
ಮಡಿಕೇರಿ ಜ.16 NEWS DESK : ಜಿಲ್ಲೆಯ ಅಮ್ಮತ್ತಿ, ಪಾಲಿಬೆಟ್ಟ ಮತ್ತು ಚೆನ್ನಯ್ಯನ ಕೋಟೆ ಪೊಲೀಸ್ ಉಪ ಠಾಣೆಗಳಿಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದುಮಣಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಠಾಣೆಗಳ ಕಾರ್ಯ ಚಟುವಟಿಕೆಗಳನ್ನು ಪರಿಶೀಲಿಸಿ ಅಧಿಕಾರಿ ಮತ್ತು ಸಿಬ್ಬಂದಿ ವರ್ಗದವರೊಂದಿಗೆ ಸಭೆ ನಡೆಸಿದರು. ಈ ಸಂದರ್ಭ ಉಪ ಠಾಣಾ ವ್ಯಾಪ್ತಿಯ ಕಾನೂನು ಸುವ್ಯವಸ್ಥೆ, ಅಪರಾಧ ತಡೆಗಟ್ಟುವಿಕೆ ಮುಂತಾದ ವಿಚಾರಗಳ ಬಗ್ಗೆ ಉಪ ಠಾಣಾ ಸಿಬ್ಬಂದಿಗಳಿಗೆ ಸೂಚನೆಗಳನ್ನು ನೀಡಲಾಯಿತು.









