
ನಾಪೋಕ್ಲು ಜ.22 NEWS DESK : ಮೂರ್ನಾಡು ಸರ್ಕಾರಿ ಪ್ರೌಢಶಾಲೆ ಮೈದಾನದಲ್ಲಿ ಗ್ರಾಮ ಪಂಚಾಯತಿ ಹಾಗೂ ಸಂಘ ಸಂಸ್ಥೆಗಳ ಸಹಯೋಗದಿಂದ ನೂತನವಾಗಿ ನಿರ್ಮಿಸಿದ ಸುಸಜ್ಜಿತ ಶೌಚಾಲಯವನ್ನು ಲೋಕಾರ್ಪಣೆಗೊಳಿಸಲಾಯಿತು. ಮೂರ್ನಾಡು ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘ, ಆಪ್ತಮಿತ್ರ ಬಳಗ, ಗಜಾನನ ಯುವಕ ಸಂಘ ಹಾಗೂ ಕಾಂತೂರ್ ಮೂರ್ನಾಡು ಗ್ರಾಮ ಪಂಚಾಯತ್ ಜೊತೆಗೂಡಿ ಕಟ್ಟಿಸಿ ಸುಸಜ್ಜಿತ ಶೌಚಾಲಯವನ್ನೂ ಗಣ್ಯರು ಉದ್ಘಾಟನೆ ಮಾಡಿ ಶಾಲೆಗೆ ಹಸ್ತಾಂತರಿಸಿದರು. ಕಾರ್ಯಕ್ರಮದಲ್ಲಿ ಸರಕಾರಿ ಪ್ರೌಢಶಾಲೆ ನಿವೃತ್ತ ಮುಖ್ಯೋಪಾಧ್ಯಾಯರಾದ ಗುರುರಾಜ್ ಮಾತನಾಡಿ, ಮೂರು ಸಂಘಗಳು ನಮ್ಮ ಶಾಲೆಗೆ ಉಪಯೋಗವಾಗುವಂತ ಕೆಲಸಗಳನ್ನು ಮಾಡಿಕೊಟ್ಟಿದೆ ಹಾಗೂ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ತಮ್ಮ ಶಕ್ತಿಗೆ ಮೀರಿ ನಮ್ಮ ಶಾಲೆಗೆ ಉಪಯುಕ್ತ ಕೆಲಸಗಳನ್ನು ಮಾಡಿಕೊಟ್ಟಿದನ್ನು ಸ್ಮರಿಸಿ ಇದೇ ರೀತಿ ನಮ್ಮ ಶಾಲೆಗೆ ಬೆಂಬಲವಾಗಿ ಕೈಜೋಡಿಸುತ್ತಾ ನಮ್ಮೊಂದಿಗೆ ಇರಬೇಕೆಂದು ತಿಳಿಸಿದರು. ಎಲ್ಲಾ ಸಂಘದ ಅಧ್ಯಕ್ಷರಿಗೂ ಹಾಗೂ ಪಂಚಾಯತಿ ಅಧ್ಯಕ್ಷರು ಉಪಾಧ್ಯಕ್ಷರು ಪಿಡಿಓ ಹಾಗೂ ಸದಸ್ಯರು ಗಳಿಗೆ ಧನ್ಯವಾದ ತಿಳಿಸಿದರು. ಗ್ರಾಮ ಪಂಚಾಯತಿ ಅಧ್ಯಕ್ಷ ಬಿ.ಎಸ್.ಕುಶಾನ್ ರೈ, ಉಪಾಧ್ಯಕ್ಷರಾದ ಬಿ.ಎಸ್.ರೇಖಾ, ಪಂಚಾಯತಿ ಅಭಿವೃದ್ಧಿ ಅಧಿಕಾರಿ ಕೆ.ಎಂ.ಚಂದ್ರಮೌಳಿ ಹಾಗೂ ಪಂಚಾಯತಿ ಸದಸ್ಯರು, ಆಪ್ತಮಿತ್ರ ಬಳಗದ ಅಧ್ಯಕ್ಷ ಚಂದ್ರಶೇಖರ್ ಕುಳಾಲ್ ಪದಾಧಿಕಾರಿಗಳು ಹಾಗೂ ಸದಸ್ಯರು, ತ್ರಿನೇತ್ರ ವಾಹನ ಮಾಲೀಕರ ಹಾಗೂ ಚಾಲಕರ ಸಂಘದ ಅಧ್ಯಕ್ಷ ಸಜನ್ ಗಣಪತಿ, ಪದಾಧಿಕಾರಿಗಳು ಹಾಗೂ ಸದಸ್ಯರು, ಗಜಾನನ ಯುವಕ ಸಂಘದ ಅಧ್ಯಕ್ಷ ನವೀನ್ ಪದಾಧಿಕಾರಿಗಳು ಹಾಗೂ ಸದಸ್ಯರು, ಸುರೇಶ್ ಮುತ್ತಪ್ಪ, ಸರ್ಕಾರಿ ಪ್ರೌಢಶಾಲೆ ಮುಖ್ಯ ಶಿಕ್ಷಕಿ ದೇಚಮ್ಮ,, ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಉಪಸಿತರಿದ್ದರು.
ವರದಿ : ದುಗ್ಗಳ ಸದಾನಂದ.









