
ಮಡಿಕೇರಿ ಜ.22 NEWS DESK : ಅಂತರರಾಷ್ಟ್ರೀಯ ಶೋಲಿಂಗ್ ಕುಂಗ್ಫು ಸಂಸ್ಥೆಯ ವತಿಯಿಂದ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಶಾಲೆಯಲ್ಲಿ ನಡೆದ ಕರಾಟೆ ಪರೀಕ್ಷೆಯಲ್ಲಿ ಚೇರಂಬಾಣೆಯ ಶ್ರೀ ರಾಜ ರಾಜೇಶ್ವರಿ ಶಾಲೆಯ ವಿದ್ಯಾರ್ಥಿಗಳ ಸಾಧನೆ ಮಾಡಿದ್ದಾರೆ. ಶಾಲೆಯ ಒಂಭತ್ತನೇ ತರಗತಿಯ ವಿದ್ಯಾರ್ಥಿಗಳಾದ ಅಂಕಿತ್ ಬಿ.ಎ. ಬ್ಲಾಕ್ ಬೆಲ್ಟ್ ಪ್ರಥಮ ಡಿಗ್ರಿ, ಲಕ್ಷಣ್ ಕೆ.ಎ ಹಾಗೂ ಮೋನಿಷ್ ಮುತ್ತಣ್ಣ ಬ್ಲ್ಯಾಕ್ ಬೆಲ್ಟ್ ಪಡೆದುಕೊಂಡಿರುತ್ತಾರೆ. ಪರೀಕ್ಷೆಯಲ್ಲಿ ಒಟ್ಟು ಮೂವತ್ಮೂರು ವಿದ್ಯಾರ್ಥಿಗಳು ಭಾಗವಹಿಸಿದ್ದು, ಹನ್ನೊಂದು ವಿದ್ಯಾರ್ಥಿಗಳು ಹಳದಿ, ಎಂಟು ವಿದ್ಯಾರ್ಥಿಗಳು ಅರೇಂಜ್, ಒಬ್ಬ ವಿದ್ಯಾರ್ಥಿ ಹಸಿರು, ಏಳು ವಿದ್ಯಾರ್ಥಿಗಳು ನೀಲಿ, ಆರು ವಿದ್ಯಾರ್ಥಿಗಳು ಬ್ರೌನ್ ಬೆಲ್ಟ್ ಪಡೆದು ಸಾಧನೆ ಮಾಡಿದ್ದಾರೆ. ಈ ಸಂದರ್ಭ ಪರೀಕ್ಷಾರ್ಥಿಗಳಾಗಿ ಇಂಡಿಯನ್ ಗ್ರ್ಯಾಂಡ್ ಮಾಸ್ಟರ್ ಶಿಫು ಇಂದ್ರಜಿತ್, ಇಂಡಿಯನ್ ತರಬೇತುದಾರರಾದ ದೇವರಾಜ್, ಕೊಡಗು ಜಿಲ್ಲೆಯ ತರಬೇತುದಾರರಾದ ವೇಣು ಗೋಪಾಲ್, ಕರ್ನಾಟಕ ರಾಜ್ಯದ ತರಬೇತುದಾರರಾದ ನಾಟೋಳಂಡ ನಂಜುಂಡ ಪಾಲ್ಗೊಂಡಿದ್ದರು. ಉತ್ತಿರ್ಣರಾದ ವಿದ್ಯಾರ್ಥಿಗಳನ್ನು ವಿದ್ಯಾಸಂಸ್ಥೆಯ ವ್ಯವಸ್ಥಾಪಕರಾದ ನಾಟೋಳಂಡ ವಿಜು ಹಾಗೂ ಮುಖ್ಯ ಶಿಕ್ಷಕರಾದ ಕುದುಪಜೆ ಕವನ್ ಅಭಿನಂದಿಸಿದರು.









