
ಸುಂಟಿಕೊಪ್ಪ ಜ.22 NEWS DESK : ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಲಿಕಾ ಹಬ್ಬವು ನಡೆಯಿತು. ಸುಂಟಿಕೊಪ್ಪ ಕ್ಲಸ್ಟರ್ ಕೇಂದ್ರದ ವ್ಯಾಪ್ತಿಯ ಸರಕಾರಿ ಮಾದರಿ ಕಲಿಕಾ ಹಬ್ಬ ನಡೆಯಿತು. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಭಾಷೆ ಮತ್ತು ಗಣಿತದ ವಿಷಯಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ವಿಜೇತರಿಗೆ ಬಹುಮಾನ ವಿತರಿಸಲಾಯಿತು. ಸಮಾರಂಭದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಪಿ.ಆರ್.ಸುನಿಲ್ ಕುಮಾರ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ವಿ.ಜೆ.ಲೋಕೇಶ್, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಹೆಚ್.ಯು.ರಫೀಕ್‍ಖಾನ್, ಶಾಲಾ ಮುಖ್ಯೋಪಾದ್ಯಾಯರಾದ ಪಿ.ಇ.ನಂದ ಸಹಶಿಕ್ಷಕಿ ಸೌಭಾಗ್ಯ, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿಯಾದ ಸೀಮಾ, ಸರಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಉಪ ಪ್ರಾಂಶುಪಾಲರಾದ ಬಾಲಕೃಷ್ಣ ಶಿಕ್ಷಕರು ಪೋಷಕರು ಪಾಲ್ಗೊಂಡಿದ್ದರು.









