
ಸುಂಟಿಕೊಪ್ಪ ಜ.10 NEWS DESK : ಮಕ್ಕಳು ಕಷ್ಟಪಟ್ಟು ವಿದ್ಯೆಯನ್ನು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವ ಮೂಲಕ ತಾವು ಕಲಿತ ಶಾಲೆಗೆ ಮತ್ತು ಶಿಕ್ಷಕ ವೃಂದಕ್ಕೆ ಗೌರವ ತರುವ ಮಾಡಬೇಕೆಂದು ಮಾಜಿ ಶಾಸಕ ಎಂ.ಪಿ.ಅಪ್ಪಚ್ಚು ರಂಜನ್ ಕರೆ ನೀಡಿದರು. ಸುಂಟಿಕೊಪ್ಪ ಸಂತ ಅಂತೋಣಿ ಶಾಲೆಯ ವಿದ್ಯಾರ್ಥಿಗಳಿಗೆ ದಾನಿಗಳ ನೆರವಿನಿಂದ ನೀಡಲಾಗುತ್ತಿರುವ ಸ್ವಟರ್ ವಿತರಣೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು. ಶೈಕ್ಷಣಿಕ ವರ್ಷದಲ್ಲಿ 30 ಸಾವಿರ ಸ್ವೆಟರ್‍ಗಳ ವಿತರಣೆಯನ್ನು ಹಮ್ಮಿಕೊಂಡಿದ್ದು, ಮೊದಲ ಹಂತದಲ್ಲಿ ಸರಕಾರಿ ಶಾಲೆಗಳನ್ನು ಆಯ್ದುಕೊಂಡಿದ್ದೇವೆ. ನಂತರ ಅನುದಾನಿತ ಮತ್ತು ಖಾಸಗಿ ಶಾಲೆಗಳಿಗೂ ವಿತರಣೆ ಮಾಡುವ ಯೋಜನೆಯನ್ನು ಹಾಕಿಕೊಂಡಿದ್ದೇವೆ. ಮುಂದಿನ ದಿನಗಳಲ್ಲಿ ಬ್ಯಾಗ್‍ಗಳನ್ನು ಕೂಡ ವಿತರಿಸುವ ಯೋಜನೆಯನ್ನು ಹಮ್ಮಿಕೊಂಡಿದ್ದೇವೆ ಎಂದು ಅಪ್ಪಚ್ಚು ರಂಜನ್ ತಿಳಿಸಿದರು. ಸರಕಾರಿ ಶಾಲೆಗಳಲ್ಲಿ ಕಲಿತು ಬದುಕು ಕಟ್ಟಿಕೊಂಡವರು ನಾವು ಕಲಿತ ಶಾಲೆಯನ್ನು ಮರೆಯಬಾರದೆಂದು ಹೇಳಿದÀರು. ಸಾಧ್ಯವಾದಷ್ಟು ಸಹಾಯ ಮಾಡಬೇಕೆಂದು ಸಲಹೆ ನೀಡಿದರು. ನಂತರ ಕೊಡಗರಹಳ್ಳಿಯ ಶಾಂತಿನಿಕೇತನ ಶಾಲೆ, 7ನೇ ಹೊಸಕೋಟೆಯ ದೀಪ್ತಿ ಶಾಲೆಗೆ ಸ್ವೆಟರ್ ವಿತರಣೆ ಮಾಡಿದರು. ಈ ಸಂದರ್ಭ ಸುಂಟಿಕೊಪ್ಪ ಗ್ರೇಡ್-1 ಗ್ರಾ.ಪಂ ಅಧ್ಯಕ್ಷರಾದ ಪಿ.ಆರ್.ಸುನಿಲ್‍ಕುಮಾರ್, ಕೊಡಗರಹಳ್ಳಿ ಗ್ರಾ.ಪಂ.ಅಧ್ಯಕ್ಷೆ ನಿರುತ ಬೆಳ್ಯಪ್ಪ, 7ನೇ ಹೊಸಕೋಟೆ ಗ್ರಾ.ಪಂ ಇ.ಬಿ.ಜೋಸೆಫ್, ಉಪಾಧ್ಯಕ್ಷರು ಮತ್ತು ಸದಸ್ಯರುಗಳು, ಮಂಡಲ ಅಧ್ಯಕ್ಷ ಗೌತಮ್, ಯುವಮೋರ್ಚಾ ಅಧ್ಯಕ್ಷ ಚಂದ್ರಶೇಖರ್ ಹೆರೂರು, ಸುಂಟಿಕೊಪ್ಪ ನಗರಾಧ್ಯಕ್ಷ ಧನು ಕಾವೇರಪ್ಪ, ದಾಸಂಡ ರಮೇಶ್, ಸಹದೇವನ್, ಮುರುಗನ್ ಹೊಸಕೋಟೆ, ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಜೆಸಿಂತ ಜೋವಿಟಾ ವಾಸ್, ಕೊಡಗರಹಳ್ಳಿ ಶಾಂತಿನೀಕೇತನ ಶಾಲೆಯ ಮುಖ್ಯೋಪಾದ್ಯಾಯನಿ ಕವಿತ, ದೀಪ್ತಿ ಶಾಲೆಯ ಮುಖ್ಯೋಪಾದ್ಯಾಯನಿ ಸಿಸ್ಟರ್ ಟೆಸ್ಸಿ ಮ್ಯಾನುವೆಲ್ ಹಾಗೂ ಸಹ ಶಿಕ್ಷಕರು ಇದ್ದರು.









