಣೆ ಅಕ್ಕಪಕ್ಕದ ಊರುಗಳಿಂದ ಅಯ್ಯಪ್ಪ ಸ್ವಾಮಿ ಮಾಲಾದಾರಿಗಳು ಮತ್ತು ಭಕ್ತಾದಿಗಳು ಭಾಗವಹಿಸಿದರು.
ವರದಿ : ರಾಜೇಂದ್ರ












