
ಮಡಿಕೇರಿ ಜ.7 NEWS DESK : ಕೇರಳದ ಬೈತೂರಿನ ಉತ್ಸವಕ್ಕೆ ಕೊಡಗಿನ ಭಕ್ತ ಜನರನ್ನು ಆಹ್ವಾನಿಸಲು ಬೈತೂರು ದೇವಾಲಯದಿಂದ ಕೋಮರತಚ್ಚನ್ ಕೊಡಗು ಜಿಲ್ಲೆಗೆ ಆಗಮಿಸಿದ್ದಾರೆ. ಜ.7 ರಂದು ಮಡಿಕೇರಿಯ ಶ್ರೀ ಓಂಕಾರೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದರು. ಇದೇ ಸಂದರ್ಭ ಜಿಲ್ಲಾಧಿಕಾರಿಗಳನ್ನು ಕೂಡ ಭೇಟಿಯಾದರು. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಚುಮ್ಮಿ ದೇವಯ್ಯ ಮತ್ತಿತರರು ಉಪಸ್ಥಿತರಿದ್ದರು. ಜ.9 ರವರೆಗೆ ಕೊಡಗಿನ ವಿವಿಧ ದೇವಾಲಯಗಳು ಹಾಗೂ ಐನ್ ಮನೆಗೆ ಭೇಟಿ ನೀಡಲಿದ್ದಾರೆ.









