
ಮಡಿಕೇರಿ ಜ.16 NEWS DESK : ಕೊಡುಗು ಗೌಡ ಹಿತ ರಕ್ಷಣಾ ಸಮಿತಿ ವತಿಯಿಂದ ಕೊಡಗು ಜಿಲ್ಲೆಯ ನೂತನ ಜಿಲ್ಲಾಧಿಕಾರಿ ಎಸ್.ಜೆ.ಸೋಮಶೇಕರ್ ಹಾಗೂ ನೂತನ ಪೊಲೀಸ್ ವರಿಷ್ಠಾಧಿಕಾರಿ ಆರ್.ಎನ್.ಬಿಂದು ಮಣಿಯ ಅವರನ್ನು ಅಭಿನಂದಿಸಲಾಯಿತು. ಜಿಲ್ಲಾಧಿಕಾರಿಗಳ ಕಚೇರಿ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಗೆ ಭೇಟಿ ನೀಡಿದ ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರು ಹೂವಿನ ಗುಚ್ಛ ನೀಡಿ ಸ್ವಾಗತಿಸಿದರು. ಈ ಸಂದರ್ಭ ಸಮಿತಿಯ ಪದಾಧಿಕಾರಿಗಳಾದ ಪಿ.ಎಲ್.ಸುರೇಶ, ಪರ್ಮಲೆ ಗಣೇಶ, ದಂಬೆಕೋಡಿ ರಶ್ಮಿ, ದಂಬೆಕೋಡಿ ಕವನಾ ಬಿಷ್ಮ, ಪೂಜಾರಿರ ಪ್ರದೀಪ ಕುಮಾರ್, ಬಂಗಾರ ಕೋಡಿ ತುಳಸಿ ಗಾಂಧಿ ಪ್ರಸಾದ್, ಪಟ್ಟಡ ದೀಪಕ್, ಡೆಮ್ಮೆಲೆ ರಿತೀನ್, ಪೂಜಾರಿರ ದ್ರುವ, ಕವನ್ ಕೊತ್ತೋಳಿ ಹಾಗೂ ಪ್ರಮುಖರು ಹಾಜರಿದ್ದರು.









